ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬರೋರಿಗೆ ಹೊಸ ರೂಲ್ಸ್

By Suvarna News  |  First Published Jun 16, 2020, 3:30 PM IST

ಕರ್ನಾಟಕದಲ್ಲಿ ಹೊರ ರಾಜ್ಯದಿಂದ ಬಂದವರಿಂದ ಕೊರೋನಾ ಪಾಸಿಟಿವ್‌ ಕೇಸ್‌ಗಳು ತೀವ್ರಗತಿಯಲ್ಲಿ ಏರುತ್ತಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗಾಗಿ ಹೊಸ ರೂಲ್ಸ್ ಮಾಡಿದೆ.


ಬೆಂಗಳೂರು, (ಜೂನ್. 16): ರಾಜ್ಯದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇನ್ನು ಹೊರ ರಾಜ್ಯಗಳ ಸಂಚಾರಕ್ಕೆ ಬಸ್ ಸೇವೆ ಆರಂಭವಾಗಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ  ಹೊರ ರಾಜ್ಯಗಳಿಂದ ಬರೋರಿಗೆ ಕರ್ನಾಟಕ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ.

ರಾಜ್ಯದಲ್ಲಿ ಮಾಹಾಮಾರಿ ಕೊರೋನಾ ಆಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದರಿಂದ ಇದನ್ನ ನಿಯಂತ್ರಿಸಲು ಸರ್ಕಾರ ಹಲವು ಬಿಗಿ ಕ್ರಮಗಳನ್ನ ಕೈಗೊಂಡಿದೆ.

Latest Videos

undefined

ಮಾಸ್ಕ್ ಡೇ, ಮತ್ತೆ ಲಾಕ್‌ಡೌನ್ ಬಗ್ಗೆ ಬಿಎಸ್‌ವೈ ಸುದ್ದಿಗೋಷ್ಠಿಯ ಪ್ರಮುಖಾಂಶಗಳು..!

ಅದರಲ್ಲೂ ಪ್ರಮುಖವಾಗಿ ಮಹಾರಾಷ್ಟ್ರ, ದೆಹಲಿ ಮತ್ತು ತಮಿಳುನಾಡು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗಿದೆ. ಅದ್ರಿಂದ ಈ ಮೂರು ರಾಜ್ಯಗಳಿಂದ ಅಗಮಿಸುವ ಪ್ರಯಾಣಿಕರನ್ನ ಕ್ವಾರಂಟೈನ್‌ಗೆ ಒಳಪಡಿಸುವ ನಿಯಮಗಳನ್ನ ಬಿಗಿಗೊಳಿಸಲಾಗಿದೆ. 

ಈ ಬಗ್ಗೆ ರಾಜ್ಯ ಸರ್ಕಾರ ಹೊಸ ಕ್ವಾರಂಟೈನ್ ಮಾರ್ಗಸೂಚಿಗಳನ್ನ ಪ್ರಕಟಿಸಿದೆ. ಹಾಗಾದ್ರೆ ಯಾವ-ಯಾವ ರಾಜ್ಯದಿಂದ ಬರೋರಿಗೆ ಏನೆಲ್ಲಾ ರೂಲ್ಸ್ ಎನ್ನುವುದು ಈ ಕೆಳಗಿನಂತಿದೆ ನೋಡಿ.

* ದೇಶದಲ್ಲಿ ಅತಿ ಹೆಚ್ಚು ಸೋಂಕಿತರನ್ನ ಹೊಂದಿರುವ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರನ್ನ 7 ದಿನ ಸಾಂಸ್ಥಿಕ ಕ್ವಾರಂಟೈನ್, 7 ದಿನ ಹೋಂ ಕ್ವಾರಂಟೈನ್ 

* ತಮಿಳುನಾಡಿನಿಂದ ಬರುವ ಪ್ರಯಾಣಿಕರು 3 ದಿನ ಸಾಂಸ್ಥಿಕ ಕ್ವಾರಂಟೈನ್, 11  ದಿನ ಹೋಂ ಕ್ವಾರಂಟೈನ್.

* ದೆಹಲಿಯಿಂದ ಬರೋ ಜನರಿಗೆ ದಿನ ಸಾಂಸ್ಥಿಕ ಕ್ವಾರಂಟೈನ್, 11  ದಿನ ಹೋಂ ಕ್ವಾರಂಟೈನ್.

* ಇನ್ನೂ ದೇಶದ ಇತರೆ ರಾಜ್ಯಗಳಿಂದ ಅಗಮಿಸುವ ಪ್ರಯಾಣಿಕರಿಗೆ ಕಡ್ಡಾಯ 14 ದಿನ ಹೋಂ ಕ್ವಾರಂಟೈನ್ ಇರಬೇಕೆಂದು ಹೊಸ ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗಿದೆ. 

click me!