7 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ: ಅಪಾರ ನಷ್ಟ!

By Kannadaprabha NewsFirst Published Apr 22, 2020, 8:16 AM IST
Highlights

7ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ: ಅಪಾರ ನಷ್ಟ| ಉತ್ತರ ಕನ್ನಡದಲ್ಲಿ 60ಕ್ಕೂ ಹೆಚ್ಚು ವಿದ್ಯುತ್‌ ಕಂಬ ನೆಲಕ್ಕೆ

ಬೆಂಗಳೂರು9ಏ.22): ರಾಜ್ಯದ ಯಾದಗಿರಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಸೇರಿದಂತೆ 7ಕ್ಕೂ ಹೆಚ್ಚು ಜಿಲ್ಲೆಗಳ ಹಲವು ಕಡೆ ಸೋಮವಾರ ತಡರಾತ್ರಿ ಮಳೆ ಆರ್ಭಟ ಮುಂದುವರಿದ್ದು, ಅಪಾರ ಪ್ರಮಾಣದಲ್ಲಿ ಬೆಳೆಗಳು ನಾಶವಾಗಿವೆ.

ಉತ್ತರಕನ್ನಡ ಜಿಲ್ಲೆಯ ವಿವಿಧ ಕಡೆ ಗುಡುಗು ಸಿಡಿಲು ಸಹಿತ ಅಲಿಕಲ್ಲಿನ ಭಾರಿ ಮಳೆಯಾಗಿದ್ದು, ಮನೆ, 60ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು, ತೆಂಗು, ಮಾವು ಸೇರಿದಂತೆ ಇತರ ಫಸಲುಗಳಿಗೆ ಹಾನಿಯಾಗಿದೆ.

ಬಿರುಗಾಳಿ ಸಹಿತ ಮಳೆಗೆ ನೆಲಕಚ್ಚಿದ ಬಾಳೆ, ಮಾವು: ಸಂಕಷ್ಟದಲ್ಲಿ ರೈತ..!

ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಸುಮಾರು ನಗರದ ವಿವಿಧ ಪ್ರದೇಶಗಳ 250ಕ್ಕೂ ಹೆಚ್ಚ ಮನೆಗಳಿಗೆ ನುಗ್ಗಿದ ನೀರು ಮನೆಗಳಿಗೆ ತೊಂದರೆಯಾಗಿದ್ದರೆ, ಮರಗಳು ಬಿದ್ದು 4 ಬೈಕ್‌ಗಳು, ಕಾರು, ಮನೆಗಳ ಜಖಂ ಆಗಿದ್ದು, ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನಲ್ಲಿ ಕಟಾವಿಗೆ ಬಂದಿದ್ದ ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಮಳೆಗೆ ನಾಶವಾಗಿದ್ದು, ರೈತರಿಗೆ ಬರ ಸಿಡಿಲು ಬಡಿದಂತಾಗಿದೆ. ಇನ್ನು ಉಡುಪಿ ಜಿಲ್ಲೆಯ ಕಾರ್ಕಳ, ಬಳ್ಳಾರಿಯ ಹೂವಿನಹಡಗಲಿಯಲ್ಲೂ ಸಾಧಾರಣ ಮಳೆಯಾಗಿದೆ.

click me!