ಉಗ್ರ ನಂಟಲ್ಲಿ ಸೆರೆಯಾದ ರಿಹಾನ್‌ ತಂದೆಗೆ ಕಾಂಗ್ರೆಸ್‌ ನಂಟು: ಶಾಸಕ ರಘುಪತಿ ಭಟ್‌

By Govindaraj S  |  First Published Jan 7, 2023, 1:06 PM IST

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ಅಧಿಕಾರಿಗಳಿಂದ ಬಂಧಿತನಾಗಿರುವ ಮಂಗಳೂರಿನ ಎಂಜಿನಿಯರಿಂಗ್‌ ವಿದ್ಯಾರ್ಥಿ ರಿಹಾನ್‌ ಶೇಖ್‌, ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್‌ ಅವರ ಮಗ.


ಉಡುಪಿ (ಜ.07): ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ಅಧಿಕಾರಿಗಳಿಂದ ಬಂಧಿತನಾಗಿರುವ ಮಂಗಳೂರಿನ ಎಂಜಿನಿಯರಿಂಗ್‌ ವಿದ್ಯಾರ್ಥಿ ರಿಹಾನ್‌ ಶೇಖ್‌, ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್‌ ಅವರ ಮಗ. ಈ ಪ್ರಕರಣದಿಂದಾಗಿ ಕಾಂಗ್ರೆಸ್‌ ಪಕ್ಷದ ಬೇರುಗಳು ಎಲ್ಲೆಲ್ಲಿ ಹರಡಿಕೊಂಡಿವೆ ಎಂಬುದು ಬಹಿರಂಗವಾಗಿದೆ. ಈ ಬಗ್ಗೆ ಕಾಂಗ್ರೆಸ್‌ ನಾಯಕರು ಸ್ಪಷ್ಟನೆ ನೀಡಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್‌ ಆಗ್ರಹಿಸಿದ್ದಾರೆ. ಉಡುಪಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 

ಈ ತಾಜುದ್ದೀನ್‌, ಉಳ್ಳಾಲ ಶಾಸಕ ಯು.ಟಿ.ಖಾದರ್‌ ಅವರ ಪರಮಾಪ್ತ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಜೊತೆ ತಾಜುದ್ದೀನ್‌ ಇರುವ ಫೋಟೋಗಳಿವೆ. ನಿಖರ ಪುರಾವೆಗಳಿರುವುದರಿಂದಲೇ ಎನ್‌ಐಎ ರಿಹಾನ್‌ನನ್ನು ಬಂಧಿಸಿದೆ. ಈಗ ಕಾಂಗ್ರೆಸ್‌ ತಾಜುದ್ದೀನ್‌ ಮೇಲೆ ಏನು ಕ್ರಮ ಕೈಗೊಳ್ಳುತ್ತದೆ?. ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಪ್ರಮೋಷನ್‌ ಕೊಟ್ಟು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡುತ್ತದೆಯೋ? ಅಥವಾ ಪಕ್ಷದಿಂದ ಉಚ್ಚಾಟನೆ ಮಾಡುತ್ತದೆಯೋ? ಎಂದು ಪ್ರಶ್ನಿಸಿದರು. ರಿಹಾನ್‌ ತಾಯಿಯ ಮೇಲೆಯೂ ಸಾಕಷ್ಟು ದೂರುಗಳಿವೆ. 

Tap to resize

Latest Videos

undefined

ಸಿಬಿಐಯನ್ನು ಛೂ ಬಿಟ್ರು ಬಿಜೆಪಿಯವರು: ಜನಾರ್ದನ ರೆಡ್ಡಿ

ಅವರು ಇಲ್ಲಿನ ತೆಂಕನಿಡಿಯೂರು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕಿ, ಈಕೆ ಕಾಲೇಜಿನ ಬಗ್ಗೆ ನೆಗೆಟಿವ್‌ ಪ್ರಚಾರ ಮಾಡಿದ್ದರು. ಕಾಲೇಜಿಗೆ ವಿದ್ಯಾರ್ಥಿಗಳು ದಾಖಲಾಗಬೇಡಿ ಎಂದು ಹೇಳಿರುವ, ಪ್ರಧಾನಿ ಮೋದಿ ಬಗ್ಗೆ ಅವಹೇಳನಕರ ಮಾತುಗಳನ್ನು ಆಡಿರುವ ಬಗ್ಗೆ ವಾಯ್‌್ಸ ರೆಕಾರ್ಡ್‌ ನಮಗೆ ಸಿಕ್ಕಿದೆ. 3 ತಿಂಗಳ ಹಿಂದೆಯೇ ಈಕೆಯ ಬಗ್ಗೆ ಶಿಕ್ಷಣ ಸಚಿವ ನಾಗೇಶ್‌ ಅವರಿಗೆ ದಾಖಲೆಯೊಂದಿಗೆ ಲಿಖಿತ ದೂರು ನೀಡಿದ್ದೇನೆ ಎಂದು ಅವರು ಹೇಳಿದರು.

ಶಂಕಿತ ಉಗ್ರನ ಹಣಕಾಸು ವ್ಯವಹಾರದ ಬಗ್ಗೆಯೂ ತನಿಖೆ ಮಾಡಿ: ರಿಹಾನ್‌ ಶೇಖ್‌, ಮಂಗಳೂರು ಸ್ಫೋಟಕ್ಕೆ ಸಂಬಂಧಿಸಿ ಕೊರಿಯರ್‌ಗಳನ್ನು ತನ್ನ ಹೆಸರಿನಲ್ಲಿ ಬ್ರಹ್ಮಾವರದಲ್ಲಿರುವ ತನ್ನ ಫ್ಲಾಟ್‌ಗೆ ತರಿಸಿಕೊಳ್ಳುತ್ತಿದ್ದ. ಜೊತೆಗೆ, ಆನ್‌ಲೈನ್‌ ಹಣದ ವ್ಯವಹಾರ ಕೂಡ ನಡೆಸುತ್ತಿದ್ದ. ಚಪ್ಪಲಿ ಅಂಗಡಿ ನಡೆಸುತ್ತಿದ್ದ ಆತನ ತಂದೆ ತಾಜುದ್ದೀನ್‌, ಈ ಹಿಂದೆ ನಷ್ಟದಿಂದ ಸಂಕಷ್ಟಕ್ಕೆ ಸಿಕ್ಕಿದ್ದ. ಈಗ ಪ್ಲಾಟ್‌ ಖರೀದಿಸುವಷ್ಟುಶ್ರೀಮಂತನಾಗಿದ್ದಾನೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್‌ 80 ಸ್ಥಾನವನ್ನೂ ಗೆಲ್ಲಲ್ಲ: ಕೆಜಿಎಫ್‌ ಬಾಬು

ಡಿಕೆಶಿ ಮಾತಿನ ಮರ್ಮ ಬಹಿರಂಗ: ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಗುರವಾಗಿ ಮಾತನಾಡಿದ್ದರು. ಅದರ ಹಿಂದಿನ ಮರ್ಮ ಈಗ ಬಹಿರಂಗವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್‌ ಎಂಬವರ ಮಗ ರಿಹಾನ್‌ ಶೇಖ್‌ನನ್ನು ಎಎನ್‌ಐ ಬಂಧಿಸಿದೆ. ಕಾಂಗ್ರೆಸ್‌ ಭಯೋತ್ಪಾದಕರಿಗೆ ಬೆಂಬಲ ನೀಡುವ ಪಕ್ಷ ಎಂಬುದು ಸಾಬೀತಾಗಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಹೇಳಿದ್ದಾರೆ.

click me!