ರಫೇಲ್‌ ವಿಮಾನ ಪೈಲಟ್‌ ಅರುಣ್‌ ವಿಜಯಪುರ ಸೈನಿಕ ಶಾಲೆ ವಿದ್ಯಾರ್ಥಿ!

By Suvarna NewsFirst Published Jul 29, 2020, 11:32 AM IST
Highlights

ಚೀನಾ ಸಂಘರ್ಷ ಬೆನ್ನಲ್ಲೇ ಫ್ರಾನ್ಸ್‌​ನಿಂದ ಭಾರತಕ್ಕೆ ಬಂದಿಳಿದಿಳಿಯಲಿರುವ ಐದು ರಫೇಲ್‌| ರಫೇಲ್‌ ವಿಮಾನ ಪೈಲಟ್‌ ಅರುಣ್‌ ವಿಜಯಪುರ ಸೈನಿಕ ಶಾಲೆ ವಿದ್ಯಾರ್ಥಿ

ವಿಜಯಪುರ(ಜು.29): ಚೀನಾ ಸಂಘರ್ಷ ಬೆನ್ನಲ್ಲೇ ಫ್ರಾನ್ಸ್‌​ನಿಂದ ಭಾರತಕ್ಕೆ ಬಂದಿಳಿದಿರುವ ಐದು ರಫೇಲ್‌ ಯುದ್ಧವಿಮಾನಗಳನ್ನು ಚಾಲನೆ ಮಾಡಿದ ಐವರು ಪೈಲೆಟ್‌ಗಳಲ್ಲಿ ಒಬ್ಬರಾದ ಅರುಣಕುಮಾರ್‌ ಅವರು ವಿಜಯಪುರದ ಸೈನಿಕ ಶಾಲೆಯಲ್ಲಿ ಅಧ್ಯಯನ ನಡೆಸಿದವರಾಗಿದ್ದಾರೆ.

ರಫೇಲ್‌ ಸ್ವಾಗತಕ್ಕೆ ಅಂಬಾಲಾ ಸಜ್ಜು: ವಾಯುನೆಲೆ ಸುತ್ತ ನಿಷೇಧಾಜ್ಞೆ!

ಮೂಲತಃ ಉತ್ತರ ಭಾರತದವರಾಗಿರುವ ಅರುಣಕುಮಾರ್‌ 1994ರಲ್ಲಿ 6ನೇ ತರಗತಿಯಲ್ಲಿರುವಾಗಲೇ ವಿಜಯಪುರದ ಸೈನಿಕ ಶಾಲೆಗೆ ಪ್ರವೇಶ ಪಡೆದಿದ್ದರು. ಜಾಣ ವಿದ್ಯಾರ್ಥಿ ಎನಿಸಿಕೊಂಡಿದ್ದ ಅವರು 2002ರಲ್ಲಿ ವಾಯುಸೇನೆಗೆ ನೇಮಕಾತಿಯಾಗಿದ್ದು ಸುಮಾರು 15 ವರ್ಷಗಳಿಂದ ವಿಜಯಪುರದ ವಾಯು ಸೇನೆಯಲ್ಲೇ ಅರುಣಕುಮಾರ ಸೇವೆ ಸಲ್ಲಿಸುತ್ತಿದ್ದಾರೆ.

ಭಾರತಕ್ಕೆ 5 ರಪೇಲ್ ಯುದ್ಧ ವಿಮಾನ: ಕ್ಷಣಗಣನೆ ಆರಂಭ!

ಫ್ರಾನ್ಸ್‌ನಲ್ಲಿ 3 ವರ್ಷದವರೆಗೆ ಸುಖೋಯ್‌ ಯುದ್ಧ ವಿಮಾನದಲ್ಲಿದ್ದುಕೊಂಡು ತರಬೇತಿ ಪಡೆದಿದ್ದಾರೆ. ಆನಂತರ ರಫೇಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈಗ ಭಾರತಕ್ಕೆ 5 ರಫೇಲ್‌ ಯುದ್ಧ ವಿಮಾನ ತರುವಲ್ಲಿ ಅರುಣಕುಮಾರ ಅವರು ಕಮಾಂಡರ್‌ ಆಗಿ ಕೆಲಸ ಮಾಡಿದ್ದಾರೆ. ಇದು ಕನ್ನಡಿಗರಿಗೆ ಖುಷಿ ತರುವಂತಹ ವಿಚಾರವಾಗಿದೆ.

click me!