ದೂರದಿಂದ ನೋಡಿದರೆ ಎತ್ತಿನ ಭುಜದ ಆಕಾರದಲ್ಲಿ ಕಾಣುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನ ಭುಜ ಪ್ರವಾಸಿ ತಾಣಕ್ಕೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜೂ.21): ದೂರದಿಂದ ನೋಡಿದರೆ ಎತ್ತಿನ ಭುಜದ ಆಕಾರದಲ್ಲಿ ಕಾಣುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನ ಭುಜ ಪ್ರವಾಸಿ ತಾಣಕ್ಕೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಮಲೆನಾಡ ಮಳೆಗೆ ಜಿಲ್ಲೆಯ ಪ್ರವಾಸಿ ತಾಣಗಳು ತನ್ನ ನೈಜ ಸೊಬಗನ್ನ ಅನಾವರಣಗೊಳಿಸಿವೆ. ಅದರಂತೆ ಎತ್ತಿನಭುಜ ಪ್ರವಾಸಿತಾಣ ಕೂಡ ನೈಜ ಸೊಬಗಿನಿಂದ ಕಂಗೊಳಿಸುತ್ತಿದೆ. ಜೊತೆಗೆ, ಪ್ರವಾಸಿಗರಿಗೆ ಚಾರಣಕ್ಕೆ ಹೋಗಲು ಕೂಡ ಈ ಪ್ರದೇಶ ನೆಚ್ಚಿನ ತಾಣವಾಗಿದೆ.
undefined
ಎತ್ತಿನಭುಜಕ್ಕೆ ಪ್ರವಾಸಿಗರ ಲಗ್ಗೆ: ಕಳೆದ ಶನಿವಾರದಿಂದ ಸೋಮವಾರದವರೆಗೆ ಮೂರು ದಿನದಲ್ಲಿ 20,000ಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಕಳೆದ ಕೆಲ ತಿಂಗಳ ಹಿಂದೆ ಅರಣ್ಯ ಸಚಿವ ಈಶ್ವರ ಖಂಡ್ರೆ ರಾಜ್ಯದ ಪ್ರವಾಸಿ ತಾಣಗಳಿಗೆ ಆನ್ಲೈನ್ ಟಿಕೆಟ್ ಮೂಲಕ ದಿನಕ್ಕೆ ನಿರ್ದಿಷ್ಟ ಪ್ರವಾಸಿಗರಿಗೆ ಮಾತ್ರ ಅವಕಾಶ ಕಲ್ಪಿಸಬೇಕೆಂದು ಸೂಚನೆ ನೀಡಿದ್ದರು. ಆದರೆ, ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹಿಗ್ಗಿಲ್ಲದೆ ಭೇಟಿ ನೀಡುತ್ತಿದ್ದಾರೆ. ಸಾಲದ್ದಕ್ಕೆ, ಎತ್ತಿನ ಭುಜದ ಕಿರಿದಾದ ಪ್ರದೇಶದಲ್ಲೂ ಕೂಡ ಪ್ರವಾಸಿಗರು ಟ್ರಕ್ಕಿಂಗ್ ಹೋಗುತ್ತಿದ್ದಾರೆ. ಭಾರೀ ಗಾಳಿ. ಆಗಾಗ್ಗೆ ಸುರಿಯುವ ಮಳೆ. ಮಂಜು. ಜಾರಿಕೆ ಮಧ್ಯೆ ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದು ಪರಿಸರ ಪ್ರೇಮಿಗಳು, ಸ್ಥಳೀಯರು ಪ್ರಶ್ನೆ ಮಾಡಿದ್ದರು.ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲೂ ಸಮಗ್ರ ವರದಿ ಪ್ರಸಾರವಾಗಿತ್ತು.
ಸಿಎಸ್‌ಆರ್ ನಿಧಿಯಿಂದ ಪಬ್ಲಿಕ್ ಶಾಲೆಗಳ ಅಭಿವೃದ್ಧಿ: ಸಚಿವ ಮಧು ಬಂಗಾರಪ್ಪ
ಪ್ರವಾಸಿಗರ ಸುರಕ್ಷತೆಯ ಹಿತ ದೃಷ್ಟಿಯಿಂದ ಬ್ರೇಕ್: ಸರ್ಕಾರ ಆನ್ಲೈನ್ ಟಿಕೆಟ್ ಮೂಲಕ ಪ್ರವಾಸಿಗರು ಹೋಗಬೇಕೆಂಬ ನಿಯಮವಿದ್ದರೂ ಪ್ರವಾಸಿ ತಾಣಗಳಲ್ಲಿನ ಜನಜಂಗುಳಿ ಕಂಡು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮದ ಎಚ್ಚರಿಕೆ ನೀಡಿದೆ. ಹಾಗಾಗಿ, ಅರಣ್ಯ ಇಲಾಖೆ ಮುಂಜಾಗ್ರತ ಕ್ರಮವಾಗಿ ಎತ್ತಿನ ಭುಜ ಪ್ರದೇಶದಲ್ಲಿ ಟ್ರಕಿಂಗ್ ಹೋಗುವ ಪ್ರವಾಸಿಗರ ಸುರಕ್ಷತೆಯ ಹಿತ ದೃಷ್ಟಿಯಿಂದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕಾಮಗಾರಿ ಅನುಷ್ಠಾನ ಗೊಳ್ಳಲಿರುವ ಕಾರಣ ಎತ್ತಿನ ಭುಜಕ್ಕೆ ಮುಂದಿನ ಆದೇಶದವರೆಗೂ ಅರಣ್ಯ ಇಲಾಖೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ.