ಪಂಚಸಾಲಿ ನಾಯಕರಿಗೆ ತಪ್ಪಿದ ವಿರೋಧ ಪಕ್ಷದ ನಾಯಕ ಸ್ಥಾನ; ಸಿಡಿದೆದ್ದ ಜಯಮೃತ್ಯುಂಜಯಶ್ರೀ

Published : Nov 18, 2023, 12:57 PM ISTUpdated : Nov 18, 2023, 12:58 PM IST
ಪಂಚಸಾಲಿ ನಾಯಕರಿಗೆ ತಪ್ಪಿದ ವಿರೋಧ ಪಕ್ಷದ ನಾಯಕ ಸ್ಥಾನ; ಸಿಡಿದೆದ್ದ  ಜಯಮೃತ್ಯುಂಜಯಶ್ರೀ

ಸಾರಾಂಶ

ಒಕ್ಕಲಿಗ ಸಮುದಾಯದ ಬಿಜೆಪಿ ಪಕ್ಷದ ಪ್ರಭಾವಿ ನಾಯಕನಾಗಿರುವ ಪದ್ಮನಾಭನಗರದ ಶಾಸಕ ಆರ್‌.ಅಶೋಕ್‌ ಅವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಪಂಚಮಸಾಲಿ ಸಮುದಾಯದ ನಾಯಕರಿಗೆ ವಿರೋಧ ಪಕ್ಷದ ಸ್ಥಾನ ತಪ್ಪಿದ್ದಕ್ಕೆ ಇತ್ತ ಪಂಚಮಸಾಲಿ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸಿಡಿದೆದ್ದಿರಾರೆ.

ವಿಜಯಪುರ (ನ.18): ಒಕ್ಕಲಿಗ ಸಮುದಾಯದ ಬಿಜೆಪಿ ಪಕ್ಷದ ಪ್ರಭಾವಿ ನಾಯಕನಾಗಿರುವ ಪದ್ಮನಾಭನಗರದ ಶಾಸಕ ಆರ್‌.ಅಶೋಕ್‌ ಅವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಪಂಚಮಸಾಲಿ ಸಮುದಾಯದ ನಾಯಕರಿಗೆ ವಿರೋಧ ಪಕ್ಷದ ಸ್ಥಾನ ತಪ್ಪಿದ್ದಕ್ಕೆ ಇತ್ತ ಪಂಚಮಸಾಲಿ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸಿಡಿದೆದ್ದಿರಾರೆ.

ಏಷ್ಯಾನೆಟ್ ಸುವರ್ಣನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಸ್ವಾಮೀಜಿ, ಪಂಚಮಸಾಲಿ ನಾಯಕರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆದಿದೆ. ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದವ್ರನ್ನ ಮೂಲೆ‌ ಗುಂಪು ಮಾಡುವ ಸಂಚು ನಡೆದಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ವಿರೋಧ ಪಕ್ಷದ ನಾಯಕ ಸ್ಥಾನ ತಪ್ಪಿಸಿರೋದ್ರ ಹಿಂದೆ ಹುನ್ನಾರವಿದೆ ಎಂದು ಸ್ವಾಮೀಜಿ ಅಕ್ರೋಶ ವ್ಯಕ್ತಪಡಿಸಿದರು.

ವಿಪಕ್ಷ ನಾಯಕರಾಗಿ ಆರ್‌.ಅಶೋಕ್‌ ಆಯ್ಕೆ

ಯತ್ನಾಳ್ ವಿಪಕ್ಷ ಸ್ಥಾನಕ್ಕೆ ಅರ್ಹರಾಗಿದ್ದರು:

ವಿರೋಧ ಪಕ್ಷದ ಸ್ಥಾನಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಲ್ಲ ರೀತಿಯಲ್ಲೂ ಅರ್ಹರಾಗಿದ್ದರು. ಅವರಿಗೆ ಸಾಮರ್ಥ್ಯ ಇತ್ತು. ಆದರೂ ಅವರನ್ನು ವಿರೋಧ ಪಕ್ಷದ ಸ್ಥಾನ ಸಿಗದಂತೆ ತಪ್ಪಿಸಲಾಗಿದೆ. ಈ ಹಿಂದೆ ಯತ್ನಾಳರನ್ನ ಮಂತ್ರಿ ಮಾಡಿದ್ರೆ ಮುಂದೆ ಸಿಎಂ ಆಗ್ತಾರೆ ಎಂದು ಅದನ್ನು ತಪ್ಪಿಸಿದ್ದರು. ಯತ್ನಾಳರನ್ನ ವಿರೋಧ ಪಕ್ಷದ ಸ್ಥಾನಕ್ಕೆ ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಕೈ ಬಿಟ್ಟಿದ್ದು ಸಂಶಯ ಮೂಡಿಸಿದೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ಮಾಡುತ್ತಿವೆ. ಕಾಂಗ್ರೆಸ್ ಪಕ್ಷದಲ್ಲೂ ಪಂಚಮಸಾಲಿ ನಾಯಕರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದು ಕಾಂಗ್ರೆಸ್ ವಿರುದ್ಧವೂ ಹರಿಹಾಯ್ದರು.

ಪಂಚಮಸಾಲಿ ಸಮುದಾಯ ಅಸಮಾಧಾನ:

ಒಂದು ಕಡೆ ಪಂಚಮಸಾಲಿ ಮೀಸಲಾತಿ ನೀಡುವಲ್ಲಿ ವಿಳಂಬ. ಇನ್ನೊಂದೆಡೆ ವಿರೋಧ ಪಕ್ಷದ ಸ್ಥಾನವನ್ನೂ ಪಂಚಮಸಾಲಿ ಸಮುದಾಯಕ್ಕೆ ನೀಡದ ಹಿನ್ನೆಲೆ ಸಮುದಾಯ ಅಸಮಾಧಾನಗೊಂಡಿದೆ. ಯಾವಾಗ ಸ್ಫೋಟಗೊಳ್ಳುತ್ತದೋ ಗೊತ್ತಿಲ್ಲ. ಯಾವಾಗ ಅಸಮಧಾನ ತೋರಿಸಬೇಕೋ ಆಗ ಪಂಚಮಸಾಲಿ ಸಮುದಾಯ ತೋರಿಸಿದೆ. ಸಮುದಾಯಕ್ಕೆ ಅನ್ಯಾಯವಾದಾಗ ನಮ್ಮ ಜನ ಪಾಠ ಕಲಿಸಿದ್ದಾರೆ. ಹೀಗೇ ಆಗ್ತಾ ಹೋದ್ರೆ ನಮ್ಮ ಸಮುದಾಯದ ಜನ ಇನ್ನಷ್ಟು ಅಸಮಧಾನಗೊಳ್ತಾರೆ. ಸಾಫ್ಟ್ ಆಗಿಯೇ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀಗಳು.

 

ನಮಗೆ ನ್ಯಾಯ ಕೊಡದೆ ಹೋದ್ರೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ಸಮಸ್ಯೆ: ಕೂಡಲ ಶ್ರೀ

ಪ್ರತಿ ಚುನಾವಣೆಯಲ್ಲೂ ಬಿಜೆಪಿಗೆ ಪಂಚಮಸಾಲಿ ಸಮುದಾಯ ಆಶೀರ್ವಾದ ಮಾಡ್ತಾ ಬಂದಿದೆ. ಆದರೆ ಮಂತ್ರಿ ಸ್ಥಾನ ಬಿಟ್ಟು ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನ ನೀಡಿಲ್ಲ. ಬಿಜೆಪಿಯಲ್ಲಿ ಕೋರ್ ಕಮೀಟಿಯಲ್ಲಿ ಇಲ್ಲ, ರಾಜ್ಯಾಧ್ಯಕ್ಷ ಸ್ಥಾನ ಇಲ್ಲ, ಮೀಸಲಾತಿಯೂ ನೀಡುತ್ತಿಲ್ಲ.. ಎಲ್ಲವೂ ಉದ್ದೇಶ ಪೂರ್ವಕವಾಗಿ ತಪ್ಪಿಸಲಾಗ್ತಿದೆ ಎನ್ನುವ ಆತಂಕ ಕಾಡ್ತಿದೆ. ಬಹು ಸಂಖ್ಯಾತ ಪಂಚಮಸಾಲಿಗಳನ್ನ ಮೂಲೆ ಗುಂಪು ಮಾಡಲಾಗ್ತಿದೆ. ಹೀಗಾಗಿ ಯಾವಾಗ ನಮ್ಮ ಸಮುದಾಯ ಸ್ಫೋಟಗೊಳ್ಳುತ್ತದೆಂದು ಗೊತ್ತಿಲ್ಲ ಎಂದು ಶ್ರೀಗಳು ಎಚ್ಚರಿಕೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: BBK 12 - ಸ್ಪಂದನಾ ಸೋಮಣ್ಣ ಮುಂದೆ ರಜತ್‌ ಅಸಭ್ಯ ವರ್ತನೆ ಮಾಡಿದ್ರು - ಧ್ರುವಂತ್‌ ವಿರುದ್ಧ ರಜತ್‌ ಆರೋಪ