ನಗರದಲ್ಲಿ ಸೋಮವಾರ ತಡರಾತ್ರಿಯಿಂದ ಬಹುತೇಕ ಗಂಟೆಗಳ ಕಾಲ ಬಿಟ್ಟೂಬಿಡದೇ ಸುರಿದ ಜಡಿ ಮಳೆಗೆ ಉದ್ಯಾನ ನಗರಿ ನೆನೆದು ಮುದ್ದೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡು ಇಡೀ ನಗರವೇ ಜಲಾವೃತಗೊಂಡಿದೆಯೋ ಎಂಬ ಭಾವ ಮೂಡಲು ಕಾರಣವಾಯ್ತು.
ಬೆಂಗಳೂರು (ಅ.16): ನಗರದಲ್ಲಿ ಸೋಮವಾರ ತಡರಾತ್ರಿಯಿಂದ ಬಹುತೇಕ ಗಂಟೆಗಳ ಕಾಲ ಬಿಟ್ಟೂಬಿಡದೇ ಸುರಿದ ಜಡಿ ಮಳೆಗೆ ಉದ್ಯಾನ ನಗರಿ ನೆನೆದು ಮುದ್ದೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡು ಇಡೀ ನಗರವೇ ಜಲಾವೃತಗೊಂಡಿದೆಯೋ ಎಂಬ ಭಾವ ಮೂಡಲು ಕಾರಣವಾಯ್ತು. ರಸ್ತೆಗಳಲ್ಲಿ ನೀರು ನದಿಯಂತೆ ಹರಿದು ಸಂಚಾರ ವ್ಯತ್ಯಯಕ್ಕೆ ಕಾರಣವಾದರೆ, ಅಪಾರ್ಟ್ ಮೆಂಟ್‌ಗಳ ಬೇಸ್‌ಮೆಂಟ್‌ಗಳಲ್ಲಿದ್ದ ವಾಹನಗಳು ಮುಳುಗಿ, ಜನ ರಸ್ತೆಗಿಳಿಯಲು ಸಂಕಟ ಪಟ್ಟು ವ್ಯಾಪಾರ ಕುಸಿಯಿತು. ಇಡೀ ದಿನ ಮೋಡ ಕವಿದ ವಾತಾವರಣ ಹಾಗೂ ಜಡಿ ಮಳೆ ಇಡೀ ನಗರವನ್ನು ಚಳಿಯಲ್ಲಿ ನಡುಗಿಸಿತು.
ಆಗ್ನೆಯ ಬಂಗಾಳ ಉಪಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಕಾರಣ ಇನ್ನೂ 2-3 ದಿನ ಇದೇ ರೀತಿಯ ಜಡಿಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಹೀಗಾಗಿ ಮಳೆ ಅಬ್ಬರ ಇದೇ ರೀತಿ ಮುಂದುವರೆದರೆ ನಿತ್ಯದ ಜೀವನ ಮತ್ತಷ್ಟು ಹೈರಾಣಾಗಲಿದೆ. ವಿಪರೀತ ಮಳೆಯಿಂದಾಗಿ ನಗರದ ಹೃದಯಭಾಗ ಮೆಜೆಸ್ಟಿಕ್ ಸೇರಿದಂತೆ ಎಲ್ಲೆಡೆ ರಸ್ತೆಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಸಿತು. ಉತ್ತರದ ಭಾಗಗಳಾದ ವಿದ್ಯಾರಣ್ಯಪುರ, ಕೋರಮಂಗಲ, ಯಲಹಂಕ, ದೇವನಹಳ್ಳಿ, ಹೆಣ್ಣೂರು ಕ್ರಾಸ್, ಜಕ್ಕೂರು, ಥಣಿಸಂದ್ರಗಳಲ್ಲಿ ಮಳೆ ಹೆಚ್ಚಾಗಿ ಆರ್ಭಟಿಸಿತು.
ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಇಳಿದು ಹೊಸ ಜನಾದೇಶ ಪಡೆಯಲಿ: ಎಂ.ಪಿ.ರೇಣುಕಾಚಾರ್ಯ
ದಕ್ಷಿಣ ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ಚಂದ್ರಾಲೇಔಟ್, ನಾಗರಭಾವಿ, ಕೆಂಗೇರಿ ಉಪನಗರ, ಉಲ್ಲಾಳ, ರಾಜರಾಜೇಶ್ವರಿ ನಗರ, ಮೈಸೂರು ರಸ್ತೆ ಪ್ರದೇಶದಲ್ಲಿ ಆಗಾಗ ಜಡಿಮಳೆ ಬಂದರೆ ಹಲವು ಸಮಯ ಜೋರಾದ ಮಳೆಯಾಯಿತು. ಪರಪ್ಪನ ಅಗ್ರಹಾರ ಸುತ್ತಮುತ್ತ ಭಾರಿ ಮಳೆ ಸುರಿದ ಪರಿಣಾಮ ಮುಖ್ಯ ರಸ್ತೆಯಲ್ಲಿ ನೀರು ತುಂಬಿ ವಾಹನ ಸವಾರರು ಸಮಸ್ಯೆಗೀಡಾದರು. ಸಣ್ಣ ಮಳೆಗೆ ರಸ್ತೆಯಲ್ಲಿ ಎರಡು ಅಡಿಯಷ್ಟು ನೀರು ನಿಂತಿದ್ದು, ಹೊಸ ರೋಡ್‌ನಿಂದ ಸರ್ಜಾಪುರ ಸಂಪರ್ಕಿಸುವ ರಸ್ತೆ ಜಲಾವೃತಗೊಂಡಿತ್ತು. ಬೆಳ್ಳಂದೂರು ಕೆರೆ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟವಾಗಿತ್ತು.
ದೊಡ್ಡದೊಡ್ಡ ಗುಂಡಿ, ಕೆಸರಿನ ರಸ್ತೆಗಳಲ್ಲಿ ವಾಹನಗಳು ಸಿಲುಕಿಕೊಂಡವು. ಸುತ್ತ 2 ಕಿ.ಮೀ. ಸಂಚಾರ ಸಾಧ್ಯವಾಗದೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಲವು ವಾಹನಗಳು ಕೆಟ್ಟು ನಿಂತು ಸವಾರರು ಪೇಚಿಗೆ ಸಿಲುಕಿದರು. ಜೋರು ಮಳೆಯ ಪರಿಣಾಮ ಕಾಮಗಾರಿ ನಡೆಯುತ್ತಿದ್ದ ಜಯ ಮಹಲ್ ರಸ್ತೆಯುದ್ದಕ್ಕೂ ರಾಡಿ, ಕೆಂಪುಮಣ್ಣಿನ ನೀರು ಹರಿಯಿತು. ವಾಹನಗಳು ರಸ್ತೆಯಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಉತ್ತರ ಹಳ್ಳಿ ರೋಡ್, ಎಚ್‌ಎಂಟಿ ಲೇಔಟ್, ಸದಾ ಶಿವನಗರ, ಓಕಳೀಪುರಂ, ವಿಂಡರ್‌ಮ್ಯಾನರ್, ಗೊರಗುಂಟೆ ಪಾಳ್ಯಗಳಲ್ಲಿ ಮಳೆ ವಿಪರೀತವಾಗಿತ್ತು.
ಅಂಡರ್‌ಪಾಸ್‌ನಲ್ಲಿ ನೀರು: ಮುರುಗೇಶ್ ಪಾಳ್ಯ ಬೆಳ್ಳಂದೂರು ಮುಖ್ಯ ರಸ್ತೆ ನೀರು ನಿಂತು ಕಾರು, ಬೈಕ್ ಸೇರಿ 10ಕ್ಕೂ ಹೆಚ್ಚು ವಾಹನಗಳು ಕೆಟ್ಟು ನಿಂತಿದ್ದವು. ಕೊಡಗೆಹಳ್ಳಿ ಅಂಡರ್‌ಪಾಸ್‌ನಲ್ಲಿ 5 ಅಡಿ ನೀರು ನಿಂತಿತ್ತು. ಇಲ್ಲಿ ಟಿಟಿ ವಾಹನವೊಂದು ಸಿಲುಕಿತು. ಏರ್‌ಪೋರ್ಟ್ ರಸ್ತೆ ಜಾಮ್: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ಏರ್‌ಪೋರ್ಟ್‌ನಿಂದ ಹೋಗಿ ಬರುವ ವಾಹನ ಸವಾರರಲ್ಲಿ ರೇಜಿಗೆ ಹುಟ್ಟಿಸಿತು. ಈ ಬಗ್ಗೆ ಹಲವರು 'ಎಕ್ಸ್'ನಲ್ಲಿ ಬೇಸರ ತೋಡಿ ಕೊಂಡರು. ಹುಣಸಮಾರನಹಳ್ಳಿ ಬಳಿ ಟ್ರಾಫಿಕ್ ಜಾಮ್ ಆಗಿದ್ದರಿಂದ ಗಂಟೆಗಟ್ಟಲೆ ವಾಹನಗಳು ನಿಂತಿದ್ದವು.
ಪ್ರಜ್ವಲ್ ರೇವಣ್ಣ 'ಸೀರೆ'ಯಸ್ ಕೇಸ್ ಡಿಎನ್‌ಎ ಟೆಸ್ಟ್‌ನಲ್ಲಿ ಸಾಬೀತು!
ಸರಾಸರಿಗಿಂತ 228% ಅಧಿಕ ಮಳೆ: ನಗರದಲ್ಲಿ ಎಡ ಬಿಡದೇ ಸುರಿಯುತ್ತಿರುವ ಮಳೆಯಿಂದ ನಗರದ ವಿವಿಧ ಭಾಗದಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಸ್ವತಃ ಕರೆ ಸ್ವೀಕರಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಉಪಮುಖ್ಯಮಂತ್ರಿ ಎಲ್ಲಾ ವಲಯ ಅಧಿಕಾರಿಗಳ ಜತೆಗೆ ಆನ್‌ಲೈನ್‌ನಲ್ಲಿ ಸಭೆ ನಡೆಸಿದರು. ಮಳೆ ಅನಾಹುತ ನಿಯಂತ್ರಣ ಕ್ರಮಗಳು, ನಿಯಂತ್ರಣ ಕೊಠಡಿ ಕಾರ್ಯನಿರ್ವಹಣೆ, ಸ್ವಚ್ಛತಾ ಡ್ರೈವ್ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಕುರಿತು ಚರ್ಚಿಸಿದರು. ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ರಾಜಕಾಲುವೆ, ತಗ್ಗು ಪ್ರದೇಶಗಳ ಸಮಸ್ಯೆಗೆ ಳನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾ ಗುತ್ತದೆ. ಕಳೆದ 24 ತಾಸುಗಳಿಂದ ವಾಯುಭಾರ ಕುಸಿತ ಉಂಟಾಗಿ ಒಂದು ದಿನದಲ್ಲಿ ಬರಬೇಕಾದ ಸರಾಸರಿ ಮಳೆಗಿಂತ ಶೇ.228 ರಷ್ಟು ಮಳೆ ಹೆಚ್ಚು ಬಂದಿದೆ. ಹೀಗಾಗಿ, ಮುಂದಿನ ಮೂರು ದಿನಗಳ ಕಾಲ ನಾಗರಿಕರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.