ಜೋಯಿಡಾದ ಕುಣಬಿ ಜನಾಂಗದವರೊಂದಿಗೆ ದಿನವಿಡೀ ಕಾಲ ಕಳೆದ ನಟ ರಿಷಬ್ ಶೆಟ್ಟಿ ಮರಾಠಿ ಮಿಶ್ರಿತ ಕೊಂಕಣಿ ಭಾಷೆಯನ್ನೂ ಕಲಿಯುವ ಪ್ರಯತ್ನ ಮಾಡಿದರು. ಕೆಲವು ಶಬ್ದಗಳನ್ನು ಕಲಿತು ಅವರೊಂದಿಗೆ ಸಂವಹನಕ್ಕೆ ಬಳಸುತ್ತ ಸ್ಥಳೀಯರ ಪ್ರೀತಿಗೆ ಪಾತ್ರರಾದರು.
ಕಾರವಾರ (ಜೂ.07): ಜೋಯಿಡಾದ ಕುಣಬಿ ಜನಾಂಗದವರೊಂದಿಗೆ ದಿನವಿಡೀ ಕಾಲ ಕಳೆದ ನಟ ರಿಷಬ್ ಶೆಟ್ಟಿ ಮರಾಠಿ ಮಿಶ್ರಿತ ಕೊಂಕಣಿ ಭಾಷೆಯನ್ನೂ ಕಲಿಯುವ ಪ್ರಯತ್ನ ಮಾಡಿದರು. ಕೆಲವು ಶಬ್ದಗಳನ್ನು ಕಲಿತು ಅವರೊಂದಿಗೆ ಸಂವಹನಕ್ಕೆ ಬಳಸುತ್ತ ಸ್ಥಳೀಯರ ಪ್ರೀತಿಗೆ ಪಾತ್ರರಾದರು. ರಿಷಬ್ ಜೊತೆ ಫೋಟೋಕ್ಕಾಗಿ ನಿಂತಾಗ ಬಾಲಕಿಯೊಬ್ಬಳು ಬೇರೆಡೆ ನೋಡುತ್ತಿದ್ದಳು.
ಆಗ ಆಕೆಯ ತಾಯಿ ಹಾಂಗ್ ಪೊಳೆ (ಇಲ್ಲಿ ನೋಡು) ಎಂದಾಗ ರಿಷಬ್ ಹಾಗೆಂದರೆ ಏನು ಎಂದು ಕೇಳಿ ತಿಳಿದುಕೊಂಡು, ‘ಅಲ್ಲಿ ನೋಡು ಹೇಳಲು ಏನು ಹೇಳುತ್ತಾರೆ’ ಎಂದು ಕೇಳಿದರು. ‘ಆಗ ತೈ ಪೊಳೆ ಎನ್ನುತ್ತಾರೆ’ ಎಂದರು. ನಂತರ ರಿಷಬ್ ತಮ್ಮ ಜೊತೆ ಫೋಟೋ ಶೂಟ್‌ಗೆ ನಿಂತವರಿಗೆಲ್ಲ ತೈ ಪೊಳೆ, ಹಾಂಗ್ ಪೊಳೆ ಎನ್ನುತ್ತ ಅವರದ್ದೇ ಭಾಷೆಯಲ್ಲಿ ಹೇಳತೊಡಗಿದರು. ಮತ್ತೂ ಕೆಲವು ಶಬ್ದಗಳನ್ನು ಕೇಳಿ ತಿಳಿದುಕೊಂಡರು.
ಬೆಂಗಳೂರಿನಲ್ಲಿ ನೀರು ಬಳಕೆ ಶುಲ್ಕ ಶೀಘ್ರ ಏರಿಕೆ?: ಡಿ.ಕೆ.ಶಿವಕುಮಾರ್
ಮಗಲ್ ನಾವ್ ರಿಷಬ್!: ಪಾತಾಗುಡಿಯಲ್ಲಿ ಹಿರಿಯರೊಬ್ಬರು ಬಂದು ‘ತುಗೆಲ್ ನಾವ್ ಕಿತೆ’ (ನಿನ್ನ ಹೆಸರೇನು?) ಎಂದು ಕೇಳಿದಾಗ ಅರ್ಥವಾಗದೆ ರಿಷಬ್ ಏನು ಹೇಳುತ್ತಿದ್ದಾರೆ, ಎಂದು ಕೇಳಿ ತಿಳಿದು ಕೊಂಡರು. ಅದಕ್ಕೆ ಉತ್ತರಿಸುವ ಕ್ರಮವನ್ನೂ ಕೇಳಿಕೊಂಡು ‘ಮಗಲ್ ನಾವ್ ರಿಷಬ್ ಶೆಟ್ಟಿ’ ಎಂದರು.
ಕೊಂಕಣಿ ಬಾರದೆ ಗೊಂದಲ: ಜೋಯಿಡಾದ ದಟ್ಟಡವಿಯಲ್ಲಿರುವ ಕುಣಬಿ ಜನಾಂಗದವರಿಗೆ ಕನ್ನಡ ಬಾರದು. ಅವರೇನಿದ್ದರೂ ತಮ್ಮದೇ ಆದ ಮರಾಠಿ ಮಿಶ್ರಿತ ಕೊಂಕಣಿ ಭಾಷೆಯಲ್ಲಿ ಮಾತ ನಾಡುತ್ತಾರೆ. ರಿಷಬ್ ಅವರ ಜೊತೆಗೂ ಅದೇ ಭಾಷೆಯಲ್ಲಿ ಮಾತನಾಡುತ್ತಿದ್ದರು. ಆದರೆ ಅವರು ಏನು ಹೇಳುತ್ತಿದ್ದಾರೆಂದು ತಿಳಿಯದೆ ರಿಷಬ್ ಗೊಂದಲಕ್ಕೊಳಗಾಗುತ್ತಿದ್ದರು. ನಂತರ ಅವರ ಭಾಷೆಯ ಒಂದೊಂದೇ ಶಬ್ದಗಳನ್ನು ಕೇಳಿ ತಿಳಿದು ಅವರೊಂದಿಗೆ ಮಾತನಾಡತೊಡಗಿದ್ದು ಅಚ್ಚರಿ ಮೂಡಿಸಿತು.
ವಿವಾದಿತ ಪಠ್ಯ ಕೈಬಿಡಲು ರಾಜ್ಯ ಸರ್ಕಾರ ನಿರ್ಧಾರ: ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಆದೇಶ
ಸರಳತೆ ಮೆರೆದ ನಟ: ಶಾಲಾ ಮಕ್ಕಳೊಂದಿಗೆ ರಿಷಬ್ ಶೆಟ್ಟಿಆತ್ಮೀಯವಾಗಿ ಬೆರೆತರು. ಪಾತಾಗುಡಿಯಲ್ಲಿ ಅವರ ಬೇಡಿಕೆಯಂತೆ ಕುಣಬಿ ಜನಾಂಗದ ಮನೆಯೊಳಕ್ಕೆ ತೆರಳಿ ವೀಕ್ಷಿಸಿ ದರು. ಸಿಮೆಂಟು, ಕಾಂಕ್ರೀಟು, ಟೈಲ್ಸ್ ಕಾಣದ ಮನೆಯಲ್ಲಿ ನೆಲದಲ್ಲಿ ಕುಳಿತು ಊಟ ಮಾಡಿ ಸರಳತೆ ಮೆರೆದರು. ಪ್ರತಿಯೊಬ್ಬರನ್ನೂ ಮಾತನಾಡಿಸಿ ಮನಗೆದ್ದರು.