
ಹೊಸಪೇಟೆ (ಆ.26): ಧರ್ಮಸ್ಥಳ ವಿಚಾರವಾಗಿ ಬುರುಡೆ ಬಿಡಲಾಗಿದೆ. ಲವ್ ಜಿಹಾದ್ ಮಾದರಿಯಲ್ಲಿ ಇದೊಂದು ಮತಾಂತರ ಜಿಹಾದ್ ಆಗಿದೆ. ಧರ್ಮಸ್ಥಳದ ಕುರಿತು ಷಡ್ಯಂತ್ರ ನಡೆಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.
ಇಲ್ಲಿನ ಟಿಬಿಡ್ಯಾಂ ಪ್ರದೇಶದಲ್ಲಿ 19ನೇ ಕ್ರಸ್ಟ್ ಗೇಟ್ ನಿರ್ಮಾಣ ಆಗುತ್ತಿರುವುದನ್ನು ಸೋಮವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಧರ್ಮಸ್ಥಳವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಹೊರಟಿದ್ದಾರೆ. ಈ ಸರ್ಕಾರಕ್ಕೆ ಆದಾಯ ಇಲ್ಲ, ಧರ್ಮಸ್ಥಳಕ್ಕೆ ತಿರುಪತಿಯಂತೇ ಆದಾಯ ಬರುತ್ತದೆ. ಹಾಗಾಗಿ, ಈ ದೇಗುಲವನ್ನು ಮುಜರಾಯಿ ಇಲಾಖೆಗೆ ಸೇರ್ಪಡೆ ಮಾಡಲು ಈ ಕೆಲಸ ಮಾಡಲಾಗುತ್ತಿದೆ. ಧರ್ಮಸ್ಥಳದ ವಿಚಾರದಲ್ಲಿ ದೊಡ್ಡ ಹುನ್ನಾರ ಅಡಗಿದೆ. ಇವರಿಗೆ ಹಿಂದೂ ದೇವಾಲಯಗಳು ಟಾರ್ಗೆಟ್ ಆಗಿವೆ. ಚರ್ಚ್ ಹಾಗೂ ಮಸೀದಿ ಕಡೆ ಕಾಂಗ್ರೆಸ್‌ನವರು ಹೋಗುವುದಿಲ್ಲ. ಇದರ ಹಿಂದೆ ದೊಡ್ಡ ಗ್ಯಾಂಗ್ ಕೆಲಸ ಮಾಡುತ್ತಿದೆ. ಮಾಸ್ಕ್‌ಮ್ಯಾನ್, ಸುಜಾತಾ ಭಟ್ ಇವರೆಲ್ಲ ಪಾತ್ರಧಾರಿಗಳು. ಮಾಸ್ಕ್ ಹಾಕಿರುವವನ ಹಿಂದೆ ಸರ್ಕಾರ ಇದೆ. ಅವನಿಗೆ ಮುಸುಕು ಹಾಕಿಸಿದ್ದು ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಗತಿಪರರೂ ಇದರ ಹಿಂದೆ ಇದ್ದಾರೆ. ಬುರುಡೆ ಕಥೆ ಹೊರಗಡೆ ಬಂದ ಕೂಡಲೇ ಪ್ರಗತಿಪರರು ಕಾಣೆಯಾಗಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿ, ಜನರ ತೆರಿಗೆ ದುಡ್ಡು ಖರ್ಚು ಮಾಡಿದೆ. ನಮ್ಮ ಸರ್ಕಾರ ಇದ್ದಾಗಲೂ ಇಂತಹ ದೂರು ಬಂದಿದ್ದವು. ನಾವು ಎಸ್‌ಐಟಿ ರಚನೆ ಗೊಡವಿಗೆ ಹೋಗಲಿಲ್ಲ. ಈ ಚಿನ್ನಯ್ಯ ಎಂಥವನು ಎಂಬುದು ಮಂಡ್ಯದ ನಾಗಮಂಗಲದ ಜನತೆಗೆ ಗೊತ್ತು. ಹೀಗಿದ್ದರೂ ಸರ್ಕಾರ ಮುಸುಕು ಹಾಕಿಸಿದೆ. ಯಾವನೋ ಒಬ್ಬ ದಾರಿಯಲ್ಲಿ ಹೋಗುವವನ ಮಾತು ಕೇಳಿ ಎಸ್ಐಟಿ ರಚನೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ