ಜೈಲಲ್ಲಿ ನಟಿ ಪವಿತ್ರಾ ಗೌಡಗೆ ಬಿಗ್ ಶಾಕ್; ಇಬ್ಬರಿದ್ದ ಬ್ಯಾರಕ್‌ನಿಂದ 16 ಜನ ಇರುವೆಡೆ ಸ್ಥಳಾಂತರ! ಯಾಕೆ ಗೊತ್ತಾ?

Kannadaprabha News   | Kannada Prabha
Published : Aug 16, 2026, 08:20 AM IST
Renukaprasad murder case Actress Pavithra Gowda shifted to a different barracks

ಸಾರಾಂಶ

ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟಿ ಪವಿತ್ರಾ ಗೌಡ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಬ್ಬರಿದ್ದ ಬ್ಯಾರಕ್‌ನಿಂದ 16 ಕೈದಿಗಳಿರುವ ಬ್ಯಾರಕ್‌ಗೆ ವರ್ಗಾಯಿಸಲಾಗಿದೆ. ಪ್ರಜ್ವಲ್‌ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್‌ ಪತ್ತೆಯಾದ ಹಿನ್ನೆಲೆಯಲ್ಲಿ ಜೈಲಿನಲ್ಲಿ ಕಟ್ಟುನಿಟ್ಟಿನ ಕ್ರಮ.

ಬೆಂಗಳೂರು (ಆ.16): ರೇಣುಕಸ್ವಾಮಿ ಕೊಲೆ ಪ್ರಕರಣ(Renukaswamy murder case)ದ ಆರೋಪಿಯಾಗಿರುವ ನಟಿ ಪವಿತ್ರಗೌಡ(Actress Pavitra gowda) ಅವರನ್ನು ಪರಪ್ಪನ ಅಗ್ರಹಾರ ಜೈಲಿ(Parappana Agrahara jail)ನ ಬೇರೆ ಬ್ಯಾರಕ್‌ಗೆ ಶಿಫ್ಟ್‌ ಮಾಡಲಾಗಿದೆ.

ಇಬ್ಬರಿದ್ದ ಬ್ಯಾರಕ್‌ನಿಂದ 16 ಜನ ಇರುವೆಡೆಗೆ ಶಿಫ್ಟ್‌!

ಪವಿತ್ರಗೌಡ ಅವರನ್ನು ಇಬ್ಬರು ಕೈದಿಗಳು ಇದ್ದ ಬ್ಯಾರಕ್‌ನಿಂದ 16 ಕೈದಿಗಳಿರುವ ಬ್ಯಾರಕ್‌ಗೆ ವರ್ಗಾವಣೆ ಮಾಡಲಾಗಿದೆ. ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್‌ ಪತ್ತೆಯಾದ ಹಿನ್ನೆಲೆಯಲ್ಲಿ ಕೈದಿಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.

ಪ್ರಜ್ವಲ್‌ರ ಬ್ಯಾರಕ್‌ನಲ್ಲಿ ಮೊಬೈಲ್‌ ಫೋನ್‌ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಕಾರಾಗೃಹಕ್ಕೆ ಡಿಜಿಪಿ ಅಲೋಕ್‌ ಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೈಲಿನಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ದರ್ಶನ್‌ ಬ್ಯಾರಕ್‌ ಬಳಿ ಹೆಚ್ಚಿನ ಭದ್ರತೆ:

ರೇಣುಕಸ್ವಾಮಿ ಕೊಲೆ ಕೇಸಲ್ಲಿ ಆರೋಪಿಯಾಗಿರುವ ಪ್ರದೂಷ್‌ ಮಾಫಿ ಸಾಕ್ಷಿ ಆಗಲು ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಹಿನ್ನೆಯಲ್ಲಿ ಕೊಲೆ ಪ್ರಕರಣದ ಆರೋಪಿ ಹಾಗೂ ನಟ ದರ್ಶನ್‌ ಬ್ಯಾರಕ್‌ ಬಳಿ ಹಾಗೂ ಪ್ರದೂಷ್‌ ಬ್ಯಾರಕ್‌ ಬಳಿ ಹೆಚ್ಚಿನ ಭದ್ರತೆ ವಹಿಸಲಾಗಿದ್ದು, ಸಿಸಿ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇರಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಲ್ಲಿ ಬಂಧಿತ ಶಂಕಿತ ಉಗ್ರನ ಶಾಕಿಂಗ್ ಹಿಸ್ಟರಿ!ಕೂಲಿ ಹಣದಲ್ಲಿ ₹10,000 ಪ್ಯಾಲೆಸ್ತೀನ್ ಪರ ದೇಣಿಗೆ, ಐಬಿ ಕಣ್ಣಿಗೆ ಬಿದ್ದಿದ್ದು ಹೇಗೆ?;
Karnataka News Live: ಜೈಲಲ್ಲಿ ನಟಿ ಪವಿತ್ರಾ ಗೌಡಗೆ ಬಿಗ್ ಶಾಕ್; ಇಬ್ಬರಿದ್ದ ಬ್ಯಾರಕ್‌ನಿಂದ 16 ಜನ ಇರುವೆಡೆ ಸ್ಥಳಾಂತರ! ಯಾಕೆ ಗೊತ್ತಾ?