Vokkaliga Reservation: ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ರಸ್ತೆಗಿಳಿಯಲೂ ಸಿದ್ಧ: ಸದಾನಂದಗೌಡ

By Sathish Kumar KHFirst Published Nov 27, 2022, 2:48 PM IST
Highlights

ಒಕ್ಕಲಿಗ ಸಮುದಾಯಕ್ಕೆ ಜನಸಂಖ್ಯೆ ಅನುಗುಣವಾಗಿ ಕನಿಷ್ಟ ಶೇ.12 ಮೀಸಲಾತಿ ಹೆಚ್ಚಳ ಮಾಡಬೇಕು. ನ್ಯಾಯಯುತ ಬೇಡಿಕೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕೇಳಿಕೊಳ್ಳುತ್ತೇನೆ. ಇದು ಭಿಕ್ಷೆಯಲ್ಲ. ಇದು ನಮ್ಮ ನ್ಯಾಯಯುತ ಹಕ್ಕಾಗಿದ್ದು, ಇದಕ್ಕಾಗಿ ನಾವು ರಸ್ತೆಗಿಳಿಯಲೂ ರೆಡಿ ಇದ್ದೇನೆ ಎಂದು ಸಂಸದ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

ಬೆಂಗಳೂರು (ನ.27): ಇತ್ತೀಚೆಗೆ ಸರ್ಕಾರ ಮೀಸಲಾತಿ ಸಂಬಂಧದ ತೀರ್ಮಾನ‌ ಕೈಗೊಂಡಿದೆ. ಅದೇ ರೀತಿ ಒಕ್ಕಲಿಗ ಸಮುದಾಯಕ್ಕೆ ಜನಸಂಖ್ಯೆ ಅನುಗುಣವಾಗಿ ಕನಿಷ್ಟ ಶೇ.12 ಮೀಸಲಾತಿ ಹೆಚ್ಚಳ ಮಾಡಬೇಕು. ನ್ಯಾಯಯುತ ಬೇಡಿಕೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕೇಳಿಕೊಳ್ಳುತ್ತೇನೆ. ಇದು ಭಿಕ್ಷೆಯಲ್ಲ. ಇದು ನಮ್ಮ ನ್ಯಾಯಯುತ ಹಕ್ಕಾಗಿದ್ದು, ಇದಕ್ಕಾಗಿ ನಾವು ರಸ್ತೆಗಿಳಿಯಲೂ ರೆಡಿ ಇದ್ದೇನೆ ಎಂದು ಸಂಸದ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

ಬೆಂಗಳೂರಿನ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಇಂದು ನಡೆದ ಮೀಸಲಾತಿ ಹೆಚ್ಚಳ ಹೋರಾಟದ ಕುರಿತ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಾನು ಆಡಳಿತ ಪಕ್ಷದ ಭಾಗವಾಗಿದ್ದೇನೆ. ಹೀಗಾಗಿ ಎಲ್ಲವನ್ನೂ ಒಪನ್ ಆಗಿ ಇಲ್ಲಿ ಹೇಳೊಕೆ ಆಗೋದಿಲ್ಲ. ಆದರೆ ಎಲ್ಲಿ ಮಾತನಾಡಬೇಕೊ ಅಲ್ಲಿ ಮಾತನಾಡುತ್ತೇನೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ. ನಾವು ಹುಟ್ಟಿಬಂದ ಸಮಾಜದ ಕಾರ್ಯ ಮಾಡುವಲ್ಲಿ ಸ್ವಲ್ಪ ಹಿಂದೆ ಇದ್ದೇವೆ. ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಸಮುದಾಯದ ಹುಡುಗ ಸಿಎಂ ಸ್ಥಾನದಿಂದ ಕೆಳಗಿಳಿಯಲು ಬಿಡೋದಿಲ್ಲ ಎಂದು ನಿರ್ಮಲಾ ನಂದನಾಥ ಸ್ವಾಮೀಜಿಗಳು ಹೋರಾಟ ಮಾಡಿದ್ದರು ಎನ್ನುವುದನ್ನು ಈ ವೇಳೆ ನೆನಪು ಮಾಡಿಕೊಂಡರು.

ಒಕ್ಕಲಿಗ ಮೀಸಲಾತಿ ಹೋರಾಟದ ಮೂಲಕ ಸಿಎಂ ಆಸೆ ಬಿಚ್ಚಿಟ್ಟ ಡಿಕೆಶಿ

ಕೇಂದ್ರದ ಮುಂದೆ ಮೀಸಲಾತಿ ಪ್ರಸ್ತಾಪ: ಮುಂದಿನ ಡಿ.9ರಿಂದ ಸಂಸತ್ ಅಧಿವೇಶನ ಆರಂಭವಾಗಲಿದೆ. ಅಲ್ಲಿ ಒಕ್ಕಲಿಗ ಸಮುದಾಯದವರ ಉದ್ಯೋಗ ಶಿಕ್ಷಣಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹಾಕುತ್ತೇವೆ. ದೇವೆಗೌಡರ ನೇತೃತ್ವದಲ್ಲಿ ಕೇಂದ್ರ ಸರ್ಕಾರದಲ್ಲಿ ಮಾತನಾಡುತ್ತೇವೆ. ಒಕ್ಕಲಿಗ ಸಮುದಾಯದ ನಾವು ಶೇ.16 ಇದ್ದೇವೆ. ನಮಗೆ ಶೇ.12 ಮೀಸಲಾತಿ ಕೊಡಬೇಕು ಎನ್ನುವ ಕೂಗು ಇದೆ. ಒಕ್ಕಲಿಗ ಸಮುದಾಯದ ಜನಸಂಖ್ಯೆ ಅಧ್ಯಯನ ಆಗಬೇಕು. ಕಾಂತರಾಜ್ ವರದಿ ತಿರುಚಲಾಗಿದೆ. ಅನಿವಾರ್ಯವಾದರೆ ಚಿನ್ನಪ್ಪರೆಡ್ಡಿ ನೇತೃತ್ವದಲ್ಲಿ ಹಿಂದೆ ಆದಂತ ಹೋರಾಟವನ್ನು ಬೆಂಗಳೂರಿನ ಬೀದಿಯಲ್ಲಿ ನಾವು ಮಾಡುತ್ತೇವೆ ಎಂದು ಹೇಳಿದರು.

ಮೀಸಲಾತಿ ಹೆಚ್ಚಳ ನಿರ್ಧಾರಕ್ಕೆ ಜ.23ರ ಗಡವು: ನಮ್ಮ ಸಮುದಾಯದ ಆರ್. ಅಶೋಕ್ ಒಳ್ಳೆಯ ಸಾರಿಗೆ ಸಚಿವರಾಗಿದ್ದರು. ಡಿ.ಕೆ.ಶಿವಕುಮಾರ್ ಉತ್ತಮ ಇಂಧನ ಸಚಿವನಾಗಿ ಕೆಲಸ‌ ಮಾಡಿದರು. ಇನ್ನು ಎಚ್.ಡಿ. ಕುಮಾರಸ್ವಾಮಿ ಸಾಲ‌ ಮನ್ನಾ ಮಾಡಿದರು. ದೇವೆಗೌಡ ಮತ್ತು ಎಸ್.ಎಂ. ಕೃಷ್ಣ ಇಬ್ಬರು ಸಮಾಜದ ಕಣ್ಣುಗಳು ಆಗಿದ್ದಾರೆ. ಜನವರಿ 23 ರಂದು ಇಬ್ಬರಿಗೂ ಸಮಾಜದ ವತಿಯಿಂದ ಸನ್ಮಾನ ಮಾಡಲಾಗುವುದು. ಆದರೆ, ಈ ವೇದಿಕೆಯಲ್ಲಿ ಡಿ.ಕೆ. ಶಿವಕುಮಾರ್ ತಮ್ಮ ಭಾಷಣದಲ್ಲಿ ಸ್ವಾಮಿ‌ ಕಾರ್ಯ ಸ್ವಕಾರ್ಯ ಎಲ್ಲವನ್ನೂ ಮಾಡಿದರು ಎಂದು ಡಿಕೆಶಿಗೆ ಟಾಂಗ್‌ ನೀಡಿದರು. ಇನ್ನು ನಮ್ಮ ಸಮಾಜಕ್ಕೆ ಡಬಲ್ ಇಂಜಿನ್ ಸರ್ಕಾರ ಸಿಹಿ ಸುದ್ದಿ ಕೊಡಬೇಕು. ಇದಕ್ಕೆ ಜನವರಿ 23 ಕಡೆಯ ದಿನ. ಸರ್ಕಾರ ನಮಗೆ ಸ್ಪಂದಿಸಬೇಕು. ಇಲ್ಲವಾದರೆ ಹೋರಾಟ ಆರಂಭಿಸಲಾಗುತ್ತದೆ ಎಂದು ನಂಜಾವದೂತ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

click me!