ಕಾಲು ಕೆರೆದುಕೊಂಡು ಬರುವ ಪಾಕಿಗೆ ತಕ್ಕ ಪಾಠ ಕಲಿಸಬೇಕಿದೆ : ಸಿದ್ದರಾಮಯ್ಯ

Published : Feb 27, 2019, 01:56 PM IST
ಕಾಲು ಕೆರೆದುಕೊಂಡು ಬರುವ ಪಾಕಿಗೆ ತಕ್ಕ ಪಾಠ ಕಲಿಸಬೇಕಿದೆ : ಸಿದ್ದರಾಮಯ್ಯ

ಸಾರಾಂಶ

ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಪಡೆ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದೆ. ಪಾಕಿಸ್ತಾನ ಭಾರತದ ಮೇಲೆ ಪದೇ ಪದೇ ಕಾಲು ಕೆರೆದು ಜಗಳಕ್ಕೆ ಬರುತ್ತಿದ್ದು ತಕ್ಕ ಪಾಠ ಕಲಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ವಿಜಯಪುರ : ಪಾಕ್ ಉಗ್ರರ ನೆಲೆಗಳ ಮೇಲೆ ನಮ್ಮ ಸೇನೆ ದಾಳಿ ಮಾಡಿದೆ. ಆದರೆ ಅಲ್ಲಿನ ಸೈನಿಕರು ಹಾಗೂ ಅವರ ಅಡಗುತಾಣಗಳ ಮೇಲೆ ದಾಳಿ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ವಿಜಯಪುರದಲ್ಲಿ ಮಾತನಾಡಿದ ಅವರು ನಮ್ಮ ಸೇನಾ ಪಡೆ ಪಾಕಿಸ್ತಾನ ಸೈನಿಕರ ಮೇಲೆ ದಾಳಿ ಮಾಡಿಲ್ಲ. ಅವರ ತಾಣಗಳು ದಾಳಿಗೆ ಒಳಗಾಗಿಲ್ಲ. ಆದರೆ ಪಾಕ್ ಪಡೆಗಳು ನಮ್ಮ ಸೇನಾ ಪಡೆ ಮೇಲೆ ನಿರಂತರ ದಾಳಿ ಮಾಡುತ್ತಿವೆ.  ಪಾಕಿಸ್ತಾನದ ಅಟ್ಟಹಾಸ ಜಾಸ್ತಿಯಾಗಿದೆ, ಅವರು ಕಾಲು ಕೆರೆದುಕೊಂಡು ಬಂದರೆ ನಾವು ಸರಿಯಾಗಿ ಉತ್ತರ ನೀಡಬೇಕಿದೆ ಎಂದರು. 

ಬುದ್ಗಾಮ್ನಲ್ಲಿ ಪತವಾಗಿದ್ದು ಮಿಗ್-21 ವಿಮಾನ ಅಲ್ಲ, Mi-17 ಹೆಲಿಕಾಪ್ಟರ್

ಫೆ.14ರಂದು ನಡೆದ ದಾಳಿಯಲ್ಲಿ ನಮ್ಮ 44 ಯೋಧರು ಹುತಾತ್ಮರಾದರು. ಇಂತಹ ದುಷ್ಕೃತ್ಯ ಎಸಗುವ ಪಾಕಿಸ್ತಾನಕ್ಕೆ ಈ ಹಿಂದೆಯೇ ಅನೇಕ ಬಾರಿ ಉತ್ತರಿಸಿದ್ದೇವೆ.  1965 ಹಾಗೂ 1971 ರಲ್ಲಿ ಪಾಠ ಕಲಿಸಲಾಗಿದೆ. ಈಗ ಮತ್ತೆ ಮತ್ತೆ ದಾಳಿ ಮುಂದುವರಿಸಿದ್ದು, ಈಗಲೂ ಕೂಡ ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಎಂದು ಸಿದ್ದರಾಮಯ್ಯ ಹೇಳಿದರು. 

ರಫೇಲ್‌ ಇದ್ದಿದ್ದರೆ ಪಾಕ್ ಗಡಿ ದಾಟುವ ಅಗತ್ಯವೇ ಇರಲಿಲ್ಲ

ಪುಲ್ವಾಮಾದಲ್ಲಿ ಫೆ. 14 ರಂದು ಜೈಶ್ ಸಂಘಟನೆ ಉಗ್ರರು ದಾಳಿ ನಡೆಸಿ 44 ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ವಾಯುಪಡೆ ಉಗ್ರ ಶಿಬಿರಗಳನ್ನು ಧ್ವಂಸ ಮಾಡಿದೆ. ಈ ವೇಳೆ 350ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!