ಟ್ರಬಲ್ ಶೂಟರ್ ಡಿಕೆಶಿಗೆ ಬಿಗ್ ರಿಲೀಫ್: 3 ಪ್ರಕರಣಗಳಲ್ಲಿ ಕ್ಲೀನ್ ಚಿಟ್!

Published : Feb 28, 2019, 12:24 PM ISTUpdated : Feb 28, 2019, 04:10 PM IST
ಟ್ರಬಲ್ ಶೂಟರ್ ಡಿಕೆಶಿಗೆ ಬಿಗ್ ರಿಲೀಫ್: 3 ಪ್ರಕರಣಗಳಲ್ಲಿ ಕ್ಲೀನ್ ಚಿಟ್!

ಸಾರಾಂಶ

ಟ್ರಬಲ್ ಶೂಟರ್ ಡಿಕೆಶಿಗೆ ಬಿಗ್ ರಿಲೀಫ್| ಮೂರು ಕೇಸ್ ಗಳಲ್ಲಿ ಕ್ಲೀನ್ ಚಿಟ್!

ಬೆಮಕಗಳೂರು[ಫೆ.28]: ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್, ಸಚಿವ ಡಿ. ಕೆ ಶಿವಕುಮಾರ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಐಟಿ ಇಲಾಖೆ ದಾಖಲಿಸಿದ್ದ ಮೂರು ಕೇಸ್ ಗಳಲ್ಲಿ ಡಿ. ಕೆ ಶಿವಕುಮಾರ್ ಆರೋಪ ಮುಕ್ತಗೊಂಡಿದ್ದಾರೆ. 

"

2017ರ ಆಗಸ್ಟ್ 1 ರಂದು ಡಿ. ಕೆ. ಶಿವಕುಮಾರ್ ರವರ ಬೆಂಗಳೂರು ದೆಹಲಿ ನಿವಾಸ, ಕಚೇರಿ ಸೇರಿದಂತೆ ಒಟ್ಟು 50 ಸ್ಥಳಗಳಿಗೆ ಐಟಿ ದಾಳಿ ನಡೆಸಿತ್ತು.ಈ ವೇಳೆ ಸುಮಾರು 300 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿದ್ದು, ಇದರ ಅವರ ವಿರುದ್ಧ ಕೇಸ್ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿದ್ದವು.

ಆದರೆ ನ್ಯಾಯಾಲಯಕ್ಕೆ ಮೇಲರ್ಜಿ ಸಲ್ಲಿಸಿದ್ದ ಡಿ. ಕೆ. ಶಿವಕುಮಾರ್ ತನ್ನ ವಿರುದ್ಧ ದೂರು ಸಲ್ಲಿಸಿದ ಅಧಿಕಾರಿಗೆ ಯಾವುದೇ ಅಧಿಕಾರವಿರಲಿಲ್ಲ. ಹೀಗಾಗಿ ಈ ದೂರಿನಿಂದ ತನ್ನನ್ನು ಕೈಬಿಡಬೇಕು. ಅಲ್ಲದೇ ಅವರು ಮಾಡಿರುವ ಆರೋಪಗಳೆಲ್ಲವೂ ನಿರಾಧಾರ ಎಂದು ವಾದಿಸಿದ್ದರು. 

 ಡಿ. ಕೆ. ಶಿವಕುಮಾರ್ ವಾದವನ್ನು ಆಲಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅವರ ವಿರುದ್ಧ ದಾಖಲಾಗಿದ್ದ, ಮೂರು ಪ್ರಕರಣಗಳಲ್ಲಿ  ಡಿಕೆಶಿಗೆ ಕ್ಲೀನ್ ಚಿಟ್ ನೀಡಿದೆ. ಆದರೆ ಡಿಕೆಶಿ ವಿರುದ್ಧ ಇರುವ ಹವಾಲಾ ಪ್ರಕರಣ ಇನ್ನೂ ಬಾಕಿ ಉಳಿದಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹಂತ ಹಂತವಾಗಿ 1.88 ಲಕ್ಷ ಸರ್ಕಾರಿ ಹುದ್ದೆ ಭರ್ತಿ : ಸಿದ್ದರಾಮಯ್ಯ
ಯತೀಂದ್ರ ಹೇಳಿಕೆಯಿಂದ ರಾಜ್ಯದಲ್ಲಿ ಮತ್ತೆ ಸಿಎಂ ಕುರ್ಚಿ ಕಿಚ್ಚು