
ಬೆಂಗಳೂರು (ಸೆ.19): ಹನ್ನೆರಡನೆಯ ಶತಮಾನದ ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿಯ ಸಂದೇಶವನ್ನು ಪ್ರಸಾರ ಮಾಡಲು ಶ್ರಮಿಸುತ್ತಿರುವ ಗಣ್ಯರಿಗೆ 'ರಮಣಶ್ರೀ ಶರಣ ಪ್ರಶಸ್ತಿ'ಗಳನ್ನು ನೀಡಲು ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.
'ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು' ಮತ್ತು 'ರಮಣಶ್ರೀ ಪ್ರತಿಷ್ಠಾನ'ಗಳ ಸಹಯೋಗದೊಂದಿಗೆ ಪ್ರತಿವರ್ಷ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದ್ದು, 2025ನೇ ಸಾಲಿನ ಪ್ರಶಸ್ತಿಗಳಿಗೆ ಅರ್ಹ ವ್ಯಕ್ತಿಗಳ ಹೆಸರನ್ನು ಶಿಫಾರಸ್ಸು ಮಾಡಲು ವಿನಂತಿಸಲಾಗಿದೆ. ಈ ಪ್ರಶಸ್ತಿಗಳನ್ನು ನಾಲ್ಕು ಹಿರಿಯ ಶ್ರೇಣಿ ಮತ್ತು ನಾಲ್ಕು ಉತ್ತೇಜನ ಶ್ರೇಣಿಗಳಾಗಿ ವಿಂಗಡಿಸಲಾಗಿದೆ. ಎರಡೂ ವಿಭಾಗಗಳಲ್ಲಿ ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನೆ, ಆಧುನಿಕ ವಚನ ರಚನೆ, ವಚನ ಸಂಗೀತ, ಮತ್ತು ಶರಣ ಸಂಸ್ಕೃತಿ ಪ್ರಸಾರ ಹಾಗೂ ಸೇವಾ ಸಂಸ್ಥೆ ವಿಭಾಗಗಳಿವೆ.
ಮೇಲೆ ತಿಳಿಸಿದ ಯಾವುದೇ ವಿಭಾಗಗಳಲ್ಲಿ ಗಣನೀಯ ಸಾಧನೆಗೈದ ವ್ಯಕ್ತಿಗಳ ಹೆಸರುಗಳನ್ನು ನಾಮನಿರ್ದೇಶನ ಮಾಡಬಹುದು. ತಮ್ಮ ಶಿಫಾರಸ್ಸಿನೊಂದಿಗೆ, ಅಭ್ಯರ್ಥಿಯ ಸಂಪೂರ್ಣ ವಿವರ, ಪ್ರಕಟಿತ ಪುಸ್ತಕಗಳು ಮತ್ತು ಇತರೆ ಸಾಧನೆಗಳ ವಿವರಗಳನ್ನು ಸೆಪ್ಟೆಂಬರ್ 30, 2025ರೊಳಗೆ ಕಳುಹಿಸಬೇಕಿದೆ.
ಕಳುಹಿಸಬೇಕಾದ ವಿಳಾಸಗಳು:
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ