
ವಿಧಾನ ಪರಿಷತ್(ಜು.14): ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಮುಂಬಡ್ತಿಗೆ ನಿಗದಿಪಡಿಸಿರುವ ಅರ್ಹತಾ ಸೇವೆಯನ್ನು ಐದು ವರ್ಷದಿಂದ ಮೂರು ವರ್ಷಕ್ಕೆ ಇಳಿಸಲು ವೃಂದ ಮತ್ತು ನೇಮಕಾತಿ ನಿಯಮದ ಪ್ರಕಾರ ಅಸಾಧ್ಯ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಇಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಣೆ ಜ್ಞಾನ, ತಾಂತ್ರಿಕವಾಗಿ ನೈಪುಣ್ಯತೆ ಹಾಗೂ ಭೌತಿಕ ಮತ್ತು ಮಾನಸಿಕ ಸದೃಢವಾಗಿ ಪರಿಣತಿ ಹೊಂದಿರಬೇಕಾಗುತ್ತದೆ. ಆದ್ದರಿಂದ ಬಡ್ತಿ ವೇಳೆ ಅರ್ಹತಾ ಸೇವೆಯ ಅವಧಿಯನ್ನು ಕಡಿಮೆ ಮಾಡಲು ಆಗುವುದಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಭಿಪ್ರಾಯ ಪಟ್ಟಿದೆ ಎಂದು ವಿವರಿಸಿದರು.
ಪೂಜೆ ಮಾಡಲು ಪೊಲೀಸ್ ಅನುಮತಿ ಬೇಕಿಲ್ಲ: ಸಚಿವ ಪರಮೇಶ್ವರ್
ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸದರಿ ಇಲಾಖೆಯು ತಾಂತ್ರಿಕ ಇಲಾಖೆಯಾಗಿದೆ. ಪ್ರವಾಹ, ಭೂಕಂಪ, ಜ್ವಾಲಾಮುಖ ಮುಂತಾದ ಪ್ರಕೃತಿ ವಿಕೋಪಗಳು ಮಾನವ ಸೃಷ್ಟಿಸಿದ ಕೈಗಾರಿಕಾ ಮತ್ತು ರಾಸಾಯನಿಕ ವಿಪತ್ತುಗಳು, ಕಟ್ಟಡ ಕುಸಿತ, ರಸ್ತೆ ಅಪಘಾತಗಳು, ರೈಲು ದುರಂತಗಳು, ಅಗ್ನಿ ಅನಾಹುತಗಳ ಸಂದರ್ಭದಲ್ಲಿ ಆಸ್ತಿಪಾಸ್ತಿ ರಕ್ಷಿಸಲು ಜೀವ ಹಾನಿ ತಪ್ಪಿಸುವಂತಹ ಮಹತ್ವವಾದ ಇಲಾಖೆ ಇದಾಗಿದೆ.
ಒಂದು ವೇಳೆ ಐದು ವರ್ಷದ ಅವಧಿಯಲ್ಲಿ ಪಡೆಯುವ ನೈಪುಣ್ಯತೆ ಇತ್ಯಾದಿಗಳನ್ನು ಮೂರು ವರ್ಷದಲ್ಲಿ ಪಡೆಯುವಂತಹ ಅವಕಾಶವಿದ್ದಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ