ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ಟ್ವಿಸ್ಟ್!

By Suvarna NewsFirst Published Jun 9, 2021, 12:37 PM IST
Highlights

* ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ಟ್ವಿಸ್ಟ್..!

* ಮತ್ತೆ ಎಸ್ ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ರಜೆ ವಿಸ್ತರಣೆ

* ಮತ್ತೆ 20 ದಿನ ರಜೆ ತೆಗೆದುಕೊಂಡಿರುವ ಸೌಮೆಂದು ಮುಖರ್ಜಿ

ಬೆಂಗಳೂರು(ಜೂ.09): ದಿನೇ ದಿನೇ ಮಹತ್ವದ ಬೆಳವಣಿಗೆಗಳ ಮೂಲಕ ಇಡೀ ರಾಜ್ಯದ ಗಮನ ಸೆಳೆದಿರುವ ರಮೇಶ್ ಜಾರಕಿಹೊಳಿ ಸಿಡಿ ಕೇಸ್‌ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಹೌದು ತನಿಖೆ ನಡೆಸುತ್ತಿರುವ ಎಸ್‍ಐಟಿ ಮುಖ್ಯಸ್ಥರೇ ದೀರ್ಘ ರಜೆಯ ಮೇಲೆ ತೆರಳಿದ್ದು, ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಎಸ್‌ಐಟಿ ನಡೆಸುತ್ತಿದೆ. ಆದರೀಗ ಈ ಎಸ್‌ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ತಮ್ಮ ರಜೆಯನ್ನು 20 ದಿನಗಳವರೆಗೆ ವಿಸ್ತರಿಸಿದ್ದಾರೆ. ಈ ಮೂಲಕ ಮುಖ್ಯಸ್ಥರಿಲ್ಲದೇ ಸಂಸ್ಥೆ ತನಿಖೆ ನಡೆಸುವಂತಾಗಿದೆ. 

ರಮೇಶ್ ಜಾರಕಿಹೊಳಿ ಸಿಡಿ ಕೇಸ್: ಆರೋಪಿಗಳಿಗೆ ಜಾಮೀನು

ಎಸ್‌ಐಟಿ ಮುಖ್ಯಸ್ಥರ ರಜೆ ಹಲವು ವದಂತಿಗಳನ್ನು ಹುಟ್ಟು ಹಾಕಿದೆ. ಅನಾರೋಗ್ಯ ಕಾರಣ ನೀಡಿ ಸೌಮೆಂದು ಮುಖರ್ಜಿ ಸುಧೀರ್ಘ ರಜೆಗೆ ಹೋಗಿದ್ದಾರಾದರೂ, ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಒತ್ತಡ ಸಹಿಲಾರದೇ ರಜೆ ಮೇಲೆ ತೆರಳಿದ್ರಾ..? ಎಂಬ ಅನುಮಾನ ಮೂಡಿದೆ. ಅಲ್ಲದೇ ಇಡೀ ಪ್ರಕರಣ ಬೇರೆ ರೀತಿ ಸಾಗುತ್ತಾ ಇದೆ, ಹೀಗಿರುವಾಗ ಇದೇ ವಿಚಾರಕ್ಕೆ ಹೊರನಡೆದ್ರಾ..? ಎಂಬ ಮಾತುಗಳೂ ಸದ್ದು ಮಾಡಿವೆ. 

ಅದೇನಿದ್ದರೂ ಸೌಮೆಂದು ಮರಳಿ ಬಂದ ಬಳಿಕವಷ್ಟೇ ಈ ಎಲ್ಲಾ ಅನುಮಾನಗಳಿಗೆ ಉತ್ತರ ಸಿಗಲಿದೆ. ಸದ್ಯ ಅವರ ಅನುಪಸ್ಥಿತಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತನಿಖೆಯ ಜವಾಬ್ದಾರಿ ಹೊತ್ತಿದ್ದಾರೆ.

'ಎಲ್ಲಾ ಸರಿ ಹೋಗಲಿ, ಕುಟುಂಬದೊಂದಿಗೆ ಮಾತಾಡಲ್ಲ' ಯುವತಿ ಸ್ಪಷ್ಟನೆ

click me!