
ಬೆಂಗಳೂರು [ನ.29]: ಮಾಜಿ ಸಚಿವ ಕೆ.ಜೆ.ಜಾರ್ಜ್ ವಿದೇಶಗಳಲ್ಲಿ ಅಕ್ರಮ ಆಸ್ತಿ ಗಳಿಕೆ ಮಾಡಿರುವ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಜಾರಿ ನಿರ್ದೇಶನಾಲಯಕ್ಕೆ ಮತ್ತಷ್ಟು ದಾಖಲೆ ಸಲ್ಲಿಸಿದ್ದಾರೆ.
ಅಮೇರಿಕಾ ಹಾಗೂ ಆಸ್ಟ್ರೇಲಿಯಾದಲ್ಲಿನ ಆಸ್ತಿಗಳ ಕುರಿತು ದಾಖಲೆ ಸಲ್ಲಿಕೆ ಮಾಡಿದ್ದು, ಭ್ರಷ್ಟಾಚಾರದಿಂದ ಗಳಿಸಿರುವ ಹಣವನ್ನು ವಿದೇಶದಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿಂದೆಯೂ ದಾಖಲೆ ಸಮೇತ ದೂರು ನೀಡಿದ್ದ ರವಿಕೃಷ್ಣಾರೆಡ್ಡಿ ಇದೀಗ ಮತ್ತೊಮ್ಮೆ ದಾಖಲೆ ಸಲ್ಲಿಸಿದ್ದಾರೆ.
ಈ ಹಿಂದೆ ಸಲ್ಲಿಸಿದ್ದ ದಾಖಲೆಗಳನ್ನು ಆಧರಿಸಿ ಇಡಿ ಅಧಿಕಾರಿಗಳು ಪ್ರಾಥಮಿಕ ತನಿಖೆಗೆ ಮುಂದಾಗಿದ್ದು, ಇದೀಗ ಮತ್ತೆ ದಾಖಲೆ ಸಲ್ಲಿಸಿ ತನಿಖಾ ಪ್ರಗತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಇನ್ನುದಾಖಲೆ ಸಲ್ಲಿಕೆ ಪ್ರಕ್ರಿಯೆ ಬಳಿಕ ಪ್ರತಿಕ್ರಿಯಿಸಿದ ರವಿಕೃಷ್ಣಾ ರೆಡ್ಡಿ ಇಡಿ ಇಲಾಖೆಗೆ ಬಂದು 20 ಪುಟಗಳಷ್ಟು ಮಾಹಿತಿ ಸಲ್ಲಿಸಿದ್ದೇನೆ. ಸುಮಾರು ನೂರಾರು ಕೋಟಿ ಅವ್ಯವಹಾರ ನಡೆಸಿದ್ದಾರೆ. ದೂರು ನೀಡಿದ್ದರಿಂದ ಅದರ ಪ್ರತಿಯೊಂದು ಫಾಲೋ ಅಪ್ ಮಾಡುತ್ತಿದ್ದೇನೆ ಎಂದಿದ್ದಾರೆ.
ಇನ್ನೂ ಮುಗೀಲಿಲ್ಲ ಡಿಕೆಶಿಗೆ ಟ್ರಬಲ್: ಮತ್ತೊಬ್ಬ ಕೈ ಮುಖಂಡನಿಗೀಗ ED ಭೀತಿ...
ಕೆಲವು ಬ್ಯಾಂಕ್ ಗಳಲ್ಲಿ ಜಾರ್ಜ್ ಸಾಲವನ್ನು ಪಡೆದಿದ್ದಾರೆ. ಆ ಸಾಲವನ್ನು ತೀರಿಸಲು ಬೇರೆ ಬೇರೆ ಅಕೌಂಟುಗಳಿಂದ ಹಣ ವರ್ಗಾವಣೆಯಾಗಿದೆ. ಅದರ ಮಾಹಿತಿಯನ್ನು ಇಡಿ ಇಲಾಖೆಗೆ ನೀಡಿದ್ದೇವೆ. ಅದರ ಮಾಹಿತಿಯನ್ನು ಇಡಿ ಕಲೆ ಹಾಕಬೇಕಾಗಿದೆ. ಸಿಂಗಪುರ, ಮಾರಿಷಸ್ ನಲ್ಲಿ ಕಂಪನಿಗೆ ಹಣ ಹೂಡಿಕೆಯಾಗಿದೆ. ಅದನ್ನು ಈಗ ವೈಟ್ ಮನಿಯಾಗಿ ಬದಲಾವಣೆ ಮಾಡಲಾಗಿದೆ. ಈ ಸಂಬಂಧವೂ ದಾಖಲೆ ನೀಡುವಂತೆ ಅಧಿಕಾರಿಗಳಿಗೆ ದಾಖಲೆ ನೀಡಿದ್ದಾಗಿ ರವಿಕೃಷ್ಣಾ ರೆಡ್ಡಿ ತಿಳಿಸಿದರು.
ಜಾರ್ಜ್ ನನ್ನ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ಆದರೆ ಈ ಬಗ್ಗೆ ಕೋರ್ಟಿಂದ ಯಾವುದೇ ರಿತಿಯ ಸಮನ್ಸ್ ಬಂದಿಲ್ಲ. ಕೋರ್ಟಿಂದ ಸಮನ್ಸ್ ಬಂದ ನಂತರ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ