
ನೀವು ರೈಲಿನಲ್ಲಿ ಪದೇ ಪದೇ ಪ್ರಯಾಣ ಮಾಡ್ತೀರಾ? ಹಾಗಿದ್ರೆ ಈ ಸುದ್ದಿ ನಿಮಗಾಗಿಯೇ. ಇನ್ಮುಂದೆ ರೈಲ್ವೆ ಸ್ಟೇಷನ್‌ಗಳಲ್ಲಿ ಕ್ಯೂ ನಿಲ್ಲದೇ, ನಿಮ್ಮ ಹೆಚ್ಚುವರಿ ಲಗೇಜ್‌ಗಳನ್ನು ಆನ್‌ಲೈನ್‌ನಲ್ಲೇ ಮುಂಚಿತವಾಗಿ ಬುಕ್ ಮಾಡಬಹುದು. ಭಾರತೀಯ ರೈಲ್ವೆ ಈ ಹೊಸ ಸೌಲಭ್ಯವನ್ನು ಜಾರಿಗೆ ತಂದಿದೆ.
ನಾಳೆಯಿಂದಲೇ ಈ ಸೇವೆ ಶುರುವಾಗಲಿದ್ದು, ಪ್ರಯಾಣಿಕರು www.parcel.indianrail.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಹೆಚ್ಚುವರಿ ಲಗೇಜ್ ಬುಕ್ ಮಾಡಬಹುದು. ನಿಮ್ಮ ಪ್ರಯಾಣದ ವಿವರಗಳನ್ನು (ಹೊರಡುವ ಸ್ಟೇಷನ್, ತಲುಪುವ ಸ್ಥಳ, ಟ್ರೈನ್ ನಂಬರ್ ಇತ್ಯಾದಿ) ಮತ್ತು ಲಗೇಜ್‌ನ ವಿವರಗಳನ್ನು ನಮೂದಿಸಿದರೆ, ಪೋರ್ಟಲ್‌ನಲ್ಲೇ ಸರಕು ಸಾಗಣೆ ಶುಲ್ಕ ಎಷ್ಟು ಅಂತ ಗೊತ್ತಾಗುತ್ತೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ, ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಬೇಕು. ನಂತರ, ನೀವು ಪ್ರಯಾಣ ಆರಂಭಿಸುವ ಸ್ಟೇಷನ್‌ನ ಪಾರ್ಸೆಲ್ ಕಚೇರಿಗೆ ಲಗೇಜ್ ತೆಗೆದುಕೊಂಡು ಹೋಗಿ ತೂಕವನ್ನು ಖಚಿತಪಡಿಸಿಕೊಳ್ಳಬೇಕು. ಅಲ್ಲಿ ಅಂತಿಮ ಶುಲ್ಕವನ್ನು ಪಾವತಿಸಿದ ನಂತರ ನಿಮಗೆ ರಶೀದಿ ಸಿಗುತ್ತದೆ. ನೀವು ತಲುಪುವ ಸ್ಥಳದಲ್ಲಿ ಲಗೇಜ್ ಪಡೆಯಲು ಈ ರಶೀದಿ ಬೇಕೇಬೇಕು. ಅಷ್ಟೇ ಅಲ್ಲ, 'ಟ್ರ್ಯಾಕ್ & ಟ್ರೇಸ್' (Track & Trace) ಸೇವೆಯ ಮೂಲಕ ನಿಮ್ಮ ಲಗೇಜ್ ಎಲ್ಲಿದೆ ಅಂತ ಲೈವ್ ಆಗಿ ಟ್ರ್ಯಾಕ್ ಮಾಡಬಹುದು. ಲಗೇಜ್ ನಿಮ್ಮ ಊರು ತಲುಪಿದಾಗ ನಿಮ್ಮ ಮೊಬೈಲ್‌ಗೆ SMS ಕೂಡಾ ಬರುತ್ತೆ.
ಇದನ್ನೂ ಓದಿ: ರಾಜ್ಯಕ್ಕೆ ಮತ್ತೆ ಕಾವೇರಿ ಆಘಾತ: CWRC ಆದೇಶ ಎತ್ತಿಹಿಡಿದ CWMA; ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸಲು ಸೂಚನೆ!
ಪ್ರಯಾಣಿಕರು ಯಾವ ಕ್ಲಾಸ್‌ನಲ್ಲಿ ಎಷ್ಟು ಕೆ.ಜಿ. ಲಗೇಜ್ ಅನ್ನು ಉಚಿತವಾಗಿ ಮತ್ತು ಎಷ್ಟು ಕೆ.ಜಿ.ಯನ್ನು ಹೆಚ್ಚುವರಿ ಶುಲ್ಕ ಪಾವತಿಸಿ ಕೊಂಡೊಯ್ಯಬಹುದು ಎಂಬುದನ್ನು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.
ಸೆಕೆಂಡ್ ಕ್ಲಾಸ್ (ಜನರಲ್): 35 ಕೆ.ಜಿ. ವರೆಗೆ ಉಚಿತ. ಹೆಚ್ಚುವರಿಯಾಗಿ 70 ಕೆ.ಜಿ. ವರೆಗೆ ಶುಲ್ಕ ಪಾವತಿಸಿ ಕೊಂಡೊಯ್ಯಬಹುದು.
ಸ್ಲೀಪರ್ ಕ್ಲಾಸ್: 40 ಕೆ.ಜಿ. ವರೆಗೆ ಉಚಿತ. ಹೆಚ್ಚುವರಿಯಾಗಿ 80 ಕೆ.ಜಿ. ವರೆಗೆ ಶುಲ್ಕ ಪಾವತಿಸಿ ಕೊಂಡೊಯ್ಯಬಹುದು.
ಎಸಿ 3-ಟೈಯರ್ / ಎಸಿ ಚೇರ್ ಕಾರ್: 40 ಕೆ.ಜಿ. ವರೆಗೆ ಉಚಿತ. ಹೆಚ್ಚುವರಿಯಾಗಿ 40 ಕೆ.ಜಿ. ವರೆಗೆ ಶುಲ್ಕ ಪಾವತಿಸಿ ಕೊಂಡೊಯ್ಯಬಹುದು.
ಫಸ್ಟ್ ಕ್ಲಾಸ್ ಎಸಿ: 70 ಕೆ.ಜಿ. ವರೆಗೆ ಉಚಿತ. ಹೆಚ್ಚುವರಿಯಾಗಿ 150 ಕೆ.ಜಿ. ವರೆಗೆ ಶುಲ್ಕ ಪಾವತಿಸಿ ಕೊಂಡೊಯ್ಯಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ