
ಹುಬ್ಬಳ್ಳಿ (ಸೆ.19): ವೀರಶೈವ ಲಿಂಗಾಯತ ಸಮುದಾಯದ ಏಕತೆಯನ್ನು ಬಲಪಡಿಸುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ನಡೆದ ಭವ್ಯ ಏಕತಾ ಸಮಾವೇಶದಲ್ಲಿ ರಂಬಾಪುರಿ ಜಗದ್ಗುರುಗಳು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ಸಮಾಜದ ಒಗ್ಗಟ್ಟು ಮತ್ತು ಧಾರ್ಮಿಕ ಗುರುತಿನ ಸ್ಪಷ್ಟತೆಯ ಕುರಿತು ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಹೊಸ ಧರ್ಮ ಹುಟ್ಟುಹಾಕುವುದಕ್ಕಿಂತ ಇರೋ ಧರ್ಮ ಬೆಳೆಸುವುದು ಉತ್ತಮ:
ಹೊಸ ಧರ್ಮವನ್ನು ಹುಟ್ಟುಹಾಕುವುದಕ್ಕಿಂತ, ಈಗಿರುವ ಧರ್ಮವನ್ನು ಬೆಳೆಸುವುದು ಉತ್ತಮ. ಸಮಾಜದ ಏಕತೆಗಾಗಿ ಕರೆಯಲಾದ ಮಹಾಸಭೆಯಲ್ಲಿ ಸ್ಥಾನಮಾನಗಳಿಗೆ ಗಮನ ಕೊಡಲಾಗಿಲ್ಲ. ಒಬ್ಬಿಬ್ಬರಿಂದ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ, ಎಲ್ಲರೂ ಒಗ್ಗೂಡಿದಾಗ ಮಾತ್ರ ಸಮಾಜವನ್ನು ಬಲಿಷ್ಠಗೊಳಿಸಬಹುದು ಎಂದು ಜಗದ್ಗುರುಗಳು ಹೇಳಿದರು.
ವೀರಶೈವ ಲಿಂಗಾಯತ ಒಂದೇ ಎಂದ ರಂಭಾಪುರಿ ಜಗದ್ಗುರುಗಳು:
ವೀರಶೈವ ಲಿಂಗಾಯತ ಒಂದೇ ಎಂದು ಸ್ಪಷ್ಟಪಡಿಸಿದ ಶ್ರೀಗಳು, ಕೆಲವರು ಇತ್ತೀಚೆಗೆ ಒಡಕಿನ ಧ್ವನಿಗಳನ್ನು ಹುಟ್ಟುಹಾಕಿದ್ದಾರೆ. ನಡೆಯುವ ದಾರಿಯಲ್ಲಿ ಸ್ವಲ್ಪ ಏರುಪೇರಾಗಬಹುದು. ಸರಿಮಾಡಿಕೊಂಡ ಹೋದ್ರೆ ಸಮಾಜಕ್ಕೆ ಉಜ್ವಲ ಭವಿಷ್ಯವಿದೆ. ಸಂವಿಧಾನದಲ್ಲಿ ಆರು ಧರ್ಮಗಳಿಗೆ ಮಾನ್ಯತೆ ನೀಡಲಾಗಿದೆಯಾದರೂ, ವೀರಶೈವ ಲಿಂಗಾಯತ ಸ್ವತಂತ್ರ ಧರ್ಮವಾಗಿ ಮಾನ್ಯತೆ ಪಡೆಯಲು ಇನ್ನೂ ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಕ್ಕಿಲ್ಲ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಗಣತಿ ನೋಡಿ ಎದೆ ದಸಕ್ ಅಂತಿದೆ:
ರಾಜ್ಯ ಸರ್ಕಾರದ ಗಣತಿ ನೋಡಿ ಎದೆ ದಸಕ್ ಅಂತಿದೆ. ಜಾತಿಗಳ ಹೆಸರನ್ನೇ ನಾವು ಇಲ್ಲಿವರಗೆ ಕೇಳಿಲ್ಲ. ಆದರೆ ಸರ್ಕಾರ ಇದೀಗ ಹೊಸ ಹೊಸ ಜಾತಿಗಳನ್ನ ಸೇರಿಸಿದ್ದು ಎಲ್ಲರ ತಲೆ ಬಿಸಿ ಮಾಡಿದೆ. ಹಿಂದೂ ಸಮಾಜವನ್ನು ಜಾತಿ ಜಾತಿಗಳಾಗಿ ವಿಂಗಡಿಸೋ ಯತ್ನ ನಡೆದಿದೆ. ಆ ಮೂಲಕ ವೀರಶೈವ ಲಿಂಗಾಯತ ರ ಸಂಖ್ಯೆ ಕಡಿಮೆ ಮಾಡೋ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಶ್ರೀಗಳು, ಮಾನ್ಯತೆ ಇಲ್ಲದ ಧರ್ಮವನ್ನು ಬರೆಸಿದರೆ ಅದಕ್ಕೆ ಮಾನ್ಯತೆ ಸಿಗುವುದಿಲ್ಲ. ಹೀಗಾಗಿ, ಮಹಾಸಭೆಯು ಕಾನೂನು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ರಂಬಾಪುರಿ ಜಗದ್ಗುರುಗಳು ಸಲಹೆ ನೀಡಿದರು.
ಪಂಚಪೀಠಗಳ ಬಗ್ಗೆ ಟೀಕೆಗೆ ತಿರುಗೇಟು
ವೀರಶೈವ ಪಂಚಪೀಠಗಳ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ನಾವು ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ಬರಲ್ಲ ಅಂತ ಅಲ್ಲಾ. ಬಸವೇಶ್ವರರು ಕೊಟ್ಟು ಈ ಧರ್ಮ ಕ್ಕೆ ಕೊಟ್ಟ ಕೊಡುಗೆಯನ್ನು ಮುಕ್ತಕಂಠದಿಂದ ಮಾತನಾಡುತ್ತೇವೆ. ಆದ್ರೆ ವಿರಕ್ತ ಸ್ವಾಮಿಗಳು ರೇಣುಕಾರಾದ್ಯರ ಹೆಸರನ್ನು ಅಪ್ಪಿತಪ್ಪಿಯು ಹೇಳುವುದಿಲ್ಲ ರೇಣುಕಾರಾದ್ಯರ ಹೆಸರನ್ನು ಅಪ್ಪಿತಪ್ಪಿಯು ಹೇಳುವುದಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ