ನಿರ್ಮಾಪಕ ಸೌಂದರ್ಯ ಜಗದೀಶ್ ಬಳಿಯಿಂದ ಪವಿತ್ರಾ ಗೌಡ 1.75 ಕೋಟಿ ರೂಪಾಯಿ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಇದೀಗ ರೇಣುಕಾಸ್ವಾಮಿ ಪ್ರಕರಣದ ಚಾರ್ಜ್ ಶೀಟ್ ಸೌಂದರ್ಯ ಜಗದೀಶ್ ಸಾವಿನ ಅನುಮಾನಗಳನ್ನು ಬಗೆಹರಿಸುತ್ತಾ?
ಬೆಂಗಳೂರು(ಸೆ.09) ರೇಣುಕಾಸ್ವಾಮಿ ಪ್ರಕರಣ ಚಾರ್ಜ್ ಶೀಟ್‌ನಲ್ಲಿನ ಸ್ಫೋಟಕ ಮಾಹಿತಿಗಳು ಬಯಲಾಗುತ್ತಿದೆ. ಈ ಪೈಕಿ ಇತ್ತೀಚೆಗೆ ಬದುಕು ಅಂತ್ಯಗೊಳಿಸಿದ ನಿರ್ಮಾಪಕ ಸೌಂದರ್ಯ ಜಗದೀಶ್ ಕುರಿತ ಕೆಲ ಉಲ್ಲೇಗಳು ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ ಶೀಟ್‌ನಲ್ಲಿದೆ. ಪ್ರಮುಖವಾಗಿ ಪವಿತ್ರಾ ಗೌಡ ಜೊತೆ ವಾಸವಿರಲು ನಟ ದರ್ಶನ್ ಹೊಸ ಮನೆ ಖರೀದಿಸಿ ನೀಡಿದ್ದಾರೆ. ಆದರೆ ಈ ಮನೆ ಖರೀದಿಸಲು ನಿರ್ಮಾಪಕ ಸೌಂದರ್ಯ ಜಗದೀಶ್ ಬಳಿಯಿಂದ ಪವಿತ್ರಾ ಗೌಡ ಬರೋಬ್ಬರಿ 1.75 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ ಅನ್ನೋ ಮಾಹಿತಿ ಚಾರ್ಜ್ ಶೀಟ್‌ನಲ್ಲಿ ಬಯಲಾಗಿದೆ. ಇದೀಗ ಈ ಚಾರ್ಜ್ ಶೀಟ್‌ನಲ್ಲಿರುವ ಮಾಹಿತಿಗಳು, ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿನ ಅನುಮಾನ ಹೆಚ್ಚಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸರು 3991 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಪೈಕಿ 3850ನೇ ಪುಟದಲ್ಲಿ ಪವಿತ್ರಾ ಗೌಡ ಹೇಳಿಕೆ ಉಲ್ಲೇಖಿಸಿದ್ದಾರೆ. ಪವಿತ್ರಾ ಗೌಡ ನೀಡಿರುವ ಹೇಳಿಕೆಯಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಸಾವು ಪ್ರಕರಣದ ಅನುಮಾನ ಹೆಚ್ಚಿಸಿದೆ. ಈ ಚಾರ್ಜ್ ಶೀಟ್‌ನಲ್ಲಿ ಪವಿತ್ರಾ ಗೌಡ, ನಾನು ಮತ್ತು ದರ್ಶನ್ ತುಂಬಾ ಪ್ರೀತಿಸುತ್ತಿದ್ದೇವು.ದರ್ಶನ್ ವಿಜಯಲಕ್ಷ್ಮಿ ಜೊತೆ ಮದುವೆಯಾಗಿ ಅವರಿಗೆ ಮಗ ಇರುವ ವಿಚಾರವೂ ನನಗೆ ತಿಳಿದಿದೆ. ಆದರೆ ನಮ್ಮಿಬ್ಬರ ಪ್ರೀತಿ ಗಾಢವಾಗಿತ್ತು ಎಂದಿದ್ದಾರೆ.
ರೇಣುಕಾಸ್ವಾಮಿಗೆ ಒಂಟಿ ವೃಷಣ, ತನಿಖೆ ವೇಳೆ ಅಂಗಾಂಗ ವೈಕಲ್ಯ ಬಯಲು!
ಜೆಪಿ ನಗರದಲ್ಲಿನ ನಮ್ಮ ನಿವಾಸಕ್ಕೆ ದರ್ಶನ್ ಬರುತ್ತಿದ್ದರು. ನಾವು ಲಾಂಗ್ ಡ್ರೈವ್ ಹೋಗುತ್ತಿದ್ದೇವು. ನಾನು, ಮಗಳು ಹಾಗೂ ದರ್ಶನ್ ಮೂರು ಜನ ಜೊತೆಯಾಗಿ ವಾಸಮಾಡಲೆಂದು ಆರ್ ಆರ್ ನಗರ ದರ್ಶನ್ ಮನೆಯ ಹತ್ತಿರ 2018ರಲ್ಲಿ ಮನೆ ಖರೀದಿಸಿ ನನ್ನ ಹೆಸರಿಗೆ ದರ್ಶನ್ ಮಾಡಿಕೊಟ್ಟಿದ್ದಾರೆ. ಮನೆ ಖರೀದಿ ಮಾಡುವ ಸಂದರ್ಭದಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ನನ್ನ ಕನಕಪುರ ರಸ್ತೆಯಲ್ಲಿರುವ ಬ್ಯಾಂಕ್ ಖಾತೆಗೆ 1.75 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದಾರೆ ಎಂದು ಪವಿತ್ರಾ ಗೌಡ ಹೇಳಿಕೆ ಕೊಟ್ಟಿದ್ದಾರೆ.
ದರ್ಶನ್ ಮುಖಾಂತರ ಸೌಂದರ್ಯ ಜಗದೀಶ್ ಸೇರಿದಂತೆ ಇತರ ಕೆಲವರನ್ನು ಹತ್ತಿರದಿಂದ ಬಲ್ಲೆ ಎಂದು ಪವಿತ್ರಾ ಗೌಡ ಹೇಳಿದ್ದಾರೆ. ಚಾರ್ಜ್ ಶೀಟ್‌ನಲ್ಲಿರುವ ಈ ಹೇಳಿಕೆಗಳು ನಿರ್ಮಾಪಕ ಸೌಂದರ್ಯ ಜಗದೀಶ್ ಸಾವು ಪ್ರಕರಣದ ಅನುಮಾನ ಹೆಚ್ಚಿಸಿದೆ. ಸೌಂದರ್ಯ ಜಗದೀಶ್ ಸಾವಿಗೆ ವಿಪರೀತ ಹಣ ಕಳೆದುಕೊಂಡಿರುವುದೇ ಕಾರಣ ಎಂದು ಹೇಳಲಾಗುತ್ತಿದೆ. ಹೀಗೆ ಕಳೆದುಕೊಂಡ ಹಣದಲ್ಲಿ ಪವಿತ್ರಾ ಗೌಡ ಮನೆ ಖರೀದಿಗೆ ನೀಡಿದ 1.75 ಕೋಟಿ ರೂಪಾಯಿ ಸೇರಿದೆಯಾ ಅನ್ನೋ ಪ್ರಶ್ನೆ ಕಾಡತೊಡಗಿದೆ.
ರೇಣುಕಾಸ್ವಾಮಿ ಪ್ರಕರಣ ಪ್ರಕಟಿಸದಂತೆ ಮಾಧ್ಯಮಕ್ಕೆ ನಿರ್ಬಂಧ ಹೇರಲು ಹೈಕೋರ್ಟ್‌ಗೆ ದರ್ಶನ್ ಅರ್ಜಿ
ರೇಣುಕಾಸ್ವಾಮಿ ಪ್ರಕರಣದ ಚಾರ್ಚ್ ಶೀಟ್ ಇತರ ಕೆಲ ಪ್ರಕರಣದ ಮೇಲೆ ಬೆಳಕು ಚೆಲ್ಲುತ್ತಾ? ಪ್ರಮುಖವಾಗಿ ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿನ ಪ್ರಕರಣದ ಸುತ್ತ ಇದೀಗ ಅನುಮಾನಗಳು ಹೆಚ್ಚಾಗತೊಡಗಿದೆ.