ಬೆಂಗಳೂರಿನ ಈಸ್ಟ್ ಹಾಗೂ ವೆಸ್ಟ್ ಝೋನ್‌ನಲ್ಲಿ ಮೂಡಸಿದ ಅತಂಕ| ಕೊರೋನಾ ಕೇಸ್, ಡೆತ್ ಎರಡಲ್ಲೂ ಈ ಜೋನ್‌ಗಳು ಮುಂದಿವೆ| ನಗರದ ಜನತೆ ಎಚ್ಚರ ವಹಿಸಬೇಕಾದ ಅಗತ್ಯತೆ ಇದೆ|
ಬೆಂಗಳೂರು(ಜೂ.19): ಲಾಕ್‌ಡೌನ್ ಸಡಿಲಿಕೆ ಬಳಿಕ ರಾಜ್ಯ ಹಾಗೂ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕು ಮಿತಿ ಮೀರಿ ಹರಡುತ್ತಿದೆ. ಕೊರೋನಾ ರೋಗಿಗಳಿಗೆ ಆಸ್ಪತ್ರೆಗಳು, ಬೆಡ್‌ಗಳ ಸಮಸ್ಯೆ ಎದುರಾಗಿದೆ. ಹೀಗಾಗಿ ಕೋವಿಡ್ ಪೇಶೆಂಟ್‌ಗಳಿಗೆ ಎದುರಾದ ಸಮಸ್ಯೆಗೆ ಬಿಬಿಎಂಪಿ ವೈದ್ಯಾಧಿಕಾರಿಗಳು ಪರ್ಯಾಯ ವ್ಯವಸ್ಥೆಗೆ ಸಿದ್ಧತೆ ಆರಂಭಿಸಿದ್ದಾರೆ ಎಂದು ಬಿಬಿಎಂಪಿ ಕಮಿಷನರ್ ಬಿ.ಹೆಚ್. ಅನಿಲ್ ಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿರುವ ಅವರು, ಕ್ವಾರಂಟೈನ್ ಮಾಡಲು ನಗರದಲ್ಲಿರುವ ಕ್ರೀಡಾಂಗಣ, ಕಲ್ಯಾಣ ಮಂಟಪಗಳನ್ನ ಬಳಿಸಿಕೊಳ್ಳಲು ನಿರ್ಧರಿಸಲಾಗಿದೆ. ವಿದೇಶಗಳಿಂದ ಮತ್ತು ಅಂತರರಾಜ್ಯಗಳಿಂದ ನಗರಕ್ಕೆ ಆಗಮಿಸುತ್ತಿರುವ ಪ್ರಯಾಣಿಕರನ್ನ ಕ್ವಾರಂಟೈನ್ ಮಾಡಲು ಸ್ಥಳಾವಕಾಶದ ಕೊರತೆ ಉಂಟಾಗಿದೆ. ಹೀಗಾಗಿ ನಗರದಲ್ಲಿರುವ ಕ್ರೀಡಾಂಗಣ, ಕಲ್ಯಾಣ ಮಂಟಪಗಳಲ್ಲಿ ವಿದೇಶಗಳಿಂದ ಮತ್ತು ಅಂತರರಾಜ್ಯಗಳಿಂದ ನಗರಕ್ಕೆ ಆಗಮಿಸುತ್ತಿರುವ ಪ್ರಯಾಣಿಕರಿಗೆ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿತ್ತಿದೆ ಎಂದು ತಿಳಿಸಿದ್ದಾರೆ.
undefined
ದೇಶದಲ್ಲಿ ಕೊರೋನಾ ತಾಂಡವ: 4ನೇ ಸ್ಥಾನದಲ್ಲಿ ಭಾರತ
ಲಾಕ್‌ಡೌನ್ ಸಡಿಲಿಕೆ ಬಳಿಕ ರಾಜ್ಯ ಹಾಗೂ ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ. ಬೆಂಗಳೂರಿನಲ್ಲಿ ದಿನೇ ದಿನೇ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿವೆ ಹಾಗೂ ಮರಣ ಸಂಖ್ಯೆಯಲ್ಲಿ ಕೂಡ ಹೆಚ್ಚಳವಾಗುತ್ತಿದೆ. ಇದು ಬಹಳ ಆತಂಕಕಾರಿಯಾದ ಅಂಶವಾಗಿದೆ.
ಬಿಬಿಎಂಪಿಗೆ ಸವಾಲಾದ ಕ್ವಾರಂಟೈನ್
ನಗರದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು ಹಾಗೂ ಬೆಂಗಳೂರಿಗೆ ಗಣನೀಯ ಪ್ರಮಾಣದಲ್ಲಿ ಜನರು ಆಗಮಿಸುತ್ತಿರುವುದರಿಂದ ಕ್ವಾರಂಟೈನ್ ಮಾಡಲು ಕೂಡ ನಗರದಲ್ಲಿ ಸ್ಥಳವಕಾಶದ ಕೊರತೆ ಉಂಟಾಗಿದೆ. ನಗರದ ಹೋಟೆಲ್‌ಗಳು, ಶಾಲಾ-ಕಾಲೇಜು ಹಾಸ್ಟೆಲ್ ಎಲ್ಲವೂ ಫುಲ್ ಆಗುತ್ತಿವೆ. ಮಹಾರಾಷ್ಟ್ರ, ದೆಹಲಿ, ತಮಿಳುನಾಡು ಮತ್ತು ವಿದೇಶದಿಂದ ಬರುವವರಿಗೆ ಮಾತ್ರ ಸದ್ಯ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ. ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ವಿದೇಶ ಪ್ರಯಾಣಿಕರನ್ನ ಹೊರತುಪಡಿಸಿ ಉಳಿದ ರಾಜ್ಯದ ಪ್ರಯಾಣಿಕರಿಗೆ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಹೀಗಿದ್ರೂ ಕೂಡ ಕ್ವಾರಂಟೈನ್ ಮಾಡುವ ವಿಚಾರ ಬಿಬಿಎಂಪಿಗೆ ಸವಾಲಾಗಿ ಪರಿಣಮಿಸಿದೆ.
ನಗರದಲ್ಲಿರುವ ಒಳಾಂಗಣ ಕ್ರೀಡಾಂಗಣ, ಕಲ್ಯಾಣ ಮಂಟಪ, ಎಗ್ಸಿಬಿಶನ್ ಸೆಂಟರ್‌ಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಲು ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಈ ಸಂಬಂಧ ಬಿಬಿಎಂಪಿ ಕಂಠೀರವ ಸ್ಟೇಡಿಯಂ, ಅರಮನೆ ಮೈದಾನದ ತ್ರಿಪುರವಾಸಿನಿ ಕಲ್ಯಾಣ ಮಂಟಪ, ಬೆಂಗಳೂರು ಇಂಟರ್ನ್ಯಾಷನಲ್ ಎಗ್ಸಿಬಿಶನ್ ಸೆಂಟರ್, ವೈಟ್ ಫೀಲ್ಡ್ ನಲ್ಲಿರೊ ಎಗ್ಸಿಬಿಶನ್ ಸೆಂಟರ್‌ಗಳನ್ನ ಗುರುತಿಸಿದೆ. ಇದರ ಜೊತೆ ನಗರದ ಹಲವು ಸ್ಥಳಗಳನ್ನೂ ಕೂಡ ಬಿಬಿಎಂಪಿ ಅಧಿಕಾರಿಗಳು ಲಿಸ್ಟ್ ಮಾಡಿಕೊಂಡಿದ್ದಾರೆ.
ಈ ಎಲ್ಲಾ ಸ್ಥಳಗಳಲ್ಲಿ ಕ್ವಾರಂಟೈನ್ ಫುಲ್ ಆದ್ರೆ ಹಂತ ಹಂತವಾಗಿ ಬಿಬಿಎಂಪಿ ಹಲವು ಕಟ್ಟಡಗಳನ್ನ ಬಾಡಿಗೆಗೆ ಪಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ಪಾಲಿಕೆಯಿಂದ ಹಲವು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಸೋಂಕು ಹೆಚ್ಚಳವಾಗಿ ಕೈಮೀರಿ ಹೋಗುವ ಪರಿಸ್ಥಿತಿ ಎದುರಾದ್ರೆ ಒಳಕ್ರೀಡಾಂಗಣ, ಕಲ್ಯಾಣ ಮಂಟಪ, ಎಗ್ಸಿಬಿಶನ್ ಸೆಂಟರ್ ಗಳನ್ನೇ ಬಯಲು ಆಸ್ಪತ್ರೆಗಳಾಗಿ ಪರಿವರ್ತಿಸುವ ಚಿಂತನೆಯೂ ಕೂಡ ನಡೆದಿದೆ ಎಂದು ಬಿಬಿಎಂಪಿ ಕಮಿಷನರ್ ಬಿ.ಹೆಚ್ ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಆತಂಕ ಮೂಡಿಸಿದ 2 ಝೋನ್
ನಗರದ ಈಸ್ಟ್ ಹಾಗೂ ವೆಸ್ಟ್ ಝೋನ್‌ನಲ್ಲಿ ಅತಂಕ ಮೂಡಸಿವೆ. ಹೌದು, ಕೊರೋನಾ ಕೇಸ್, ಡೆತ್ ಎರಡಲ್ಲೂ ಈ ಜೋನ್‌ಗಳು ಮುಂದಿವೆ. ಇದರಿಂದ ನಗರದ ಜನತೆ ಎಚ್ಚರ ವಹಿಸಬೇಕಾದ ಅಗತ್ಯತೆ ಇದೆ. ಇದುವರೆಗೂ ಈಸ್ಟ್ ಝೋನ್‌ನ ಒಂದರಲ್ಲೇ 159 ಕೇಸ್‌ಗಳು ದಾಖಲಾಗಿ, 13 ಜನರು ಸಾವನ್ನಪ್ಪಿದ್ದಾರೆ. ಈಸ್ಟ್ ಝೋನ್‌ನಲ್ಲಿರುವ ನಾಗವಾರ, ವಾಮನ್ ಪೇಟೆ, ಎಸ್.ಕೆ.ಗಾರ್ಡನ್, ಅಗರಂ, ಸಂಪಂಗಿರಾಮನಗರ, ಸೇರಿದಂತೆ 10 ಕಂಟೈನ್ಮೆಂಟ್ ಝೋನ್‌ಗಳಿವೆ.
ಇನ್ನು ವೆಸ್ಟ್ ಝೋನ್‌ನಲ್ಲಿ 144 ಕೊರೋನಾ ಕೇಸ್ ಹಾಗೂ 11 ಸೋಂಕಿತರು ಸಾವನ್ನಪ್ಪಿದ್ದಾರೆ. ವೆಸ್ಟ್ ಝೋನ್‌ನಲ್ಲಿ ಪಾದರಾಯನಪುರ, ಮಲ್ಲೇಶ್ವರ, ಅಗ್ರಹಾರ ದಾಸರಹಳ್ಳಿ, ಸೇರಿದಂತೆ 16 ಕಂಟೈನ್ಮೆಂಟ್ ಝೋನ್‌ಗಳಿವೆ. ಹೀಗಾಗಿ ಈ ಎರಡು ಝೋನ್‌ಗಳಲ್ಲಿರುವ ಜನರು ಎಚ್ಚರದಿಂದ ಇರೋದು ಒಳಿತು.