ನಾಲ್ವರು ಕಾಂಗ್ರೆಸ್ ಅತೃಪ್ತ ಶಾಸಕರು ಅನರ್ಹ?

By Web DeskFirst Published Feb 8, 2019, 11:39 AM IST
Highlights

ಕರ್ನಾಟಕ ಸಂಸತ್ ವಿಸ್ತರಣೆಯಾದ ಬಳಿಕ ಅತೃಪ್ತರ ಗುಂಪು ಸೃಷ್ಟಿಯಾಗಿದ್ದು, ಹಲವು ರೀತಿಯ ಪ್ರಯೋಗಗಳಿಗೂ ಜಗ್ಗದ ಇವರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸಲು ಕಾಂಗ್ರೆಸ್ ಮುಂದಾಗಿದೆ. 

ಬೆಂಗಳೂರು :  ಸತತ ನೋಟಿಸ್, ವಿಪ್‌ಗಳಿಗೂ ಜಗ್ಗದೇ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಳ್ಳುತ್ತಿರುವ ಅತೃಪ್ತ ಶಾಸಕರ ಸದಸ್ಯತ್ವ ಅನರ್ಹತೆಯ ಕ್ರಮಕ್ಕೆ ಕಾಂಗ್ರೆಸ್ ಸಂಪೂರ್ಣ ಸಜ್ಜಾಗಿದೆ. 

ಹಲವು ದಿನಗಳಿಂದ ಸರ್ಕಾರದ ವಿರುದ್ಧವೇ ಸಮರ ಸಾರುತ್ತಿರುವ ನಾಲ್ವರು ಅತೃಪ್ತ ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸಲು ನಿರ್ಧಾರ ಮಾಡಲಾಗಿದೆ. 

ಬಜೆಟ್ ಮಂಡನೆಗೂ ಮುನ್ನ ಅತೃಪ್ತರ ರಾಜೀನಾಮೆ ?

ರಮೇಶ್  ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಡಾ. ಉಮೇಶ್ ಜಾಧವ್, ಬಿ. ನಾಗೇಂದ್ರ ವಿರುದ್ಧ ಅಸ್ತ್ರ ಪ್ರಯೋಗಿಸಲು ನಿರ್ಧರಿಸಲಾಗಿದೆ. ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. 

ದೋಸ್ತಿ ಸರ್ಕಾರ ಉಳಿಸಲು 5 ಸಚಿವರ ರಾಜೀನಾಮೆ ?

ಈ ಸಭೆಗೆ ಹಾಜರಾದರೇ ಬಚಾವ್ ಆಗುತ್ತಾರೆ.  ಇಲ್ಲದಿದ್ದರೆ ಕ್ರಮ ಖಚಿತ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದರೂ ಬಗ್ಗದ ನಾಲ್ವರ ವಿರುದ್ಧ ಕ್ರಮ ಮುಂದಾಗಿದೆ. 

click me!