ಲಾಕ್‌ ಆಗಿರುವ ಕೂಲಿ ಕಾರ್ಮಿಕರು ತಮ್ಮ-ತಮ್ಮ ಊರಿಗೆ ಹೋಗಲು ಅವಕಾಶ

By Suvarna NewsFirst Published Apr 24, 2020, 7:22 PM IST
Highlights

ಉದ್ಯೋಗ ಅರಿಸಿಕೊಂಡು ಊರು ಬಿಟ್ಟು ನಗರ ಪ್ರದೇಶಳಿಗೆ ಹೋಗಿ ಲಾಕ್‌ ಆಗಿರುವ ಕೂಲಿ ಕಾರ್ಮಿಕರಿಗೆ ರಾಜ್ಯ ಸರ್ಕಾರ ಬಿಗ್ ರಿಲೀಫ್ ನೀಡಿದೆ.

ಬೆಂಗಳೂರು, (ಏ.24): ಹೊಟ್ಟೆ ತುಂಬಿಸಿಕೊಳ್ಳಲು ಕೆಲಸ ಅರಿಸಿ ಬೇರೆ-ಬೇರೆ ಊರುಗಳಲ್ಲಿ ಲಾಕ್‌ ಆಗಿರುವ ಕೂಲಿ ಕಾರ್ಮಿಕರನ್ನು ಅವರವ ಊರುಗಳಿಗೆ ಕಳುಹಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವಲಸೆ ಕಾರ್ಮಿಕರು ಅವರ ಊರುಗಳಿಗೆ ಮರಳಲು ಅವಕಾಶ ಕಲ್ಪಿಸಿಕೊಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಲಾಕ್‌ಡೌನ್‌ನಿಂದ ಕಾರ್ಮಿಕರು ಅತಂತ್ರ: ಊರುಗಳಿಗೆ ಹೋಗಲು ಅವಕಾಶ ಮಾಡಿ ಕೊಡಿ ಎಂದು ಅಳಲು

ಕಾರ್ಮಿಕರು ಊರುಗಳಿಗೆ ತೆರಳಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ವ್ಯವಸ್ಥೆ ಮಾಡುವಂತೆ ಸೂಚಿಸಿರುವ ಅವರು, ಪ್ರಯಾಣದ ವೇಳೆ ಕಾರ್ಮಿಕರು ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮಾಸ್ಕ್, ಗ್ಲೌಸ್ ನೀಡುವಂತೆ ತಿಳಿಸಿದ್ದಾರೆ

ಕೊರೋನಾ ಕಾರಣಕ್ಕಾಗಿ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಇದರ ಪರಿಣಾಮವಾಗಿ ಕಾರ್ಯನಿಮಿತ್ತ ಬೇರೆ-ಬೇರೆ ಊರಿಗೆ ತೆರಳಿದವರು ವಾಪಸ್ ತಮ್ಮ ಊರಿಗೆ ಮರಳಲಾಗದೆ ಸಿಲುಕಿಕೊಂಡಿದ್ದಾರೆ.

ಅದರಲ್ಲೂ ಜೀವನೋಪಾಯಕ್ಕಾಗಿ ಸ್ವಂತ ಊರು ತೊರೆದು ಮತ್ತೊಂದು ಊರಿಗೆ ಹೋಗಿದ್ದ ವಲಸೆ ಕಾರ್ಮಿಕರು ಅತ್ತ ಕೆಲಸವೂ ಇಲ್ಲದೆ ಇತ್ತ ಊರಿಗೂ ಮರಳಲಾಗದೆ ಪರಿತಪಿಸುತ್ತಿದ್ದಾರೆ. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಅವರ ಊರುಗಳಿಗೆ ಕಳುಹಿಸಿಕೊಡುವ ನಿರ್ಧಾರ ಕೈಗೊಂಡಿದೆ.

click me!