ದರ್ಶನ್ ಗೆ ಬಳ್ಳಾರಿ ಜೈಲಿನಲ್ಲಿಂದು ಸಿಗಲಿದೆ ಮಟನ್ ಊಟ! ಹೇಗಿದೆ ಊಟದ ಮೇನು?

By Ravi JanekalFirst Published Aug 30, 2024, 11:13 AM IST
Highlights

ಬೆಂಗಳೂರು ಜೈಲಿನಲ್ಲಿ ಮನೆಯೂಟ ಸಿಗದೆ, ಜೈಲಿನ ಊಟಕ್ಕೆ ಹೊಗ್ಗದೆ ಕಂಗಲಾಗಿದ್ದ ಕೊಲೆ ಆರೋಪಿ ದರ್ಶನ್‌ಗೆ ಬಳ್ಳಾರಿ ಜೈಲು ತುಸು ಸಮಾಧಾನ ತಂದಿರಲಿಕ್ಕೆ ಸಾಕು. ಇಂದು ಜೈಲಿನ ಮೇನುವಿನಂತೆ ಮಟನ್ ಊಟ ಸವಿಯಲಿರುವ ದರ್ಶನ್ ಹೇಗಿದೆ ಊಟದ ಮೇನು?

ಬಳ್ಳಾರಿ (ಆ.30): ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಫೋಟೊ ವೈರಲ್ ಆದ ಬಳಿಕ ಸರ್ಕಾರ ಎಚ್ಚೆತ್ತುಕೊಂಡು  ಕೊಲೆ ಆರೋಪಿ ನಟ ದರ್ಶನ್ ಅಂಡ್ ಸಹಚರರನ್ನ ಬಳ್ಳಾರಿ ವಿಜಯಪುರ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಜೈಲಿಗೆ ಶಿಫ್ಟ್ ಮಾಡಲಾಗಿದೆ.ರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವುದು ಒಂದು ರೀತಿ ದರ್ಶನ್‌ಗೆ ಅನುಕೂಲವೇ ಆದಂತಾಗಿದೆ. 

ಹೌದು, ಪರಪ್ಪನ ಅಗ್ರಹಾರ ಜೈಲು ಸೇರಿದ್ದ ದರ್ಶನ್ ಮನೆ ಊಟ ಇಲ್ಲದೆ, ಜೈಲಿನ ಮೆನುವಿನಂತೆ ಊಟವೂ ಒಗ್ಗದೆ ಸೊರಗಿದ್ದ ದರ್ಶನ್. ಮನೆಯೂಟಕ್ಕೆ ಅವಕಾಶ ಕೊಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಪರಪ್ಪನ ಅಗ್ರಹಾರ ಮೇನುವಿನಂತೆ ಮುದ್ದೆ ಸಾರು ಅನ್ನ ಚಪಾತಿ ತಿನ್ನಬೇಕಾಗಿತ್ತು. ಈ ಆಹಾರ ದರ್ಶನ್‌ಗೆ ಆಗಿಬರುತ್ತಿರಲಿಲ್ಲ. ಮೊದಲಿನಿಂದ ಮಾಂಸಪ್ರಿಯನಾಗಿದ್ದ ದರ್ಶನ್. ಮಾಂಸದೂಟ ಸಿಗದೆ ಅಕ್ಷರಶಃ ಜೈಲಿನಲ್ಲಿ ಕಂಗಾಲಾಗಿ ಕುಳಿತಿದ್ದ. ಇದೀಗ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿರುವುದರಿಂದ ಇಲ್ಲಿನ ಮೇನುವಿನಂತೆ ಚಿಕನ್ ಊಟ ಸಿಗಲಿದೆ.

Latest Videos

ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ: 7 ಜನ ಸಿಬ್ಬಂದಿ ಅಮಾನತು

ಇಂದು ದರ್ಶನ್‌ಗೆ ಚಿಕನ್ ಊಟ!

 ಜೈಲಿನ ಮೇನುವಿನಂತೆ ಇಂದು ಬಳ್ಳಾರಿ ಜೈಲಿನಲ್ಲಿಂದು ಮಟನ್ ಊಟ ಸವಿಯಲಿರುವ ದರ್ಶನ್. ಜೈಲಿನ ನಿಯಮದ ಪ್ರಕಾರ ತಿಂಗಳ ಮೊದಲ ಮತ್ತು ಮೂರನೇ ಶುಕ್ರವಾರ ಮಟನ್ ಊಟ ನೀಡಲಾಗ್ತದೆ. ತಿಂಗಳ ಎರಡನೇ ಮತ್ತು ಕೊನೆಯ ಶುಕ್ರವಾರ ಮಟನ್ ಊಟ ನೀಡಲಾಗ್ತದೆ. ಅದರಂತೆ ಇಂದು ತಿಂಗಳ ಕೊನೆಯ ಶುಕ್ರವಾರ ಹಿನ್ನಲೆ ಚಿಕನ್ ಊಟ ನೀಡಲಾಗ್ತದೆ. ಇಂದು ಮಧ್ಯಾಹ್ನದ ಊಟಕ್ಕೆ ಚಿಕನ್ ಜೊತೆಗೆ ಚಪಾತಿ, ಅಥವಾ ಮುದ್ದೆ,  ಅನ್ನ ಸಾಂಬಾರ್ ಮಜ್ಜಿಗೆ ಸಹ ಕೊಡಲಿದ್ದಾರೆ. ಬೆಳಗ್ಗೆ 7.30ಕ್ಕೆ ಉಪ್ಪಿಟ್ಟು ಸೇವಿಸಿರುವ ದರ್ಶನ್. ಇದೀಗ 11 ಅಥವಾ 12 ಗಂಟೆಯೊಳಗೆ ಮಟನ್ ಊಟ ನೀಡಲಾಗುತ್ತೆ. ಅಂತೂ ಹೊಟ್ಟೆ ತುಂಬಾ ಊಟ. ಕಣ್ತುಂಬ ನಿದ್ದೆ ಮಾಡಲಿರುವ ದರ್ಶನ್. 

ಶುಕ್ರವಾರ ಪ್ರತಿ ಕೈದಿಗೂ ಮಾಂಸಾಹಾರ!

ಬಳ್ಳಾರಿ ಜೈಲಿನಲ್ಲಿ ಶುಕ್ರವಾರದಂದು ಜೈಲಿನ ಪ್ರತಿ ಕೈದಿಗೂ ಮಾಂಸಾಹಾರ ಊಟ ನೀಡಲಾಗುತ್ತದೆ. ತಿಂಗಳದ ಎರಡನೇ ಶುಕ್ರವಾರ  ಮತ್ತು ಕೊನೆಯ ಶುಕ್ರವಾರ ಮಟನ್ ಊಟ ಕೊಡಲಾಗುತ್ತೆ. ಒಂದು ಬಾರಿ ಅಡುಗೆ ಸುಮಾರು 70 ಕೆಜಿ ಚಿಕನ್ ಬೇಕಾಗುತ್ತದೆ. ಮಟನ್ ಅಡುಗೆ ಮಾಡಬೇಕಾದರೆ ಒಂದು ದಿನಕ್ಕೆ 6 ರಿಂದ 8 ಕುರಿಗಳು ಬೇಕಾಗುತ್ತದೆ.

ಇಂದು ಮಾಂಸಾಹಾರ ಊಟ ಹಿನ್ನೆಲೆ ಮಾಂಸ ಕಡೆದುಕೊಡಲು ಜೈಲಿನ ಮುಂಭಾಗಕ್ಕೆ ಬಂದ ಅಡುಗೆಯವರು,. ಕನಿಷ್ಠ ಎಂದರೂ 40-50ಕೆಜಿ ಮಟನ್ ಬೇಕಾಗುತ್ತದೆ. ಆಟೋದಲ್ಲಿ ಮಟನ್ ತಂದುಕೊಡಲಾಗಿದೆ. ಅಡುಗೆ ರೆಡಿಯಾಗಲಿದ್ದು ಮಧ್ಯಾಹ್ನ 12 ಅಥವಾ 1 ಗಂಟೆ ಒಳಗೆ ಕೈದಿಗಳಿಗೆ ಮಾಂಸಾಹಾರ ಊಟ ನೀಡಲಾಗುತ್ತದೆ. 
 

click me!