
ಬೆಂಗಳೂರು (ಮಾ.6) : ಮುಂಗಾರು ಆರಂಭಗೊಳ್ಳುವ ಮುನ್ನ ರಾಜಕಾಲುವೆಯ ಹೂಳು ತೆಗೆದು ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡುವಂತೆ ಬೆಳ್ಳಂದೂರು ಸಂಚಾರ ಪೊಲೀಸರು ಬಿಬಿಎಂಪಿಗೆ ಪತ್ರ ಬರೆದಿದ್ದಾರೆ.
ಕಳೆದ ವರ್ಷ ಮಳೆಗಾಲ(Monsoon)ದಲ್ಲಿ ಬೆಳ್ಳಂದೂರು(Bellanduru) ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿ(Flood situation) ಉಂಟಾಗಿತ್ತು. ಹೀಗಾಗಿ, ಈ ವರ್ಷ ಮಳೆಗಾಲ ಆರಂಭಕ್ಕೂ ಮುನ್ನವೇ ರಾಜಕಾಲುವೆ ಹೂಳು ತೆಗೆದು ನೀರು ಸರಾಗವಾಗಿ ಹರಿದು ಹೋಗುವ ನಿಟ್ಟಿನಲ್ಲಿ ತುರ್ತಾಗಿ ಕೈಗೊಳ್ಳಬೇಕಾದ 9 ಸ್ಥಳಗಳ ಪಟ್ಟಿಯನ್ನು ಪತ್ರದಲ್ಲಿ ನೀಡಲಾಗಿದೆ.
ಆಕಸ್ಮಿಕ ಬೆಂಕಿ ಅವಘಡ: ಪೊಲೀಸರು ಜಪ್ತಿ ಮಾಡಿದ್ದ 58 ಬೈಕ್ ಸುಟ್ಟು ಭಸ್ಮ...
ಎಲ್ಲೆಲ್ಲಿ ತುರ್ತು ಕಾಮಗಾರಿ:
ಬೆಳ್ಳಂದೂರು ಕೆರೆ(Bellandu lake) ಸಂಪರ್ಕಿಸುವ ಇಕೋಸ್ಪೇಸ್ ಸ್ಟರ್ಲಿಂಗ್ ಅಸೆಂಟಿಯಾ ಅಪಾರ್ಚ್‌ಮೆಂಟ್‌ನ ಹಿಂಭಾಗದ ರಸ್ತೆ ದುರಸ್ತಿ ಮಾಡುವುದು. ಹೊರವರ್ತುಲ ರಸ್ತೆಯಲ್ಲಿರು ಕೆಪಿಟಿಸಿಎಲ್ ಬೆಳ್ಳಂದೂರು ಉಪ ಕೇಂದ್ರದಿಂದ ಚಲ್ಕೆರೆ ಕೆರೆಯ ರಸ್ತೆವರೆಗೆ ದುರಸ್ತಿ ಕಾಮಗಾರಿ ನಡೆಸುವುದು. ಸರ್ಜಾಪುರ ರಸ್ತೆಯಲ್ಲಿ ರೈನ್ ಬೋ ಅಪಾರ್ಚ್‌ಮೆಂಟ್ ನೀರುಗಾಲುವೆ ದುರಸ್ತಿ, ಚೋಳಲ್ ಕೆರೆಗೆ ಸಂಪರ್ಕಿಸುವ ಸರ್ಜಾಪುರ ವಿಪ್ರೋ ರಸ್ತೆ ಬಳಿ ಕಾಮಗಾರಿ, ಹಾಲನಾಯಕನಹಳ್ಳಿ ಕೆರೆಯಿಂದ ರೈನ್‌ಬೋ ಅಪಾಟ್ರ್ಮೆಂಟ್‌ವರೆಗಿನ ರಾಜಕಾಲುವೆ ಕಾಮಗಾರಿ ನಡೆಸುವಂತೆ ಕೋರಿದ್ದಾರೆ.
ಸರ್ಜಾಪುರ ಅಗ್ನಿ ಶಾಮಕದಳ ಕಚೇರಿಯಿಂದ ಕಾರ್ಮೆಲರಾಂವರೆಗೆ ಒಳಚರಂಡಿ ಹಾಗೂ ರಾಜಕಾಲುವೆ ರಿಪೇರಿ. ಅಗರ ಕೆರೆ ಹಾಗೂ ಬೆಳ್ಳಂದೂರು ಕೆರೆ ಒಳಚರಂಡಿ ದುರಸ್ತಿ. ದೇವರಬೀಸನಹಳ್ಳಿ ಜಂಕ್ಷನ್‌ನಿಂದ ಸಾಕ್ರಾ ಆಸ್ಪತ್ರೆವರೆಗಿನ ಒಳಚರಂಡಿ ದುರಸ್ತಿ. ಯಮಲೂರು ಎಪ್ಸಿಲಾನ್ ವಿಲ್ಲಾ ಪ್ರಸ್ಟೀಜ್‌ಟೆಕ್ ಪಾರ್ಕ್ ಕಡೆಯಿಂದ ಮತ್ತು ಕಾಡುಬೀಸನಹಳ್ಳಿ ಎಸ್‌ಟಿಪಿ ಕಡೆಗೆ ದುರಸ್ತಿ ಕಾಮಗಾರಿಗಳನ್ನು ಮತ್ತು ಹೂಳು ತೆಗೆಯುವ ಕಾಮಗಾರಿಗಳನ್ನು ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
Bengaluru: ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ವೇಳೆ ಸಿಲಿಂಡರ್ ಸ್ಫೋಟಕ್ಕೆ ಬಾಲಕ ಬಲಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ