ಕಷ್ಟ ಕೇಳಿಕೊಂಡು ಬಂದ ವ್ಯಕ್ತಿಗೆ 'ಹೇಯ್ ಥೂ..' ಎಂದ ಸಿಎಂ! ವಿಡಿಯೋ ವೈರಲ್!

By Suvarna NewsFirst Published Oct 15, 2024, 11:24 PM IST
Highlights

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಪರಿಹಾರ ಕೇಳಿಕೊಂಡ ಬಂದ ವ್ಯಕ್ತಿ ಹೇಯ್ ಥೂ ಎಂದು ಬೈದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಬೆಂಗಳೂರು (ಅ.15): ಜನಪರ, ಬಡವರ ಪರ ಮುಖ್ಯಮಂತ್ರಿ ಎಂದೇ ಹೆಸರಾಗಿರುವ ಸಿಎಂ ಬಳಿ ಹೋದಲ್ಲಿ ಬಂದಲ್ಲಿ ಕಷ್ಟ ಹೇಳಿಕೊಂಡು ಬರುವುದು ಸಾಮಾನ್ಯ, ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯದಿಂದ ಕೊನೆಗೆ ಸಿಎಂ ಬಳಿ ಹೋದರೆ ಪರಿಹಾರ ಸಿಗುತ್ತದೆ ಎಂದು ಹೋಗಿರುತ್ತಾರೆ. ಹೀಗೆ ಕಷ್ಟ ಕೇಳಿಕೊಂಡು ಬಂದ ಜನರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಎಂತದ್ದೇ ಪರಿಸ್ಥಿತಿಯಲ್ಲಿದ್ದರೂ ಸೌಜನ್ಯದಿಂದ ವರ್ತಿಸಬೇಕು. ಆದರೆ ಸಿಎಂ ಸಿದ್ದರಾಮಯ್ಯ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಎಲ್ಲ ಕ್ಷೇತ್ರಕ್ಕೆ ಭೇಟಿ ನೀಡಿದ್ದ ವೇಳೆ ಸಹಾಯ ಕೇಳಿಕೊಂಡ ಬಂದವರಿಗೆ ಸಿಎಂ ನಡೆದುಕೊಂಡ ರೀತಿ ವ್ಯಾಪಕ  ಟೀಕೆಗೆ ಗುರಿಯಾಗಿದೆ.

ನಾವು ಬಡವರ ಪರ, ಜನಸಾಮಾನ್ಯರ ಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಇವರೇನಾ ಎಂದು ಟೀಕಸಿದ್ದಾರೆ. ಹೌದು ಸಿಎಂ ಸಿದ್ದರಾಮಯ್ಯ ಜನ ಸಾಮಾನ್ಯರೊಂದಿಗೆ ಆ ರೀತಿ ವರ್ತಿಸುವುದು ಇದೇ ಮೊದಲೇನಲ್ಲ. ಹಿಂದೆ ಸಿಎಂ ಜನಸ್ಪಂದನ ವೇಳೆ ಗಡುಸಾಗಿ ವರ್ತಿಸಿದ್ದರು. ರೈತ ಮಹಿಳೆಯ ಸೆರಗು ಎಳೆ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದರು. ಇದೀಗ ಮುಡಾ ಹಗರಣದ ಟೆನ್ಷನ್‌ನಿಂದಲೋ, ಅಹಂಕಾರದಿಂದಲೋ ಸಹಾಯ ಕೇಳಿ ಬಂದ ವ್ಯಕ್ತಿಯೊಬ್ಬರನ್ನು ಕಂಡು ಆಕ್ರೋಶಗೊಂಡ ಸಿಎಂ ಸಿದ್ದರಾಮಯ್ಯ 'ಹೇ ಥೂ.. ನಡಿಯಾಚೆ' ಎಂಬಂತೆ ಬೈದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಟೀಕೆಗೆ ಗುರಿಯಾಗಿದೆ.

Latest Videos

ಮಸೀದಿಯೊಳಗೆ ಜೈಶ್ರೀರಾಮ್ ಘೋಷಣೆ ಕೂಗಿದ್ರೆ ಧಾರ್ಮಿಕ ಭಾವನೆ ಹೇಗೆ ಕೆರಳುತ್ತೆ? ಹೈಕೋರ್ಟ್ ಪ್ರಶ್ನೆ

ವಿಡಿಯೋದಲ್ಲಿ ಏನಿದೆ? 

ಸಿಎಂ ಸಿದ್ದರಾಮಯ್ಯನವರು ಸವದತ್ತಿ ಯಲ್ಲಮ್ಮ ದರ್ಶನ್ ಪಡೆದು ಹೊರಬರುತ್ತಿದ್ದಾರೆ. ಈ ವೇಳೆ  ಸಿದ್ದರಾಮಯ್ಯರ ಅಭಿಮಾನಿಗಳು ಹಾಗೂ ಸ್ಥಳೀಯರ ಜಯಕಾರ ಕೂಗುತ್ತಿದ್ದಾರೆ. ಈ  ನಡುವೆ ವ್ಯಕ್ತಿಯೊಬ್ಬರು ಎದುರಾಗುತ್ತಾರೆ, ಜಿಲ್ಲಾಡಳಿತದಿಂದ ನಮ್ಮ ಕೆಲಸ ಆಗುತ್ತಿಲ್ಲ ಪರಿಹರಿಸಿ ಎಂದು ವ್ಯಕ್ತಿ ಕೇಳಿಕೊಂಡಿದ್ದಾರೆ. ಈ ವೇಳೆ ಆಕ್ರೋಶಗೊಂಡ ಸಿದ್ದರಾಮಯ್ಯ ಹೇ ಥೂ ದೇವಸ್ಥಾನದಲ್ಲೂ ಇದೇ ಕೆಲಸನಾ? ಎಂದು ಮುಂದೆ ಸಾಗಿದ್ದಾರೆ.

ವಿಪಕ್ಷ ನಾಯಕ ಆರ್‌ ಅಶೋಕ್ ಕಿಡಿ:

ರೈತ ಮುಖಂಡನೊಂದಿಗೆ ಸಿಎಂ ದುರ್ವರ್ತನೆಯ ವಿಡಿಯೋ ಟ್ವಿಟರ್ ಎಕ್ಸ್ ನಲ್ಲಿ ಹಂಚಿಕೊಂಡಿರುವ ವಿಪಕ್ಷ ನಾಯಕ ಆರ್ ಅಶೋಕ್, 'ಇದೇನಾ ಒಬ್ಬ ನಾಡಿನ ಮುಖ್ಯಮಂತ್ರಿ ಪ್ರಜೆಗಳನ್ನು ನಡೆಸಿಕೊಳ್ಳುವ ರೀತಿ? ಇದೇನಾ ಬಡವರು, ರೈತರು ಮೇಲೆ ಒಬ್ಬ ಮುಖ್ಯಮಂತ್ರಿಗೆ ಇರಬೇಕಾದ ಸಹನೆ, ಸಹಾನುಭೂತಿ, ಸಂವೇದನೆ? ತಾಯಿ ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲೇ ಇಂತಹ ದುರ್ನಡತೆ ಪ್ರದರ್ಶನ ಮಾಡಿದ್ದಾರಲ್ಲ, ಆ ತಾಯಿ ಯಲ್ಲಮ್ಮ ಮೆಚ್ಚುತ್ತಾಳಾ? ಅದು ಹೋಗಲಿ, ಇಂತಹ ದುರ್ನಡತೆಯನ್ನ ಮುಖ್ಯಮಂತ್ರಿಗಳ 'ಆತ್ಮಸಾಕ್ಷಿ'ಯಾದರೂ ಒಪ್ಪುತ್ತಾ?  ಎಂದು ಪ್ರಶ್ನಿಸಿದ್ದಾರೆ.

click me!