ಸಾಂಸ್ಕೃತಿಕ ನಗರಿ ಮೈಸೂರನ್ನು ಕರಾವಳಿ ಕರ್ನಾಟಕದೊಂದಿಗೆ ಸಂಪರ್ಕಿಸುವಂತೆ ಸಂಸದ ಪ್ರತಾಪ್ ಸಿಂಹ ಮಾಡಿದ್ದ ಮನವಿಯನ್ನು ಕೇಂದ್ರ ರೈಲ್ವೆ ಇಲಾಖೆ ಒಪ್ಪಿಕೊಂಡಿದೆ. ಅದರೊಂದಿಗೆ ಶೀಘ್ರದಲ್ಲಿಯೇ ಬೆಂಗಳೂರು-ಮಂಗಳೂರು ರೈಲು ಶೀಘ್ರದಲ್ಲಿಯೇ ಮುರ್ಡೇಶ್ವರಕ್ಕೆ ವಿಸ್ತರಣೆಯಾಗಲಿದೆ.
ಬೆಂಗಳೂರು (ಸೆ.6): ಕರಾವಳಿ ಕರ್ನಾಟಕ ಹಾಗೂ ಮೈಸೂರಿನ ಜನತೆಗೆ ಕೇಂದ್ರ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಶೀಘ್ರದಲ್ಲಿಯೇ ಬೆಂಗಳೂರು- ಮೈಸೂರು-ಮಂಗಳೂರು ಎಕ್ಸ್‌ಪ್ರೆಸ್‌ಅನ್ನು ಅರ್ಧ ಕರಾವಳಿಗೆ ವಿಸ್ತರಣೆ ಮಾಡಲು ರೈಲ್ವೆ ಇಲಾಖೆ ಒಪ್ಪಿದೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಬೆಂಗಳೂರು-ಮೈಸೂರು-ಮಂಗಳು ರೈಲನ್ನು ಕಾರವಾರದವರೆಗೂ ವಿಸ್ತರಣೆ ಮಾಡುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಅಂದು ಮನವಿ ಸ್ವೀಕರಿಸಿದ್ದ ರೈಲ್ವೆ ಸಚಿವ ಈ ಬಗ್ಗೆ ಗಮನ ನೀಡುವುದಾಗಿ ತಿಳಿಸಿದ್ದರು. ಇಲ್ಲಿಯವರೆಗೂ ಈ ರೈಲು ಮಂಗಳೂರುಗೆ ಕೊನೆಯಾಗುತ್ತಿತ್ತು. ಮೊದಲ ಹಂತವಾಗಿ ಈ ರೈಲನ್ನು ಉತ್ತರ ಕನ್ನಡದ ಮುರ್ಡೇಶ್ವರದವರೆಗೆ ವಿಸ್ತರಣೆ ಮಾಡಿದೆ. ಇಲ್ಲಿಯವರೆಗೂ ಬೆಂಗಳೂರು-ಮುರ್ಡೇಶ್ವರದ ನಡುವೆ ವಾರಕ್ಕೆ ಒಮ್ಮೆ ರೈಲು ಸಂಚಾರ ಮಾಡುತ್ತಿತ್ತು. ಆದರೆ, ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ರೈಲು (ರೈಲು ನಂಬರ್ 16585/86) ಮುರ್ಡೇಶ್ವರದವರೆಗೆ ಪ್ರತಿನಿತ್ಯ ಸಂಚಾರ ಮಾಡಲಿದೆ. ಪ್ರಸ್ತುತ ಬೆಂಗಳೂರಿನಿಂದ ಕಾರವಾರದವರೆಗೆ ಪಂಚಗಂಗಾ ಎಕ್ಸ್‌ಪ್ರೆಸ್ ಮಾತ್ರವೇ ಪ್ರತಿದಿನ ಸಂಚಾರ ಮಾಡುತ್ತಿದೆ. ಈ ಸಾಲಿಗೆ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ಕೂಡ ಸೇರಲಿದೆ.
ಮೂರು ವರ್ಷಗಳ ನಂತರ ರೈಲಿನ ಮೂಲಕ ಸಾಂಸ್ಕ್ರತಿಕ ರಾಜಧಾನಿ ಮೈಸೂರನ್ನು ಕರಾವಳಿ ಕರ್ನಾಟಕಕ್ಕೆ ಮರುಸಂಪರ್ಕಗೊಳ್ಳಲಿದೆ. ರೈಲ್ವೇ ಸಚಿವಾಲಯವು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (ಎಸ್‌ಎಂವಿಟಿ)-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಅನ್ನು ಮೈಸೂರು ಮೂಲಕ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ. ವಾರದಲ್ಲಿ ಆರು ದಿನಗಳ ಬದಲಿಗೆ ಪ್ರತಿದಿನ ರೈಲು ಓಡಿಸಲು ಸಚಿವಾಲಯವು ಅನುಮೋದನೆ ನೀಡಿದೆ. ರೈಲಿನ ಮಾಲೀಕತ್ವ ಹೊಂದಿರುವ ನೈಋತ್ಯ ರೈಲ್ವೆಯು ಬದಲಾವಣೆಗಳ ಅನುಷ್ಠಾನದ ಕುರಿತು ಔಪಚಾರಿಕ ಅಧಿಸೂಚನೆಯನ್ನು ಹೊರಡಿಸುವ ನಿರೀಕ್ಷೆಯಿದೆ.
ಬೆಂಗಳೂರು-ಮುರ್ಡೇಶ್ವರ ರೈಲಿಗೆ ಅದ್ಧೂರಿ ಸ್ವಾಗತ
ಎಸ್‌ಎಂವಿಟಿ ಮತ್ತು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ನಡುವಿನ ಸಮಯದಲ್ಲಿ ಸ್ವಲ್ಪ ಬದಲಾವಣೆಯೊಂದಿಗೆ ರೈಲು ತನ್ನ ಅಸ್ತಿತ್ವದಲ್ಲಿರುವ ಮಾರ್ಗದಲ್ಲಿ ಚಲಿಸುವ ನಿರೀಕ್ಷೆಯಿದೆ. ರೈಲು ಸಂಖ್ಯೆ 16585 ಎಸ್‌ಎಂವಿಟಿ ಸ್ಟೇಷನ್‌ನಿಂದ ರಾತ್ರಿ 8.15 ಕ್ಕೆ ಹೊರಡುತ್ತದೆ. ರಾತ್ರಿ 11.40ಕ್ಕೆ ಇದು ಮೈಸೂರು ತಲುಪಲಿದೆ. ಮಂಗಳೂರು ಸೆಂಟ್ರಲ್‌ಗೆ ಬೆಳಗ್ಗೆ 8.55ಕ್ಕೆ ತಲುಪಲಿದೆ. ಇದಕ್ಕೂ ಮುನ್ನ ಮಂಗಳೂರಿಗೆ ಬೆಳಗ್ಗೆ 9.05 ನಿಮಿಷಕ್ಕೆ ತಲುಪುತ್ತಿತ್ತು. ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ 9.20ಕ್ಕೆ ಹೊರಡುವ ರೈಲಯ ಮಧ್ಯಾಹ್ನ 1.20ಕ್ಕೆ ಮುರ್ಡೇಶ್ವರ ತಲುಪಲಿದೆ.
ಬೆಂಗಳೂರು-ಕಾರವಾರ ರೈಲಿಗೆ "ಪಂಚಗಂಗಾ ಎಕ್ಸ್‌ಪ್ರೆಸ್" ಎಂದು ನಾಮಕಾರಣ