ರಿಕ್ಕಿ ರೈ ಪ್ರಕರಣ: ವಿದೇಶದಿಂದಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ ಅನುರಾಧಾ!

Published : Apr 21, 2025, 05:58 PM ISTUpdated : Apr 21, 2025, 07:28 PM IST
ರಿಕ್ಕಿ ರೈ ಪ್ರಕರಣ: ವಿದೇಶದಿಂದಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ ಅನುರಾಧಾ!

ಸಾರಾಂಶ

ರಿಕ್ಕಿ ರೈ ಗುಂಡಿನ ದಾಳಿ ಪ್ರಕರಣದಲ್ಲಿ ಮುತ್ತಪ್ಪ ರೈ ಪತ್ನಿ ಅನುರಾಧ ಸೇರಿ ನಾಲ್ವರ ವಿರುದ್ಧ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅನುರಾಧ ವಿದೇಶಕ್ಕೆ ಪರಾರಿಯಾಗಿದ್ದು, ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸರು ಮುತ್ತಪ್ಪ ರೈ ನಿವಾಸದಲ್ಲಿ ತೀವ್ರ ತನಿಖೆ ನಡೆಸುತ್ತಿದ್ದು, ಸಿಸಿಬಿ ಕೂಡ ತನಿಖೆಗೆ ಸೇರ್ಪಡೆಯಾಗಿದೆ. ರಿಕ್ಕಿ ರೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಾಳಿಕೋರರ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ರಿಕ್ಕಿ ರೈ ಅವರ ಕಾರು ಚಾಲಕ ಜಿ. ಬಸವರಾಜು ನೀಡಿದ ದೂರಿನ ಮೇರೆಗೆ ಮುತ್ತಪ್ಪ ರೈಗೆ ಆಪ್ತವಾಗಿದ್ದ ರಾಕೇಶ್ ಮಲ್ಲಿ, ರೈ ಅವರ ಎರಡನೇ ಪತ್ನಿ ಅನುರಾಧ, ನಿತೇಶ್ ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ, ವೈದ್ಯನಾಥನ್ ಹಾಗೂ ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೆಲ್ಲದರ ಮಧ್ಯೆ ಬಿಡದಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ಎಸ್ ಪಿ , ಇಬ್ಬರು ಎ ಎಸ್ ಪಿ, ಮೂವರು ಡಿವೈಎಸ್ ಪಿ 10 ಜನ ಇನ್ಪೆಕ್ಟರ್ ಗಳ ತಂಡ ಚಾಲಕ ಬಸವರಾಜ್ ಹಾಗು ಗನ್ ಮ್ಯಾನ್ ರಾಜ್ ಪಾಲ್ ರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.  ಮುತ್ತಪ್ಪ ರೈ ನಿವಾಸದ ಸಿಸಿ ಕ್ಯಾಮರ ಡಿವಿಆರ್ ವಶಪಡಿಸಿಕೊಂಡಿರುವ ಪೊಲೀಸರು ಮನೆಯಲ್ಲಿರುವ ಕೆಲಸಗಾರರನ್ನು ಒಬ್ಬೊಬ್ಬರನ್ನೇ ವಿಚಾರಣೆ ನಡೆಸುತ್ತಿದ್ದಾರೆ.

ವಿದೇಶದಲ್ಲಿದ್ದ ರಿಕ್ಕಿ ರೈ ಬೆಂಗಳೂರಿಗೆ ಬಂದಿರುವುದು ಹಂತಕರಿಗೆ ತಿಳಿದಿದ್ದೇಗೆ?

ಮುತ್ತಪ್ಪ ರೈ ಮನೆಯಲ್ಲಿದ್ದ ಗನ್ ಹಾಗು ಬುಲೆಟ್ ಗಳ ಸಂಖ್ಯೆ ಪರಿಶೀಲನೆ ಮಾಡಲಾಗುತ್ತಿದೆ. ಮುತ್ತಪ್ಪ ರೈ ಇದ್ದಾಗ ಬಳಸುತ್ತಿದ್ದ ಗನ್ ಗಳೆಷ್ಟು? ಈಗ ಇರುವ ಗನ್ ಗಳೆಷ್ಟು ? ಬಳಕೆಯಾದ ಗುಂಡುಗಳು, ಯಾವ ಕಾರಣಕ್ಕೆ ಬಳಕೆ ಮಾಡಲಾಗಿದೆ? ಎಂದು ಎಲ್ಲಾ ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಗನ್ ಮ್ಯಾನ್ ಗಳಿಂದಲೂ ಮಾಹಿತಿ  ಸಂಗ್ರಹಿಸಿದ್ದು, ಗನ್ ಗಳ ಲೈಸೆನ್ಸ್ ಕೂಡ ಚೆಕ್ ಮಾಡಿದ್ದು, ಲೈಸನ್ಸ್ ಇಲ್ಲದ ಗನ್ ಇದ್ಯಾ ಎಂದು ಪರಿಶೀಲನೆ ಮಾಡಿದ್ದಾರೆ. 

ಇನ್ನು ಈ ಪ್ರಕರಣದಲ್ಲಿ A2 ಆರೋಪಿಯಾಗಿರುವ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ಏಪ್ರಿಲ್ 14 ರಂದೇ ವಿದೇಶಕ್ಕೆ ತೆರಳಿದ್ದಾರೆಂದು ತಿಳಿದುಬಂದಿದೆ. ಅನುರಾಧ ಬಳಸುತ್ತಿದ್ದ ಸಿಮ್ ಅಡ್ರೆಸ್ ಹುಡುಕಿ ನೋಟೀಸ್ ನೀಡಲು ಪೊಲೀಸರು ತೆರಳಿದ್ದರು. ಆದರೆ ಸಿಮ್ ಅಡ್ರೆಸ್ ಇರುವ ಮನೆಯನ್ನು ಅನುರಾಧ ಮಾರಾಟ ಮಾಡಿದ್ದಾರೆ. ಅಮೇರಿಕ ಮೂಲದ ವ್ಯಕ್ತಿಗೆ ಮನೆ ಮಾರಾಟ ಮಾಡಿದ್ದು, ಈ ಮನೆ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿದೆ. ಹೀಗಾಗಿ ಮೊದಲೇ ಪ್ಲಾನ್ ಮಾಡಿ ಅನುರಾಧ ಮನೆ ಮಾರಾಟ ಮಾಡಿದ್ರಾ ಎಂದು ಅನುಮಾನ ಮೂಡಿದೆ. ಏಪ್ರಿಲ್ 14ರ ರಾತ್ರಿ ಕೆಂಪೇಗೌಡ  ವಿಮಾನ ನಿಲ್ದಾಣದಲ್ಲಿ ಅನುರಾಧ ಬಳಸುತ್ತಿದ್ದ ಮೊಬೈಲ್ ಕೊನೆ ಲೊಕೇಶನ್ ತೋರಿಸುತ್ತಿದೆ.

ರಿಕ್ಕಿ ರೈ ಪ್ರಕರಣ, ಮುತ್ತಪ್ಪ ರೈ ಪತ್ನಿ ಸೇರಿ ನಾಲ್ವರ ವಿರುದ್ಧ FIR!

ಇದೀಗ ಪ್ರಕರಣದ ಎಫ್ಐಆರ್ ಸಂಬಂಧ ಜರ್ಮನಿಯಲ್ಲಿರುವ ಅನುರಾಧ  ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.ತಮ್ಮ ವಕೀಲರ ಮೂಲಕ  ಹೈಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಪ್ರಕರಣದ ಎ1 ಆರೋಪಿ ರಾಕೇಶ್ ಮಲ್ಲಿ ಮುಂಬೈನಲ್ಲಿರುವ ಶಂಕೆ ವ್ಯಕ್ತವಾಗಿದೆ. ಎ3 ಆರೋಪಿ ನಿತೀಶ್ ಶೆಟ್ಟಿ, ಎ4 ಆರೋಪಿ ವೈದ್ಯನಾಥನ್ ನಾಳೆ ವಕೀಲರ ಮೂಲಕ ವಿಚಾರಣೆಗೆ ಹಾಜರಾಗೋ ಸಾಧ್ಯತೆ ಇದೆ.

ಇನ್ನು ದುಷ್ಕರ್ಮಿಯ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಕ್ಕಿ ರೈ ಅವರನ್ನು ಭೇಟಿಯಾಗಿ ರಾಮನಗರ ಉಪವಿಭಾಗ ಡಿವೈಎಸ್ಪಿ ಪಿ.ಶ್ರೀನಿವಾಸ್ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಭಾನುವಾರ ಮಧ್ಯಾಹ್ನ 12.30ಕ್ಕೆ ಆಸ್ಪತ್ರೆಗೆ  ತೆರಳಿದ ಡಿವೈಎಸ್ಪಿ ಶ್ರೀನಿವಾಸ್ ರವರು ರಿಕ್ಕಿ ರೈರವರ ಆರೋಗ್ಯ ವಿಚಾರಿಸಿ ಆನಂತರ ಘಟನೆ ಕುರಿತು ಮಾಹಿತಿ  ಪಡೆದರು. ಈ ವೇಳೆ ಕಾರು ಚಾಲಕ ಬಸವರಾಜು ಎಫ್ಐಆರ್ ನಲ್ಲಿ ಉಲ್ಲೇಖಿಸಿರುವಂತೆ ರಾಕೇಶ್ ಮಲ್ಲಿ, ಅನುರಾಧ ರೈತ, ನಿತೀಶ್ ಸೆಟ್ಟಿ, ವೈದ್ಯನಾಥನ್ ಹೆಸರನ್ನು ಪ್ರಸ್ತಾಪ ಮಾಡಿದ್ದರು ಎನ್ನಲಾಗಿದೆ.

ವಿದೇಶದಿಂದ ಬೆಂಗಳೂರಿಗೆ ಬಂದಾಗ ಸದಾಶಿವನಗರ ಹಾಗೂ ಬಿಡದಿಯಲ್ಲಿ ಹೆಚ್ಚಾಗಿ ಇರುತ್ತೇನೆ. ಬಿಡದಿಯಿಂದ ಸದಾಶಿವನ ನಗರ ಮನೆಗೆ ಹೋಗುವಾಗ ಅಟ್ಯಾಕ್ ಮಾಡಲಾಗಿದೆ. ನನ್ನ ಸ್ನೇಹಿತರು ಮತ್ತು ಚಾಲಕ ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ರಿಕ್ಕಿರೈ ತಿಳಿಸಿದ್ದಾರೆ.

ಪೊಲೀಸರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿರುವ ರಿಕ್ಕಿ ರೈರವರು ರಾಕೇಶ್ ಮಲ್ಲಿ ಮತ್ತು ನನ್ನ ಚಿಕ್ಕಮ್ಮ ಅನುರಾಧ ರೈ ಅವರೇ ಅಟ್ಯಾಕ್ ಮಾಡಿಸಿದ್ದಾರೆ ಎಂದು ಪುನರುಚ್ಛಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಿಡದಿ ನಿವಾಸದಲ್ಲಿ ಇಂಚಿಂಚೂ ಪರಿಶೀಲನೆ:
ಮುತ್ತಪ್ಪ ರೈ ನಿವಾಸದ ಗೇಟ್ ನಿಂದ ಸ್ವಲ್ಪ ದೂರದಲ್ಲಿ ರಿಕ್ಕಿ ರೈ ಮೇಲೆ ಫೈರಿಂಗ್ ನಡೆದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶ್ವಾನದಳ ಹಾಗೂ ಮೆಟಲ್ ಡಿಟೆಕ್ಟರ್ ಮೂಲಕ ಫಾರ್ಮ್ ಹೌಸ್ ಒಳಭಾಗದಲ್ಲಿ ಪರಿಶೀಲನೆ ನಡೆಸಿದರು.

ರಿಕ್ಕಿ ರೈ ಮೇಲೆ ಶಾಪ್ ಶೂರ್ಟರ್ ಎರಡು ಸುತ್ತಿನ ಫೈರಿಂಗ್ ನಡೆದಿತ್ತು. ಘಟನೆ ಮರು ದಿನ ಒಂದು ಗುಂಡಿನ ಕಾಟ್ರೇಜ್ ಪತ್ತೆಯಾಗಿತ್ತು. ಮತ್ತೊಂದು ಗುಂಡಿನ ಕಾಟ್ರೇಜ್ ಪತ್ತೆಯಾಗಿಲ್ಲ. ಹೀಗಾಗಿ 20ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿ ತಪಾಸಣೆಯಲ್ಲಿ ತೊಡಗಿದ್ದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸುರೇಶ್ ,ರಾಮಚಂದ್ರಯ್ಯ ಹಾಗೂ ಒಬ್ಬೊಬ್ಬ ಇನ್ಸ್ ಪೆಕ್ಟರ್ ಗಳಿಗೆ ಒಂದೊಂದು ಜವಾಬ್ದಾರಿ ವಹಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡರವರು ತನಿಖೆ ಚುರುಕುಗೊಳಿಸಿದ್ದಾರೆ.

ಸಿಸಿಬಿ ಪೊಲೀಸರ ಎಂಟ್ರಿ!
ರಿಕ್ಕಿ ರೈ ಮೇಲಿನ ಶೂಟೌಟ್ ಪ್ರಕರಣ ಪೊಲೀಸರ ಪಾಲಿಗೆ ಕಗ್ಗಂಟಾಗಿರುವ ಕಾರಣ ಸಿಸಿಬಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಈ ದಾಳಿ ಹಿಂದೆ ಭೂಗತ ಲೋಕದ ನಂಟಿರುವ ಶಂಕೆ ವ್ಯಕ್ತವಾಗಿರುವುದರಿಂದ ಅದರ ಆಯಾಮದಲ್ಲಿ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದು, ಗೌಪ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿ ಪತ್ತೆಯಾದ ಬಳಿಕ ಮೊದಲು ತಾವು ವಶಕ್ಕೆ ಪಡೆದು ಆನಂತರ ರಾಮನಗರ ಪೊಲೀಸರಿಗೆ ಸಿಸಿಬಿ ಪೊಲೀಸರು ಒಪ್ಪಿಸಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌