ಡಿ.ಕೆ ಶಿವಕುಮಾರ್ ಪದಗ್ರಹಣ: ಕೈ ಮುಖಂಡರಿಗೆ ಎಚ್ಚರಿಕೆ ನೀಡಿದ ಡಿಕೆಶಿ

By Suvarna NewsFirst Published Jun 19, 2020, 8:45 AM IST
Highlights

ಪಕ್ಷದ ಕಾರ್ಯಕ್ರಮದಲ್ಲಿ ಸಕ್ರಿಯವಾಗದಿದ್ದವರ ಮೇಲೆ ಡಿಕೆಶಿ ಕಂಗಣ್ಣು| ಪದಗ್ರಹಣ ಕಾರ್ಯಕ್ರಮದ ಸಂಬಂಧ ಇದೇ ತಿಂಗಳ 22 ರಂದು ಮಾಜಿ ಪಾದಾಧಿಕಾರಿಗಳು, ಜಿಲ್ಲಾಧ್ಯಕ್ಷರ ಸಭೆ ಕರೆದ ಡಿ.ಕೆ ಶಿವಕುಮಾರ್| ಕೆಪಿಸಿಸಿ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಮುಖಂಡರ ವರ್ತನೆಯನ್ನೂ ಸಹ ಪರಿಗಣಿಸಲಾಗುವುದು ಕೈ ಮುಖಂಡರಿಗೆ ಎಚ್ಚರಿಕೆ ನೀಡಿದ ಡಿಕೆಶಿ|

ಬೆಂಗಳೂರು(ಜೂ.19): ಜುಲೈ 2 ರಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.  ಹೀಗಾಗಿ ಪದಗ್ರಹಣ ಕಾರ್ಯಕ್ರಮಕ್ಕೆ ಪಕ್ಷದ ಮುಖಂಡರ ಸ್ಪಂದನೆ ಕುರಿತು ಸರ್ವೇಯೊಂದನ್ನ ಡಿ.ಕೆ. ಶಿವಕುಮಾರ್ ಅವರು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಈ ಸಂಬಂಧ ಡಿ.ಕೆ ಶಿವಕುಮಾರ್ ಅವರು ಆಪ್ತ ಬಳಗವನ್ನ ಎಲ್ಲ ಜಿಲ್ಲೆಗಳಿಗೆ ಕಳುಹಿಸಿದ್ದಾರೆ. ಪದಗ್ರಹಣ ಕಾರ್ಯಕ್ರಮದ ಜಿಲ್ಲಾ ಮುಖಂಡರಿಂದ ತಯಾರಿ ಕುರಿತು ವರದಿಗಳನ್ನ ತರಿಸಿಕೊಳ್ಳುತ್ತಿದ್ದಾರೆ. ರಾಜ್ಯದ 10 ಸಾವಿರ ಸ್ಥಳಗಳಲ್ಲಿ ಪದಗ್ರಹಣ ಕಾರ್ಯಕ್ರಮ ಲೈವ್ ವೀಕ್ಷಣೆಗೆ ಭರ್ಜರಿ ತಯಾರಿ ನಡೆದಿದೆ. ಆದರೆ, ಜಿಲ್ಲಾ ಮುಖಂಡರು ಕಾರ್ಯಕ್ರಮವನ್ನ ಗಂಭೀರವಾಗಿ ತೆಗೆದುಕೊಳ್ಳದಿರುವ ಬಗ್ಗೆ ಡಿ.ಕೆ ಶಿವಕುಮಾರ್ ಮಾಹಿತಿ ಕಲೆ ಹಾಕಿದ್ದಾರೆ. ಹೀಗಾಗಿ ಜಿಲ್ಲಾ ಮುಖಂಡರಿಗೆ ಎಚ್ಚರಿಕೆ ಕೂಡ ನೀಡಿರುವ ಡಿಕೆಶಿ ಪದಗ್ರಹಣ ಕಾರ್ಯಕ್ರಮ ಪಕ್ಷದ ಕಾರ್ಯಕ್ರಮ ಎಂದು ಭಾವಿಸಿ ಕಾರ್ಯಕ್ರಮವನ್ನ ಯಶಸ್ವಿಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಜುಲೈ 2ರಂದು ಡಿಕೆಶಿ ಪದಗ್ರಹಣ ನಿಶ್ಚಿತ: ಸಿದ್ದರಾಮಯ್ಯ

ಈ ಕಾರ್ಯಕ್ರಜುಲೈ 2ರಂದು ಡಿಕೆಶಿ ಪದಗ್ರಹಣ ನಿಶ್ಚಿತ: ಸಿದ್ದರಾಮಯ್ಯಮದಲ್ಲಿ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳುವಿಕೆ ಅತೀ ಮುಖ್ಯವಾಗಿದೆ. ಡಿ.ಕೆ ಶಿವಕುಮಾರ್‌ ಅವರು ತಮ್ಮ ಆಪ್ತ ಬಳಗದಿಂದ ಮುಖಂಡರ ವರ್ತನೆ ಬಗ್ಗೆ ಪ್ರತಿದಿನ ವರದಿ ಪಡೆಯುತ್ತಿದ್ದಾರೆ. ಯಾರು ಏನು ಮಾತಾಡ್ತಾರೆ. ಪದಗ್ರಹಣ ಕಾರ್ಯಕ್ರಮ ನಿರ್ಲಕ್ಷಿಸುತ್ತಿರುವ ಮುಖಂಡರ ಬಗ್ಗೆಯೂ ವರದಿಯನ್ನ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. 

ಪದಗ್ರಹಣ ಕಾರ್ಯಕ್ರಮದ ಸಂಬಂಧ ಡಿ.ಕೆ ಶಿವಕುಮಾರ್ ಇದೇ ತಿಂಗಳ 22 ರಂದು ಮಾಜಿ ಪಾದಾಧಿಕಾರಿಗಳು, ಜಿಲ್ಲಾಧ್ಯಕ್ಷರ ಸಭೆ ಕರೆದಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಪ್ತ ಬಳಗ ನೀಡಿದ ಮಾಹಿತಿಯ‌ ಮೇಲೆ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಕೆಪಿಸಿಸಿ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಮುಖಂಡರ ವರ್ತನೆಯನ್ನೂ ಸಹ ಪರಿಗಣಿಸಲಾಗುವುದು ಕೈ ಮುಖಂಡರಿಗೆ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
 

click me!