ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾದ ನಟ ದರ್ಶನ್ ಹಾಗೂ ಸಹಚರರಲ್ಲೊಬ್ಬನಾದ ಎ4 ಆರೋಪಿ ರಘು ಅವರ ತಾಯಿ ಮಂಜುಳಮ್ಮ(70) ಇಂದು ನಿಧನರಾಗಿದ್ದಾರೆ.
ಚಿತ್ರದುರ್ಗ (ಜು.20): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾದ ನಟ ದರ್ಶನ್ ಹಾಗೂ ಸಹಚರರಲ್ಲೊಬ್ಬನಾದ ಎ4 ಆರೋಪಿ ರಘು ಅವರ ತಾಯಿ ಮಂಜುಳಮ್ಮ(70) ಇಂದು ನಿಧನರಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಕೋಳಿ ಬುರುಜನಹಟ್ಟಿ ಗ್ರಾಮದವರಾದ ಮಂಜುಳಮ್ಮ. ಕಳೆದೊಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಇತ್ತೀಚೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಗ ಜೈಲು ಸೇರಿದ ಬಳಿಕ ಇನ್ನಷ್ಟು ಆರೋಗ್ಯ ಹದಗೆಟ್ಟಿತ್ತು. ಮಗ ಜೈಲಿಂದ ಈಗ ಬರ್ತಾನೆ, ಆಗ ಬರ್ತಾನೆ ಅಂತಾ ಕಾದಿದ್ದ ತಾಯಿ ಇದೀಗ ಮಗ ನ್ಯಾಯಾಂಗ ಬಂಧನದಲ್ಲಿರುವಾಗಲೇ ತಾಯಿ ಕೊನೆಯುಸಿರೆಳೆದಿದ್ದಾರೆ. ಇತ್ತ ಮಗ ರಘು ಕೊನೆಗಳಿಗೆಯಲ್ಲಿ ತಾಯಿಯನ್ನು ಮಾತಾಡಿಸಲಾಗಲಿಲ್ಲ, ವಿಚಾರಿಸಿಕೊಳ್ಳಲಾಗಲಿಲ್ಲ ಎಂಬ ಕೊರಗಿನಿಂದ ದುಃಖಿತನಾಗಿದ್ದಾನೆ. ಅಂತ್ಯ ಸಂಸ್ಕಾರದ ವೇಳೆ ಪುತ್ರನ ಕರೆತರುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ದುಡಿದು ತಿನ್ನೋಣ ಅಂದ್ರು ಜನ ಬಿಡ್ತಿಲ್ಲ, ಸಾಯೋಣ ಅನ್ನಿಸ್ತಿದೆ: ದರ್ಶನ್ ಕೇಸ್ ಆರೋಪಿ ಪತ್ನಿ ಕಣ್ಣೀರು..!
ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಆಗಿದ್ದ ಆರೋಪಿ ರಘು ಅಲಿಯಾಸ್ ರಾಘವೇಂದ್ರ. ದರ್ಶನ್ ಪ್ರೇಯಸಿ ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮರ್ಡರ್ ಕೇಸ್ನಲ್ಲಿ ತಗಲಾಕೊಂಡು ಜೈಲು ಸೇರಿದ್ದಾನೆ. ದರ್ಶನ್ ಮೇಲಿನ ಹುಚ್ಚು ಅಭಿಮಾನಕ್ಕೆ ಇಡೀ ಸಂಸಾರ, ಕುಟುಂಬದವರೇ ನರಳುವಂತಾಗಿದೆ. ಅತ್ತ ಆರೋಪಿ ರಘು ನಂಬಿ ಬಂದ ಹೆಂಡತಿಯೂ ಕಣ್ಣೀರು ಕೈತೊಳೆಯುತ್ತಿದ್ದಾಳೆ. ಇದೀಗ ತಾಯಿಯೂ ಕೊನೆಯುಸಿರೆಳೆದಿದ್ದಾಳೆ. ಇಡೀ ಘಟನೆಯನ್ನ ಕಂಡು ಜನರು ಮರುಗುತ್ತಿದ್ದಾರೆ. ಮನೆ ಮಕ್ಕಳು ತಾಯಿ ಜೊತೆಗೆ ದುಡಿದುಕೊಂಡು ಸುಖವಾಗಿರಬೇಕಿತ್ತು ದರ್ಶನ್ ಮೇಲಿನ ಹಚ್ಚು ಅಭಿಮಾನಕ್ಕೆ ನೀನು ನರಳಾಡುತ್ತಿರುವುದಲ್ಲದೇ ಇಡೀ ಕುಟುಂಬವನ್ನೇ ನರಳಿ ಸಾಯುವಂತೆ ಮಾಡಿದೆಯಲ್ಲ ನಿನಗಿದು ಬೇಕಿತ್ತಾ ಮಗನೇ ಎಂದು ಕೇಳುತ್ತಿದ್ದಾರೆ.