ನೈಋುತ್ಯ ರೈಲ್ವೆಗೆ ರಾಜಧಾನಿ ಎಕ್ಸ್‌ಪ್ರೆಸ್‌ನಿಂದ ಭಾರೀ ಆದಾಯ

Published : Oct 15, 2020, 07:51 AM IST
ನೈಋುತ್ಯ ರೈಲ್ವೆಗೆ ರಾಜಧಾನಿ ಎಕ್ಸ್‌ಪ್ರೆಸ್‌ನಿಂದ ಭಾರೀ ಆದಾಯ

ಸಾರಾಂಶ

ನೈಋುತ್ಯ ರೈಲ್ವೆಗೆ 2019-20ನೇ ಸಾಲಿನಲ್ಲಿ 10 ರೈಲುಗಳಿಂದ ಒಟ್ಟು 609.36 ಕೋಟಿ ಆದಾಯ| ಈ ಪೈಕಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಿಂದ ಅತಿ ಹೆಚ್ಚು 137.31 ಕೋಟಿ ಆದಾಯ|ದೆಹಲಿ ನಡುವೆ ಸಂಚರಿಸುವ ‘ರಾಜಧಾನಿ ಎಕ್ಸ್‌ಪ್ರೆಸ್‌’ ರೈಲು ಪ್ರಥಮ ಸ್ಥಾನ| 

ಬೆಂಗಳೂರು(ಅ.15): ನೈಋುತ್ಯ ರೈಲ್ವೆಗೆ ಅತಿ ಹೆಚ್ಚು ಆದಾಯ ತಂದುಕೊಡುವ 10 ರೈಲುಗಳ ಪೈಕಿ ಬೆಂಗಳೂರು-ದೆಹಲಿ ನಡುವೆ ಸಂಚರಿಸುವ ‘ರಾಜಧಾನಿ ಎಕ್ಸ್‌ಪ್ರೆಸ್‌’ ರೈಲು ಪ್ರಥಮ ಸ್ಥಾನದಲ್ಲಿದೆ.

ನೈಋುತ್ಯ ರೈಲ್ವೆಗೆ 2019-20ನೇ ಸಾಲಿನಲ್ಲಿ 10 ರೈಲುಗಳಿಂದ ಒಟ್ಟು 609.36 ಕೋಟಿ ಆದಾಯ ಬಂದಿದೆ. ಈ ಪೈಕಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಿಂದ ಅತಿ ಹೆಚ್ಚು 137.31 ಕೋಟಿ ಆದಾಯ ಬಂದಿದೆ. 

ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್‌ ಟಿಕೆಟ್‌ ದರ 50ಕ್ಕೆ ಹೆಚ್ಚಳ

ಉಳಿದಂತೆ ಸಂಘಮಿತ್ರ ಎಕ್ಸ್‌ಪ್ರೆಸ್‌ ರೈಲು 73.92 ಕೋಟಿ, ಕರ್ನಾಟಕ ಎಕ್ಸ್‌ಪ್ರೆಸ್‌ನಿಂದ 72.62 ಕೋಟಿ, ತುರೊಂತೋ ಎಕ್ಸ್‌ಪ್ರೆಸ್‌ನಿಂದ 62.70 ಕೋಟಿ,     ಯಶವಂತಪುರ- ಹೌರಾ ಎಕ್ಸ್‌ಪ್ರೆಸ್‌ನಿಂದ 62.21 ಕೋಟಿ, ಗೋವಾ ಎಕ್ಸ್‌ಪ್ರೆಸ್‌ನಿಂದ 42.49 ಕೋಟಿ, ಅಗರ್ತಲಾ ಹಮ್‌ಸಫರ್‌ ರೈಲಿನಿಂದ 41.13 ಕೋಟಿ, ಸಂಪರ್ಕ ಕ್ರಾಂತಿ ರೈಲಿನಿಂದ 39.52 ಕೋಟಿ, ಪ್ರಶಾಂತಿ ಎಕ್ಸ್‌ಪ್ರೆಸ್‌ನಿಂದ 39.04 ಕೋಟಿ ಹಾಗೂ ಗುವಾಹಟಿ ಎಕ್ಸ್‌ಪ್ರೆಸ್‌ ರೈಲಿನಿಂದ 38.42 ಕೋಟಿ ಆದಾಯ ಬಂದಿದೆ ಎಂದು ನೈಋುತ್ಯ ರೈಲ್ವೆ ಮಾಹಿತಿ ನೀಡಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರ ಪಹಣಿಯಲ್ಲಿ ಮಹತ್ವದ ಬದಲಾವಣೆ! ಇನ್ನು ಆರ್‌ಟಿಸಿಯಲ್ಲಿ ಅನ್ನದಾತರ ಫೋಟೋ, ವಿಳಾಸ, ಕ್ಯೂಆರ್ ಕೋಡ್!
ಹೆಲ್ಮೆಟ್ ಕೊಟ್ಟ, ಪಿನ್ ಹೇಳಿದೆ, ಬೈಕ್ ಹತ್ತೋ ಮೊದಲೇ ಹೊರಟು ಬಿಟ್ಟ, ಬೆಂಗ್ಳೂರು ಯುವತಿ ಟ್ಯಾಕ್ಸಿ ಕತೆ