ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ನಡೆದ ಭೀಕರ ಅಪಘಾಥದಲ್ಲಿ ರಂಗಭೂಮಿ ಕಲಾವಿದ ಇರಕಸಂದ್ರ ಜಗನ್ನಾಥ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಸಮಾರಂಭವೊಂದರಲ್ಲಿ ಭಾಗವಹಿಸಲು ಶಿರಾ ಕಡೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದ ನಡೆದಿರೋ ಅಪಘಾತ
ತುಮಕೂರು (ಆ.7) : ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ನಡೆದ ಭೀಕರ ಅಪಘಾಥದಲ್ಲಿ ರಂಗಭೂಮಿ ಕಲಾವಿದ ಇರಕಸಂದ್ರ ಜಗನ್ನಾಥ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಸಮಾರಂಭವೊಂದರಲ್ಲಿ ಭಾಗವಹಿಸಲು ಶಿರಾ ಕಡೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದ ಇರಕಸಂದ್ರ ಜಗನ್ನಾಥ್. ಕಳ್ಳಂಬೆಳ ಟೋಲ್‍ಗೇಟ್ ಬಳಿ ನೀರು ಕುಡಿಯುವ ಸಲುವಾಗಿ ಕಾರು ನಿಲ್ಲಿಸಿ ಕೆಳಗಿಳಿದಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಪ್ರಾಣಬಿಟ್ಟ ರಂಗಕಲಾವಿದ.
undefined
ಅಪಘಾತ ಸ್ಥಳಕ್ಕೆ ಪರಿಶೀಲನೆ ನಡೆಸಿ ಮೃತದೇಹ ಶಿರಾ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಅಪಘಾತ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೌರಾಣಿಕ ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸುತ್ತಿದ್ದ ಇರಕಸಂದ್ರ ಜಗನ್ನಾಥ್(Iraksandra jagannath theater artst). ಕಳೆದ ವರ್ಷ ಮೈಸೂರು ದಸರಾದಲ್ಲಿಯೂ ನಾಟಕ ಪ್ರದರ್ಶನ ನೀಡಿದ್ದ ಮೆಚ್ಚುಗೆ ಗಳಿಸಿದ್ದ ಜಗನ್ನಾಥ್. ರಸ್ತೆ ಅಪಘಾತಕ್ಕೆ ಬಲಿಯಾಗಿರುವುದು ರಂಗಕಲಾವಿದರಿಗೆ ಅರಗಿಸಿಕೊಳ್ಳಲಾಗದ ಘಟನೆ ಜಗನ್ನಾಥ್ ಅವರ ಸಾವು ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ.
ಬಳ್ಳಾರಿ ಕೆಎಸ್‌ಆರ್‌ಟಿಸಿ ಡಿವಿಜನಲ್ ಸೆಕ್ಯುರಿಟಿ ಇನ್‌ಸ್ಪೆಕ್ಟರ್ ಅನುಮಾನಾಸ್ಪದ ಸಾವು
ಯುವತಿ ಸೇರಿ ನಾಲ್ವರು ನಾಪತ್ತೆ
ಕುಣಿಗಲ್: ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿ ಸೇರಿದಂತೆ ನಾಲ್ವರು ನಾಪತ್ತೆ ಆಗಿರುವ ಸಂಬಂಧ ವಿವಿಧ ಪ್ರಖರಣಗಳು ದಾಖಲಾಗಿವೆ
ಈ ಸಂಬಂಧ ಕುಣಿಗಲ್ ಪೊಲೀಸರು ತನಿಖೆ ಆರಂಭಿಸಿದ್ದು , ನಾಪತ್ತೆ ಆಗಿರುವ ವ್ಯಕ್ತಿಗಳ ಸುಳಿವು ಕಂಡಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಿಪಿಐ ನವೀನ್ ಗೌಡ ಮನವಿ ಮಾಡಿದ್ದಾರೆ.
ನಾಪತ್ತೆ ವಿವರ: ಕುಣಿಗಲ್ ಪಟ್ಟಣದ ಕೆಆರ್‌ಎಸ್ ಅಗ್ರಹಾರದ ವಾಸಿಯಾದ ತಿಮ್ಮಮ್ಮ(71) ಎಂಬ ವೃದ್ಧೆ ಜುಲೈ 4 ರಂದು ಮನೆಯಿಂದ ಕಾಣೆಯಾಗಿದ್ದಾರೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಖರಣ ದಾಖಲಾಗಿದೆ.
ಪಟ್ಟಣದ ಕೆಆರ್‌ಎಸ್ ಅಗ್ರಹಾರದ ವಾಸಿ ಕೆ.ಎಸ್.ಕುಮಾರಸ್ವಾಮಿ ಅವರ ಮಗಳಾದ ಯಶಸ್ವಿನಿ ಕೆ.ಎಸ್. ಆಗಸ್ಟ್ 2 ರಂದು ತಂದೆಯ ಮನೆಯಿಂದ ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೋದವಳು ಪುನಃ ಮನೆಗೆ ಬಂದಿಲ್ಲ. ಈ ಸಂಬಂಧ ತಾಯಿ ತಾರಾದೇವಿ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಖರಣ ದಾಖಲಾಗಿದೆ. ಯುವತಿ ಇವರೆಗೂ ಪತ್ತೆ ಆಗಿಲ್ಲ.
ಮಡಿಕೇರಿಯಿಂದ ನಾಪತ್ರೆಯಾಗಿದ್ದ ಇಬ್ಬರು ಯುವತಿಯರು ಮಲ್ಪೆ ಸಮುದ್ರ ಪಾಲು!
ತಾಲೂಕಿನ ಹುತ್ರಿ ದುರ್ಗ ಹೋಬಳಿಯ ಕಾಡರಾಮನಹಳ್ಳಿ ಗ್ರಾಮದ ವಾಸಿ, ನಂಜುಂಡಯ್ಯ (74) ಎಂಬುವರು ತನ್ನ ವಾಸದ ಮನೆಯಿಂದ ಮೇ 14ರಂದು ನಾಪತ್ತೆಯಾಗಿದ್ದಾರೆ. ಮಗ ಶಿವರುದ್ರಯ್ಯ ನೀಡಿದ ದೂರಿನ ಹಿನ್ನೆಲೆಯಲ್ಲಿ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಣಿಗಲ್ ಪಟ್ಟಣದ ದೊಡ್ಡಕೆರೆ ಏರಿಯ ಪಾರ್ಕ್ ನಿರ್ವಹಣೆ ಮಾಡುತ್ತಿದ್ದ ತಿಪ್ಪಸಂದ್ರ ಗ್ರಾಮದ ವಾಸಿ, ಸೀತಯ್ಯ (72) ಡಿಸೆಂಬರ್ 14 ರಂದು ನಾಪತ್ತೆಯಾಗಿದ್ದಾರೆ. ಇದುವರೆಗೂ ಪತ್ತೆ ಆಗಿಲ್ಲ ಮೇಲ್ಕಂಡ ವ್ಯಕ್ತಿಗಳ ಬಗ್ಗೆ ಮಾಹಿತಿ ಕಂಡಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಿಪಿಐ ನವೀನ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ