
ಬೆಂಗಳೂರು, (ಏ.24): ಲಾಕ್‌ಡೌನ್‌ನಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದೆ. ಇದರ ಮಧ್ಯೆಯೂ ಬಸ್ ನಿಲ್ದಾಣಗಲ್ಲಿ ಇರುವ ಮಳಿಗೆಗಳಿಗೆ ಬಾಡಿಗೆ ವಿನಾಯಿತಿ ನೀಡಿ ಮಾನವೀಯತೆ ಮೆರೆದಿದೆ.
ಹೌದು...ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತಿದ್ದ ವಾಣಿಜ್ಯ ಮಳಿಗೆಗಳು, ಹೋಟೆಲ್ ಮಾಲೀಕರು ಲಾಕ್‌ಡೌನ್ ಮುಗಿಯುವವರೆಗೆ ಬಾಡಿಗೆ ನೀಡುವಂತಿಲ್ಲ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಲಾಕ್ ಆಗಿರುವ ಕೂಲಿ ಕಾರ್ಮಿಕರು ತಮ್ಮ-ತಮ್ಮ ಊರಿಗೆ ಹೋಗಲು ಅವಕಾಶ
ಇಂದು (ಶುಕ್ರವಾರ) ಸುತ್ತೋಲೆ ಹೊರಡಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮಾನವೀಯತೆ ದೃಷ್ಟಿಯಿಂದ ಲಾಕ್‌ಡೌನ್ ಘೋಷಣೆಯಾದ ಮಾರ್ಚ್ 22ರಿಂದ ಮುಗಿಯುವವರೆಗೂ ಬಾಡಿಗೆ ವಿನಾಯಿತಿಯನ್ನು ನೀಡಿದೆ.
ಅಲ್ಲದೇ ಕೆಸ್‌ಆರ್‌ಟಿಸಿಗೆ ಜಾಹೀರಾತು ನೀಡುತ್ತಿದ್ದ ಜಾಹೀರಾತುದಾರರು ಕೂಡಾ ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ. ಮೊಬೈಲ್ ಟವರ್ ಮತ್ತು ಎಟಿಎಂ ಇರುವ ಕಟ್ಟಡಗಳಿಗೆ ಬಾಡಿಗೆಯಿಂದ ವಿನಾಯಿತಿ ಇಲ್ಲ.
ಹೋಟೆಲ್ ಮಾಲೀಕರು, ವಾಣಿಜ್ಯ ಮಳಿಗೆ ಮಾಲೀಕರು ಒಂದು ವೇಳೆ ಮಾರ್ಚ್ ತಿಂಗಳಿನ ಬಾಡಿಗೆ ನೀಡಿದ್ದರೆ, ಅದನ್ನು ಲಾಕ್‌ಡೌನ್ ಬಳಿಕ ಕಾರ್ಯನಿರ್ವಹಿಸುವ 10 ದಿನಗಳ ಬಾಡಿಗೆಗೆ ವಿನಾಯಿತಿ ನೀಡಲಾಗುತ್ತದೆ ಎಂದು ತನ್ನ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಕೆಎಸ್‌ಆರ್‌ಟಿಸಿ ಸುತ್ತೋಲೆ ಹೊರಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ