
ರಾಯಚೂರು(ಜೂ.10): ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿ(Puneeth kerehalli)ಯವರು ರಾಘವೇಂದ್ರ ಸ್ವಾಮಿ(Mantralaya Raghavendra temple)ಯ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಆಗಮಿಸಿದ್ದ ವೇಳೆ, ರಾಯಚೂರಿನ ಹಿಂದೂ ಸಮ್ಮೇಳನಕ್ಕೆ ಆಗಮಿಸದಂತೆ ರಾಯಚೂರು ಪೊಲೀಸರು ನೋಟಿಸ್ ನೀಡಿದ ವಿಷಯವಾಗಿ ಪುನೀತ್ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಶ್ರೀರಾಮಸೇನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಿಂತ ಮುಂಚೆ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಪುನೀತ್ ಕೆರೆಹಳ್ಳಿ ಅವರ ಬಳಿಗೆ ಬಂದ ರಾಯಚೂರು ಜಿಲ್ಲೆ ಪೊಲೀಸರು, ಹಿಂದೂ ಮಹೋತ್ಸವಕ್ಕೆ ಬರದಂತೆ ನೋಟಿಸ್ ನೀಡಿದರು. ಇದರಿಂದ ಸಿಟ್ಟಿಗೆದ್ದ ಪುನೀತ್ ಕೆರೆಹಳ್ಳಿ, ಇದು ಆಂಧ್ರಪ್ರದೇಶ. ರಾಯರ ಮಠಕ್ಕೆ ಬಂದಿದ್ದೇನೆ. ರಾಯಚೂರಿಗೆ ಬಂದ ಮೇಲೆ ನೀವು ನಿಮ್ಮ ಅಧಿಕಾರ ಚಲಾಯಿಸಿ ಎಂದು ಪೊಲೀಸರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಘಟನೆಯ ವಿಡಿಯೋ ವೈರಲ್ ಆಗಿದ್ದು, ಹಿಂದೂಪರ ಮುಖಂಡನಿಗೆ ನೋಟಿಸ್ ಕೊಡುವ ಪೊಲೀಸರ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅವರಿನ್ನೂ ರಾಯಚೂರು ಗಡಿಪ್ರವೇಶ ಮಾಡಿಲ್ಲ. ಮಂತ್ರಾಲಯ ಆಂಧ್ರ ವ್ಯಾಪ್ತಿಯಲ್ಲಿದೆ. ಮಂತ್ರಾಲಯ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಹೋಗುವಾಗ ಹಿಂಬಾಲಿಸಿ ಪುನೀತ್ ಕೆರೆಹಳ್ಳಿಯವರಿಗೆ ನೋಟಿಸ್ ನೀಡುತ್ತಾರೆಂದರೆ ಏನರ್ಥ? ರಾಜ್ಯ ಸರ್ಕಾರದ ಒತ್ತಡಕ್ಕೊಳಗಾಗಿ ಕಾನೂನು ಪಾಲಿಸದೆ ಮೇಲಿನವರು ಹೇಳಿದಂತೆ ಕೇಳುವ ಪೊಲೀಸರು ಸುಖಾಸುಮ್ಮನೆ ಪುನೀತ್ ಕೆರೆಹಳ್ಳಿಯವರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಮಂಗಳೂರಿನವರು ಎಂದು ಹೇಳಲಾದ ಅನ್ಯಕೋಮಿನ ವ್ಯಕ್ತಿಗಳು ಬಹಿರಂಗವಾಗಿ ಪುನಿತ್ ಕೆರೆಹಳ್ಳಿಯವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಅವರ ಫೋಟೋ ಫೋನ್ ನಂಬರ್ ಸಹಿತ ಇದ್ದರೂ, ಪೊಲೀಸರು ಯಾಕೆ ಬಂಧಿಸಿಲ್ಲ? ರಕ್ಷಣೆ ನೀಡಬೇಕಾದ ನೀವು(ಪೊಲೀಸ್ ಇಲಾಖೆ) ಅಧಿಕಾರದಲ್ಲಿರುವ ರಾಜಕಾರಣಿಗಳ ಮೂಗಿನ ನೇರಕ್ಕೆ ನಡೆದುಕೊಳ್ಳುವ ಮೂಲಕ ನೀವು ಸಮಾಜಕ್ಕೆ ಏನು ಸಂದೇಶ ಕೊಡುತ್ತಿದ್ದೀರಿ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದು ಕಡೆ ಜೀವ ಬೆದರಿಕೆ ಹಾಕಿದರೂ ಬಂಧಿಸದ ಪೊಲೀಸರು, ಇನ್ನೊಂದೆಡೆ ಹಿಂದೂ ಕಾರ್ಯಕ್ರಮಕ್ಕೆ ಹೋಗದಂತೆ ನಿರ್ಬಂಧಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
🚨 Suppressing the Voice of Democracy: Misuse of Law Against a Hindu Activist?
In a democratic system, every Indian citizen has the constitutional right to travel anywhere within the country and raise their voice. However, looking at recent events, it raises a serious concern:… pic.twitter.com/PSIeh1Rj4U— Puneeth Kerehalli (@Puneeth74353549) June 9, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ