ಭಿಕ್ಷಾಟನೆ ಜಾಗಕ್ಕೆ ಇಬ್ಬರು ಮಹಿಳೆಯರ ಕಿತ್ತಾಟ 'ದಯವಿಟ್ಟು ಆಕೆಗೆ ಹೆದರಿಸಿ ಸಾರ್' ಪೊಲೀಸ್‌ಗೆ ಭಿಕ್ಷುಕಿ ಕರೆ!

By Suvarna News  |  First Published Mar 6, 2024, 5:41 PM IST

ಬೆಂಗಳೂರಿನಲ್ಲಿ ಭಿಕ್ಷೆ ಬೇಡುವ ವಿಚಾರಕ್ಕೆ ಇಬ್ಬರು ಮಹಿಳೆಯರ ನಡುವೆ ಗಲಾಟೆ ನಡೆದಿದೆ. ಗಲಾಟೆ ಜೋರಾಗಿ ಪೊಲೀಸರಿಗೆ ಭಿಕ್ಷುಕಿ ಫೋನ್ ಮಾಡಿದ್ದಾಳೆ.


ಬೆಂಗಳೂರು (ಮಾ.6): ಬೆಂಗಳೂರಿನಲ್ಲಿ ಭಿಕ್ಷೆ ಬೇಡುವ ವಿಚಾರಕ್ಕೆ ಇಬ್ಬರು ಮಹಿಳೆಯರ ನಡುವೆ ಗಲಾಟೆ ನಡೆದಿದೆ. ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೋರ್ ಬಳಿ ಭಿಕ್ಷೆ ಬೇಡುವ ಮಹಿಳೆಯರಿಬ್ಬರಿಗೆ ಕುಳಿತುಕೊಳ್ಳುವ ಜಾಗದ ವಿಚಾರವಾಗಿ ಗಲಾಟೆ ನಡೆದಿದೆ.

ಗಲಾಟೆ ಜೋರಾಗಿ ಪರ್ವಿನ್ ಎಂಬ ಮಹಿಳೆ ಪೊಲೀಸ್ ಕಂಟ್ರೋಲ್ ರೂಮ್ 112 ಗೆ ಕಾಲ್ ಮಾಡಿದ್ದಾಳೆ. ನಾನು ಕುಳಿತುಕೊಂಡು ಭಿಕ್ಷೆ ಬೇಡಬೇಕು ಎಂದು ಪರ್ವಿನ್ ಹೇಳಿದ್ದು, ಅವಳು ಕೂರುವ ಜಾಗದಲ್ಲಿ ನಾನು ಕುಳಿತರೇ  ಅವರ ಕಡೆಯವರನ್ನು ಕರೆಸಿ ಹೊಡೆಸುತ್ತಾಳೆ. ದಯವಿಟ್ಟು ಸ್ಥಳಕ್ಕೆ ಬಂದು ಭಿಕ್ಷೆ ಬೇಡುವ ಮಹಿಳೆಗೆ ಸ್ವಲ್ಪ ಹೆದರಿಸಿ ಸಾರ್.  ನಾನು ಆ ಜಾಗದಲ್ಲಿ ಕುಳಿತು ಭಿಕ್ಷೆ ಬೇಡಬೇಕು ಎಂದು ಪೊಲೀಸರ ಬಳಿ ಪರ್ವಿನ್ ಮನವಿ ಮಾಡಿಕೊಂಡಿದ್ದಾಳೆ.

Tap to resize

Latest Videos

undefined

ಸೋಷಿಯಲ್‌ ಮೀಡಿಯಾ ಗೆಳತನಕ್ಕೆ 8 ಲಕ್ಷ ರೂ ಜತೆ ಚಿನ್ನ ಕಳೆದುಕೊಂಡ ಬೆಂಗಳೂರಿನ ವಿವಾಹಿತೆ!

ಇದಕ್ಕೆ ಉತ್ತರಿಸಿದ ಪೊಲೀಸ್ ಸಿಬ್ಬಂದಿ ನಿಮಗೆ ಕಾಂಟ್ರಾಕ್ಟ್ ಕೊಡಿಸ್ತೀನಿ ಬಿಡಿ ಎಂದು ತಮಾಷೆ ಮಾಡಿದ್ದಾರೆ. ಜೊತೆಗೆ ನಿಮಗೆ ಒಂದು ವಾರ ಅವರಿಗೆ ಒಂದು ವಾರ ಭಿಕ್ಷೆ ಬೇಡಲು ಅವಕಾಶ ಮಾಡಿಕೊಡುವುದಾಗಿ ಪೊಲೀಸ್  ಸಮಾಧಾನ ಪಡಿಸಿದ್ದಾರೆ. ಸದ್ಯ ಹೊಯ್ಸಳ ವಾಹನ ಸಿಬ್ಬಂದಿ ಮಾತನಾಡಿರೋ ಆಡಿಯೋ ಸೊಷಿಯಲ್ ಮೀಡಿಯಾದಲ್ಲಿ ವೈರಲ್  ಆಗಿದೆ.  ಭಿಕ್ಷೆ ಬೇಡುವ ಜನರಿಗೂ ಸಹ ನಮ್ಮ ಪೊಲೀಸ್ ಸೇವೆ ಅಂದರೆ 112 ಹೊಯ್ಸಳ ಸೇವೆ ತಲುಪಿದೆ ಎಂದರೆ ತುಂಬಾ ಸಂತೋಷದ ವಿಷಯ ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರಿನಲ್ಲಿ 1 ಗಂಟೆ ಕಾರು ಪಾರ್ಕಿಂಗ್‌ ಗೆ 1 ಸಾವಿರ ಫೀಸ್, ಶಾಕ್ ಆದ ಸಿಲಿಕಾನ್ ಸಿಟಿ ಮಂದಿ

click me!