ಜನರ ವಿಭಜಿಸಲು ಬಿಜೆಪಿಯಿಂದ ಮೀಸಲಾತಿ ಬಳಕೆ: ಸುರ್ಜೇವಾಲಾ

By Kannadaprabha NewsFirst Published Feb 19, 2021, 12:23 PM IST
Highlights

ಮೀಸಲಾತಿ ನೀಡುವುದು ಕೇಂದ್ರ ಸರ್ಕಾರದ ಅಧಿಕಾರ| ರಾಜ್ಯ ಸರ್ಕಾರ ತಾನು ನುಣುಚಿಕೊಳ್ಳಲು ಇದೀಗ ಮೀಸಲಾತಿ ಹಂಚಿಕೆಗೆ ಮತ್ತೊಂದು ಆಯೋಗ ರಚಿಸಿ ಆದೇಶ ಹೊರಡಿಸಿದೆ| ಯಡಿಯೂರಪ್ಪ ಹಾಗೂ ನರೇಂದ್ರ ಮೋದಿ  ಎಸ್‌ಸಿ-ಎಸ್‌ಟಿ ಹಾಗೂ ಒಬಿಸಿಯ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಯಾವಾಗ ಭರ್ತಿ ಮಾಡುತ್ತಾರೆ?: ಸುರ್ಜೇವಾಲಾ|  

ಬೆಂಗಳೂರು(ಫೆ.19): ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಹೀಗಾಗಿ ಅರ್ಹರಿಗೆ ಮೀಸಲಾತಿಯ ಫಲ ನೀಡದೆ ಜನರನ್ನು ವಿಭಜಿಸಲು ಮಾತ್ರ ಮೀಸಲಾತಿಯನ್ನು ಬಳಸಿಕೊಳ್ಳುತ್ತಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಆರೋಪಿಸಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟ ಹಾಗೂ ಸಿದ್ದರಾಮಯ್ಯ ಅವರ ಹಿಂದ ಹೋರಾಟದ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೀಸಲಾತಿ ನೀಡುವುದು ಕೇಂದ್ರ ಸರ್ಕಾರದ ಅಧಿಕಾರ. ಆದರೆ ತಾನು ನುಣುಚಿಕೊಳ್ಳಲು ಇದೀಗ ಮೀಸಲಾತಿ ಹಂಚಿಕೆಗೆ ಮತ್ತೊಂದು ಆಯೋಗವನ್ನು ರಚಿಸಿ ಆದೇಶ ಹೊರಡಿಸಿದೆ.

ಕೈ ತೊರೆದು ಜೆಡಿಎಸ್‌ನತ್ತ ಹೊರಟ ನಾಯಕ: ಮನವೊಲಿಕೆಗೆ ಉಸ್ತುವಾರಿ ಅಖಾಡಕ್ಕೆ

ಅಲ್ಲದೆ ಜನರನ್ನು ಒಗ್ಗಟ್ಟನ್ನು ಒಡೆಯಲು ಮುಂದಾಗಿದ್ದು, ಮೀಸಲಾತಿಯನ್ನು ಅರ್ಹರಿಗೆ ತಲುಪದಂತೆ ನೋಡಿಕೊಳ್ಳುತ್ತಿದೆ. ಕಳೆದ ಆರು ವರ್ಷದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿಯ ಒಬ್ಬರಿಗೂ ಮೀಸಲಾತಿ ಆಧಾರದ ಮೇಲೆ ಹೆಚ್ಚುವರಿಯಾಗಿ ಕೆಲಸ ನೀಡಿಲ್ಲ. ಉದ್ಯೋಗ ಸೃಷ್ಟಿಯಂತಹ ಯಾವುದೇ ಕ್ರಮ ಕೈಗೊಳ್ಳದೆ ಮೀಸಲಾತಿಯನ್ನು ಜನರಿಗೆ ತಲುಪದಂತೆ ಮಾಡುತ್ತಿದೆ ಎಂದು ಕಿಡಿ ಕಾರಿದರು.

ನರೇಂದ್ರ ಮೋದಿ ಸರ್ಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿತ್ತು. ಆದರೆ ಎಲ್ಲಾ ಇಲಾಖೆಗಳಲ್ಲೂ ಹುದ್ದೆಗಳನ್ನು ಕಡಿತಗೊಳಿಸುತ್ತಿದ್ದಾರೆ. ಜೊತೆಗೆ ಸರ್ಕಾರಿ ಉದ್ಯೋಗಿಗಳ ವೇತನ, ಭತ್ಯೆಗಳನ್ನು ಕಡಿತಗೊಳಿಸುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಸ್‌ಸಿ-ಎಸ್‌ಟಿ ಹಾಗೂ ಒಬಿಸಿಯ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಯಾವಾಗ ಭರ್ತಿ ಮಾಡುತ್ತಾರೆ ಎಂದು ಪ್ರಶ್ನಿಸಬೇಕು ಎಂದು ಕರೆ ನೀಡಿದರು.

 

click me!