ಜಿಲ್ಲೆಯ ಕೆಎಸ್‌ಆರ್‌ಟಿಸಿ ಡಿವಿಜನಲ್ ಸೆಕ್ಯೂರಿಟಿ ಇನ್ಸ್ ಪೆಕ್ಟರ್ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಕೇಂದ್ರ ಕಾರಾಗೃಹದ ಬಳಿ ನಡೆದಿದೆ
ಬಳ್ಳಾರಿ (ಆ.7): ಜಿಲ್ಲೆಯ ಕೆಎಸ್‌ಆರ್‌ಟಿಸಿ ಡಿವಿಜನಲ್ ಸೆಕ್ಯೂರಿಟಿ ಇನ್ಸ್ ಪೆಕ್ಟರ್ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಕೇಂದ್ರ ಕಾರಾಗೃಹದ ಬಳಿ ನಡೆದಿದೆ
ಹುಸೇನಪ್ಪ(54) ಸಾವಿಗಿಡಾದ ಸೆಕ್ಯೂರಿಟಿ ಇನ್ಸ್ ಪೆಕ್ಟರ್. ಕಳೆದ 20 ವರ್ಷಗಳಿಂದ ಕರ್ತವ್ಯ ನರ್ವಹಿಸುತ್ತಿದ್ದ ಹುಸೇನಪ್ಪ. ಚಾಲಕರ ನೇಮಕಾತಿ ಪರೀಕ್ಷೆ ಹಿನ್ನೆಲೆ ಬಳ್ಳಾರಿಯಿಂದ ಬೀದರ್ ಗೆ ತೆರಳಲು ತಮ್ಮ ನಿವಾಸದಿಂದ ಬೈಕ್ ನಲ್ಲಿ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾಗ ದುರಂತ. ಅಪಘಾತವಾಯಿತಾ ಕೊಲೆಯಾಯಿತಾ ನಿಗೂಢವಾಗಿ ಉಳಿದಿದೆ. ಕೇಂದ್ರ ಕಾರಾಗೃಹದ ಬಳಿ ಬೈಕ್ ಹಾಗೂ ಹುಸೇನಪ್ಪನ ಮೃತದೇಹ ರಾತ್ರಿ ಪತ್ತೆಯಾಗಿದೆ. ತಲೆಯಲ್ಲಿ ಗಾಯಗಳಾಗಿ ತೀವ್ರ ರಕ್ತಸ್ರಾವ ಹಿನ್ನೆಲೆ ಸ್ಥಳದಲ್ಲೇ ಸಾವು.
undefined
ಕೊಲೆ ಎಂದು ಸ್ಥಳೀಯರ ಆರೋಪ
ಇದು ಅಪಘಾತ ಅಲ್ಲ ಕೊಲೆ ಎನ್ನುತ್ತಿರುವ ಸ್ಥಳೀಯರು. ಯಾರೋ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆಗೈದು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಘಟನೆ ಸ್ಥಳಕ್ಕೆ ಎಸ್ ಪಿ ರಂಜಿತ್ ಕುಮಾರ್ ಬಂಡಾರು, ಕೆಎಸ್ಆರ್‌ಟಿಸಿ ಡಿಸಿ ದೇವರಾಜ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಗಾಂಧಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.