ಸ್ನೇಹಿತರ ಜೊತೆ ಪ್ರವಾಸ ಹೋಗಿ ಬರುವ ವೇಳೆ ರೈಲಿನಿಂದ ಬಿದ್ದು ಯುವಕ ನಿಗೂಢ ಸಾವು

Published : Apr 24, 2026, 12:19 PM IST
raichur suspicious death

ಸಾರಾಂಶ

ಸ್ನೇಹಿತರ ಜೊತೆ ಟ್ರಿಪ್ ಹೋಗಿ ವಾಪಸ್ ಆಗ್ತಿದ್ದ ವೇಳೆ ಟ್ರೈನ್ ನಿಂದ ಬಿದ್ದು ಯುವಕ ಸಾವನ್ನಪ್ಪಿದ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾ. ಸಾಸಲಮರಿ ಬ್ರಿಡ್ಜ್ ಬಳಿ ನಡೆದಿದೆ. 18 ವರ್ಷದ ಸುಮಂತ್ ಕುಮಾರ್ ಮೃತಪಟ್ಟ ಯುವಕ.

ಟ್ರಿಪ್ ಹೋಗಿ ವಾಪಸ್ ಆಗ್ತಿದ್ದ ವೇಳೆ ಟ್ರೈನ್ ನಿಂದ ಬಿದ್ದು ಯುವಕ ಸಾವು

ರಾಯಚೂರು: ಸ್ನೇಹಿತರ ಜೊತೆ ಟ್ರಿಪ್ ಹೋಗಿ ವಾಪಸ್ ಆಗ್ತಿದ್ದ ವೇಳೆ ಟ್ರೈನ್ ನಿಂದ ಬಿದ್ದು ಯುವಕ ಸಾವನ್ನಪ್ಪಿದ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾ. ಸಾಸಲಮರಿ ಬ್ರಿಡ್ಜ್ ಬಳಿ ನಡೆದಿದೆ. 18 ವರ್ಷದ ಸುಮಂತ್ ಕುಮಾರ್ ಮೃತಪಟ್ಟ ಯುವಕ. ಸುಮಂತ್‌ ಕುಮಾರ್ ರಾಯಚೂರು ಜಿಲ್ಲೆ ಲಿಂಗಸೂಗೂರು ತಾ‌ಲೂಕಿನ ಕಸಬಾ ಲಿಂಗಸುಗೂರು‌ ನಿವಾಸಿಯಾಗಿದ್ದಾನೆ. ಸುಮಂತ್‌ ಕುಮಾರ್ ಮೊನ್ನೆಯಷ್ಟೇ ಆರು ಸ್ನೇಹಿತರ ಜೊತೆ ದಾಂಡೇಲಿಗೆ ಟ್ರಿಪ್ ಹೋಗಿದ್ದ. ನಿನ್ನೆ ಹುಬ್ಬಳ್ಳಿ ಮೂಲಕ ಸಿಂಧನೂರಿಗೆ ವಾಪಸ್ ಬರ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಸಿಂಧನೂರು ತಲುಪುವುದಕ್ಕೆ ಕೇವಲ 5 ಕಿಲೋ ಮೀಟರ್ ಇರುವಾಗ ದುರಂತ:

ರೈಲು ರಾಯಚೂರಿನ ಸಿಂಧನೂರು ತಲುಪುವುದಕ್ಕೆ ಕೇವಲ 5 ಕಿಲೋ ಮೀಟರ್ ಇರುವಾಗ ಈ ದುರಂತ ನಡೆದಿದೆ. ಬಳಿಕ ಸ್ನೇಹಿತರು ರೈಲಿನಿಂದ ಇಳಿದು ಸುಮಂತ್‌ಗಾಗಿ ಹುಡುಕಾಟ ನಡೆಸಿದಾಗ ಸಾಸಲಮರಿ ಕ್ಯಾಂಪ್ ಬಳಿ ಸುಮಂತ್ ಶವ ಪತ್ತೆಯಾಗಿದೆ. ಆದರೆ ಬೆಳಗಿನ ಜಾವದಲ್ಲಿ ಸುಮಂತ್ ರೈಲಿನಿಂದ ಕೆಳಗೆ ಬಿದ್ದಿದ್ದು ಹೇಗೆ ಎಂಬುದೇ ಈಗ ನಿಗೂಢವಾಗಿದೆ. ಘಟನಾ ಸ್ಥಳಕ್ಕೆ ರಾಯಚೂರು ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:  ಶಿವಮೊಗ್ಗ: ನೀರು ಕೇಳಿ ಬಂದ ಅಪರಿಚಿತರಿಂದ ವೃದ್ಧೆಯ ಮನೆ ದರೋಡೆ: 18 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾಫಿನಾಡಲ್ಲಿ ಅರಳಿದ ಅಪರೂಪದ ಪ್ರೇಮ ಕಾವ್ಯ: ಜಾತಿ ಸಂಕೋಲೆ ಮೀರಿ ದಲಿತ ಹುಡುಗಿ ಕೈ ಹಿಡಿದ ಬ್ರಾಹ್ಮಣ ಸಮುದಾಯದ ಯುವಕ
ಸಚಿವರ ಸಭೆ ಜನರಲ್ ಚೆಕಪ್ ಎಂದ ಸತೀಶ್ ಜಾರಕಿಹೊಳಿ ಸಂಪುಟ ಪುನರ್‌ ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೇಳಿದ್ದೇನು?