
ಬೆಳ್ತಂಗಡಿ (ಆ.26) ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಇಂದು ಮಹತ್ವದ ಬೆಳವಣಿಗೆಯಾಗಿದೆ. ದೂರುದಾರ ಚಿನ್ನಯ್ಯ ಅಲಿಯಾಸ್ ಮಾಸ್ಕ್ ಮ್ಯಾನ್ ವಿಚಾರಣೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಇದೀಗ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ಆರೋಪಿ ಚಿನ್ನಯ ಜೊತೆ ಎಸ್ಐಟಿ ಅಧಿಕಾರಿಗಳು ಉಜಿರೆ ಬಳಿ ಇರುವ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಸರ್ಚ್ ವಾರಂಟ್ ಪಡೆದ ಎಸ್ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ಮನೆ ಪರಿಶೋಧನೆ, ಸ್ಥಳ ಮಹಜರು ನಡೆಸಲು ದಿಢೀರ್ ಎಂಟ್ರಿಕೊಟ್ಟಿದ್ದಾರೆ. ಆರೋಪಿಯಾಗಿರುವ ದೂರುದಾರ ಚಿನ್ನಯ್ಯ ಜೊತೆಗೆ ಎಸ್ಐಟಿ ತಂಡ ತಿಮರೋಡಿ ಮನೆಗೆ ಪ್ರವೇಶಿಸಿದ್ದಾರೆ.
ಚಿನ್ನಯ್ಯ ವಿಚಾರಣೆ ವೇಳೆ ಮಹೇಶ್ ತಿಮರೋಡಿ ಮನೆಯಲ್ಲಿ ಆಶ್ರಯ ನೀಡಲಾಗಿತ್ತು ಎಂದು ಹೇಳಿದ್ದ. ಆರೋಪಿ ಚಿನ್ನಯ್ಯ ಉಳಿದುಕೊಂಡಿದ್ದ ಹಿನ್ನಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಸರ್ಚ್ ವಾರೆಂಟ್ ಪಡೆದು ತಿಮರೋಡಿ ಮನೆ ಪ್ರವೇಶಿಸಿದ್ದಾರೆ. ಮನೆ ಮೇಲೆ ದಾಳಿ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಸ್ಐಟಿ ಅಧಿಕಾರಿಗಳು ಮಂಗಳೂರು, ಬಂಟ್ವಾಳ, ಪುತ್ತೂರು ಭಾಗದಿಂದ ಪೊಲೀಸರ ಕರೆಸಿಕೊಂಡಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಎಂಟ್ರಿಕೊಟ್ಟಿರುವ ಎಸ್ಐಟಿ ಅಧಿಕಾರಿಗಳ ತಂಡ ಮನೆ ಜಾಲಾಡುತ್ತಿದ್ದಾರೆ. ಭಾರಿ ಬಿಗಿ ಭದ್ರತೆಯಲ್ಲಿ ತಿಮರೋಡಿ ಮನೆ ಪರಿಶೀಲನೆ ನಡೆಯುತ್ತಿದೆ. ಬೆಳ್ಳಂಬೆಳಗ್ಗೆ ತಿಮರೋಡಿ ಹಾಗೂ ಆತನ ಗ್ಯಾಂಗ್‌ಗೆ ಆತಂಕ ಶುಕುವಾಗಿದೆ. ಮನೆ ಪರಿಶೋಧನೆ ಬಳಿಕ ತಿಮರೋಡಿಯನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆಯುತ್ತಾರಾ ಅನ್ನೋ ಚರ್ಚೆಗಳು ಶುರುವಾಗಿದೆ.ಮಹೇಶ್ ಶೆಟ್ಟಿ ತಿಮರೋಡಿ ಮನೆ ಶೋಧ ನಡೆಸಲಿರುವ ಅಧಿಕಾರಿಗಳು, ಸಾಕ್ಷಿ ಸಂಗ್ರಹಿಸಲಿದ್ದಾರೆ.
ಚಿನ್ನಯ್ಯನ ಮೊಬೈಲ್ ಕುರಿತು ಶೋಧ ನಡೆಯುತ್ತಿದೆ. ವಿಚಾರಣೆ ವೇಳೆ ಚಿನ್ನಯ್ಯ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಈ ಪೈಕಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಕೆಲ ಪ್ರಮುಖರು ಈ ಬುರುಡೆ ಪ್ರಕರಣದ ಮಾಸ್ಟರ್ ಮೈಂಡ್ ಎಂದಿದ್ದ. ಮಹೇಶ್ ಶೆಟ್ಟಿ ತಿಮರೋಡಿ ಹೇಳಿದಂತೆ ಧರ್ಮಸ್ಥಳ ವಿರುದ್ಧ ಆರೋಪ ಮಾಡಲಾಗಿದೆ. ಈ ಪ್ರಕರಣ ಸಂಬಂಧ ದೆಹಲಿಗೆ ತೆರಳಿ ಕೆಲವು ಪ್ರಭಾವಿಗಳನ್ನು ಭೇಟಿಯಾಗಿದ್ದೆ ಎಂದು ಹೇಳಿದ್ದ. ಈ ಹಿನ್ನಲೆಯಲ್ಲಿ ಇದೀಗ ತಿಮರೋಡಿ ಮನೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ