USAID: ಉತ್ತಮ ಆರೋಗ್ಯ ಸೇವೆ ಒದಗಿಸುವುದೇ ಬೆಂಗ್ಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯ ಉದ್ದೇಶ: ವೀಣಾ ರೆಡ್ಡಿ

Suvarna News   | Asianet News
Published : Jan 17, 2022, 11:32 AM ISTUpdated : Jan 17, 2022, 11:35 AM IST
USAID: ಉತ್ತಮ ಆರೋಗ್ಯ ಸೇವೆ ಒದಗಿಸುವುದೇ ಬೆಂಗ್ಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯ ಉದ್ದೇಶ: ವೀಣಾ ರೆಡ್ಡಿ

ಸಾರಾಂಶ

*  USAID ಇಂಡಿಯಾ ಮಿಷನ್ ನಿರ್ದೇಶಕಿ ವೀಣಾ ರೆಡ್ಡಿ ಅವರ ಭಾಷಣ  *  ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿನ ಉದ್ಘಾಟನಾ ಸಮಾರಂಭ  *  ನನಗೆ ವರ್ಚುವಲ್ ಆಗಿ ಆತಿಥ್ಯ ನೀಡಿದ್ದಕ್ಕೆ ಧನ್ಯವಾದಗಳು: ವೀಣಾ ರೆಡ್ಡಿ   

ಬೆಂಗಳೂರು(ಜ.17):  ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯ(Bangalore Baptist Hospital) ನಿರ್ದೇಶಕ ಡಾ. ಸ್ಪರ್ಜನ್ ಮತ್ತು ಬೇಲರ್ ವಿಶ್ವವಿದ್ಯಾನಿಲಯದ ಡಾ. ಗಾರ್ನರ್ ಅವರ ಸಮರ್ಥ ಮುಂದಾಳತ್ವ ಹಾಗೂ ಈ ಕಾರ್ಯಕ್ರಮವನ್ನು ಸಾಕಾರಗೊಳಿಸಿದ್ದಕ್ಕೆ ಧನ್ಯವಾದಗಳು ಅಂತ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್(USAID)ನ ಭಾರತದ ನಿರ್ದೇಶಕಿ ವೀಣಾ ರೆಡ್ಡಿ(Veena Reddy) ತಿಳಿಸಿದ್ದಾರೆ. 

ಇತ್ತೀಚೆಗೆ ನಗರದಲ್ಲಿ ನಡೆದ US ಏಜೆನ್ಸಿ ಫಾರ್‌ ರ್ಇಂಟರ್‌ನ್ಯಾಶನಲ್ ಡೆವಲಪ್‌ಮೆಂಟ್ ಸೇರಿದಂತೆ ಭಾರತದಲ್ಲಿನ US ಮಿಷನ್ ಪರವಾಗಿ ವರ್ಚುವಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಗೌರವದ ಸಂಗತಿಯಾಗಿದೆ ಅಂತ ಹೇಳಿದ್ದಾರೆ.

 

Dharwad: ಕಳೆದ 3 ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ವೇತನವನ್ನೇ ಕೊಟ್ಟಿಲ್ಲ!

ಆಸ್ಪತ್ರೆ ಖುದ್ದಾಗಿ ನೋಡಲು ಕಾತುರ

ಆಸ್ಪತ್ರೆಯನ್ನು ಖುದ್ದಾಗಿ ನೋಡಲು, ಅಲ್ಲಿನ ಸಿಬ್ಬಂದಿಯೊಂದಿಗೆ ಮಾತನಾಡಲು ಮತ್ತು ಸೇವೆಗಳ ಉಪಯೋಗ ಮಾಡಿಕೊಳ್ಳುತ್ತಿರುವ ಜನರನ್ನು ಭೇಟಿಯಾಗಲು ಕಾತುರಳಾಗಿದ್ದೇನೆ. ಪ್ರಯಾಣ ಮತ್ತು ಸಭೆ ನಡೆಸಲು ಸುರಕ್ಷಿತ ಪರಿಸ್ಥಿತಿ ನಿರ್ಮಾಣವಾಗಬೇಕಿದೆ. ಈ ಭೇಟಿ ಸಾಧ್ಯವಾಗುವ ದಿನಗಳಿಗಾಗಿ ಎದುರು ನೋಡುತ್ತಿದ್ದೇನೆ ಅಂತ  ಹೇಳಿದ್ದಾರೆ. 

ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆ ಲಾಭದ ಉದ್ದೇಶವಿಲ್ಲದೇ ಯಾವುದೇ ಧರ್ಮ, ಜನಾಂಗ ಅಥವಾ ಆರ್ಥಿಕ ಹಿನ್ನೆಲೆಯ ಭೇದ ಭಾವವಿಲ್ಲದೆ ಎಲ್ಲರಿಗೂ ಆರೋಗ್ಯ ಸೇವೆಯನ್ನು(Health Service) ಒದಗಿಸುವ ಬದ್ಧತೆಯನ್ನ ಹೊಂದಿದೆ. ಅದರ ಮೌಲ್ಯಗಳು ಭಾರತದಲ್ಲಿ(India) ಹಾಗೂ ಪ್ರಪಂಚದಾದ್ಯಂತ USAID ನಡೆಸುತ್ತಿರುವ ಕೆಲಸಗಳೊಂದಿಗೆ ಹೊಂದಾಣಿಕೆಯಾಗಿವೆ. ಅಮೇರಿಕ ಸರ್ಕಾರದ(Government of US) ಪರವಾಗಿ USAIDಯು ಕಳೆದ 60ಕ್ಕೂ ಹೆಚ್ಚು ವರ್ಷಗಳಿಂದ ಭಾರತ ದಕ್ಷಿಣ ಏಷ್ಯಾ(South Asia) ಹಾಗೂ ಜಾಗತಿಕವಾಗಿ ತನ್ನ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವಲ್ಲಿ ಮತ್ತು ನೇತಾರನಾಗಿ ಹೊರ ಹೊಮ್ಮಲು ಅನುವಾಗುವಂತೆ ಬೆಂಬಲ ನೀಡಲು ಬದ್ಧವಾಗಿದೆ ಅಂತ ತಿಳಿಸಿದ್ದಾರೆ. 

ASHA ಎಂಬ ಅಮೆರಿಕನ್ ಸ್ಕೂಲ್ಸ್ ಅಂಡ್ ಹಾಸ್ಪಿಟಲ್ಸ್ ಅಬ್ರಾಡ್ ಪ್ರೋಗ್ರಾಮ್ ಬಗ್ಗೆ ನೀವು ಕೇಳಿಲ್ಲದಿರಬಹುದು, ಇದು ಅಮೇರಿಕ ಸರ್ಕಾರದ ಉಪಕ್ರಮವಾಗಿದ್ದು, 1947 ರಿಂದ ಅಮೇರಿಕದ ಆರೋಗ್ಯ ಮತ್ತು ಶಿಕ್ಷಣದ ಆವಿಷ್ಕಾರಗಳಲ್ಲಿ ಅತ್ಯುತ್ತಮವಾದ ಕೆಲಸ ಹಾಗೂ ಸಂಪನ್ಮೂಲಗಳನ್ನು ಹಂಚುತ್ತಾ ಸಾಗಿದೆ. ಈ ಪಯಣ ಇನ್ನೂ ಮುಂದುವರಿದಿದೆ ಹಾಗೂ ಕಾಲಾಂತರದಲ್ಲಿ ಸುಧೃಢ ಸಂಬಂಧಗಳನ್ನು ಬೆಳೆಸಲು ನೆರವಾಗುತ್ತಿದೆ. ಭಾರತದಲ್ಲಿ USAID 1979 ರಿಂದ ಆಶಾ ಕಾರ್ಯಕ್ರಮದಡಿಯಲ್ಲಿ ಒಟ್ಟು 28 ಮಿಲಿಯನ್ ಅಮೆರಿಕನ್ ಡಾಲರ್‌ ಮೊತ್ತಕ್ಕಿಂತಲೂ ವೆಚ್ಚ ಮಾಡಿದೆ ಅಂತ ಹೇಳಿದ್ದಾರೆ. 

ಇಂದು ನಾವು ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಆಶಾ ಬೆಂಬಲಿತ ಜೀವನ ಮತ್ತು ಕಲಿಕೆ ಕೇಂದ್ರ ಮತ್ತು ಮಹಿಳಾ ಮತ್ತುಮಕ್ಕಳ ಆರೋಗ್ಯ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟಿಸುತ್ತಿದ್ದೇವೆ. ಈ ಕೇಂದ್ರಗಳು ಬೆಂಗಳೂರಿನಲ್ಲಿ(Bengaluru) ಮಹಿಳೆಯರು(Woman) ಮತ್ತು ಮಕ್ಕಳ(Children) ಸೇವೆಗಳ ಲಭ್ಯತೆ ಮತ್ತು ಗುಣಮಟ್ಟವನ್ನು ಹೆಚ್ಚಿಸಿ, 100 ಹೆಚ್ಚುವರಿ ಹಾಸಿಗೆಗಳನ್ನು ಅಳವಡಿಸಿ 220 ಕ್ಕೂ ಹೆಚ್ಚು ನರ್ಸಿಂಗ್  ವಿದ್ಯಾರ್ಥಿಗಳಿಗೆ ವಸತಿ ಒದಗಿಸಲಿವೆ. ಈ ಹೊಸ ಕೇಂದ್ರದ ಭಾಗವಾಗಿ ಮೊಬೈಲ್ ಪೀಡಿಯಾಟ್ರಿಕ್ ಮತ್ತು ಸಾಂತ್ವನ ಆರೈಕೆ ಮತ್ತು ಸ್ಮಾರ್ಟ್ ತರಗತಿಗಳಂತಹ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿದು ನನಗೆ ಬಹು ಸಂತಸವಾಗಿದೆ. ಭಾರತದ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಇತ್ತೀಚಿನ ಆವಿಷ್ಕಾರಗಳು, ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ USAIDನ ಉದ್ದೇಶದೊಂದಿಗೆ  ಹೊಂದಿಕೆಯಾಗುತ್ತದೆ. ಬೇಲರ್ ವಿಶ್ವವಿದ್ಯಾನಿಲಯದೊಂದಿಗಿನ ನಮ್ಮ ನಿಕಟಪಾಲುದಾರಿಕೆ ಮತ್ತು ಸಹಯೋಗದಿಂದಲೇ ಇಂದಿನ ಕಾರ್ಯಕ್ರಮ ಸಾಧ್ಯವಾಗಿದೆ ಅಂತ ಸಂತಸ ವ್ಯಕ್ತಪಡಿಸಿದ್ದರು. 

women empowerment: ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಒಡಿಶಾದ ಆಶಾ ಕಾರ್ಯಕರ್ತೆ

ಭಾರತದಲ್ಲಿ ಅರೋಗ್ಯ ಸೇವೆಗಳನ್ನು ಉತ್ತಮ ಪಡಿಸಲು ಸಂಶೋಧನೆ, ವಿದ್ಯಾರ್ಥಿವೇತನ ಮತ್ತು ಸಾಮರ್ಥ್ಯ ವರ್ಧನೆಗಳ ಮೂಲಕ ಬೇಲರ್ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಗಳು ಜತೆಯಾಗಿ ಬಹುಕಾಲದಿಂದ ಮಾಡುತ್ತಿರುವ ಕೆಲಸಗಳನ್ನು USAID ಪ್ರಶಂಸಿಸುತ್ತದೆ. ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯೊಂದಿಗೆ ನಿಮ್ಮ ಪಾಲುದಾರಿಕೆಗಾಗಿ ಡಾ. ಗಾರ್ನರ್ ಅವರಿಗೆ ಧನ್ಯವಾದಗಳು, ರೋಗಿಗಳ ಶುಶ್ರೂಷೆಗೆ ಉತ್ತಮಗೊಳಿಸಲು ಭಾರತದಲ್ಲಿ ನರ್ಸ್‌ಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯ ಬಗ್ಗೆ ಅರಿವು ನೀಡಿ ಸಬಲಗೊಳಿಸಿದ್ದೀರಿ. ಭಾರತದಲ್ಲಿ ನರ್ಸ್‌ಗಳ ಹೆಚ್ಚಿನ ಕಲಿಕೆಗೆ ಅನುವಾಗಲು ನೀವು ಫುಲ್‌ಬ್ರೈಟ್-ನೆಹರು ರಿಸರ್ಚ್ ಫ್ಲೆಕ್ಸ್ ಅನುದಾನದಲ್ಲಿ ಭಾಗವಹಿಸಿದ್ದೀರಿ ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ ಅಂತ ತಿಳಿಸಿದ್ದಾರೆ. 

ಫುಲ್‌ಬ್ರೈಟ್ ಪ್ರೋಗ್ರಾಂ ಮತ್ತು ASHA ನಂತಹ ಅಂತರರಾಷ್ಟ್ರೀಯ ವಿನಿಮಯಗಳು ಮತ್ತು ಉಪಕ್ರಮಗಳು ನಮ್ಮ ಎರಡು ದೇಶಗಳ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಇದರಪರಿಣಾಮವಾಗಿ ಇಂದು ಈ ಕೇಂದ್ರಗಳಂತಹ ಪರಿಣಾಮಕಾರಿ ಉಪಕ್ರಮಗಳು ಸಾಧ್ಯವಾಗಿವೆ ಎಂದಿದ್ದಾರೆ. 

ನನಗೆ ವರ್ಚುವಲ್ ಆಗಿ ಆತಿಥ್ಯ ನೀಡಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು. ಸಂದರ್ಭ ಸುರಕ್ಷಿತ ಎಂದಾದ ಕೂಡಲೇ ನಾನು ಹೊಸ ಕೇಂದ್ರಗಳಿಗೆ ಭೇಟಿ ನೀಡುವ ಅವಕಾಶಕ್ಕಾಗಿ ಎದುರು ನೋಡುತ್ತೇನೆ. ಅಲ್ಲಿಯವರೆಗೆ, ದಯವಿಟ್ಟು ಆರೋಗ್ಯವಾಗಿರಿ ಮತ್ತು ಎಲ್ಲಾ ಸಲಹೆ ಹಾಗೂ ವೈದ್ಯಕೀಯ ಮುನ್ನೆಚ್ಚರಿಕೆಗಳನ್ನು ಅನುಸರಿಸಿ ಅಂತ ವೀಣಾ ರೆಡ್ಡಿ ಅವರು ಮನವಿ ಮಾಡಿಕೊಂಡಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!