2025ರ ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಕರ್ನಾಟಕ ಸರ್ಕಾರ ಪ್ರಕಟಿಸಿದೆ. ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಹೆಚ್ಚಿನ ರಜೆಗಳಿವೆ. ಕೆಲವು ಹಬ್ಬಗಳು ವಾರಾಂತ್ಯದಲ್ಲಿ ಬಂದರೂ, ಅವುಗಳಿಗೆ ರಜೆ ಘೋಷಿಸಿಲ್ಲ.
ಬೆಂಗಳೂರು (ನ.14): 2024ರ ವರ್ಷ ಕೊನೆಗೊಳ್ಳಲು ಒಂದೂವರೆ ತಿಂಗಳು ಬಾಕಿ ಇರುವಂತೆಯೇ ರಾಜ್ಯ ಸರ್ಕಾರ (public holidays 2025) 2025ರ ಸಾರ್ವತ್ರಿಕ ಹಾಗೂ ಪರಿಮಿತ ರಜಾದಿನಗಳ (restricted holiday 2025) ಪಟ್ಟಿಯನ್ನು ಗುರುವಾರ ಪ್ರಕಟ ಮಾಡಿದೆ. ಎಲ್ಲಾ 2ನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರದೊಂದಿಗೆ ಈ ದಿನಗಳು ಕೂಡ ರಜಾದಿನವಾಗಿರುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ರಜೆ ಪಟ್ಟಿಯಲ್ಲಿ ಭಾನುವಾರದಂದು ಬರುವ ಗಣರಾಜ್ಯೋತ್ಸವ (ಜನವರಿ 26), ಯುಗಾದಿ ಹಬ್ಬ (ಮಾರ್ಚ್ 30), ಮೊಹರಂ ಕಡೇ ದಿನ (ಜುಲೈ 6) ಹಾಗೂ ಮಹಾಲಯ ಅಮವಾಸ್ಯೆ (ಸೆಪ್ಟೆಂಬರ್ 9) ಹಾಗೂ 2ನೇ ಶನಿವಾರದಂದು ಬರುವ ಕನಕದಾಸ ಜಯಂತಿ (ನವೆಂಬರ್ 8) ರಜಾ ದಿನವನ್ನು ನಮೂದು ಮಾಡಲಾಗಿಲ್ಲ ಎಂದು ಸರ್ಕಾರ ತಿಳಿಸಿದೆ. ಏಪ್ರಿಲ್ ಹಾಗೂ ಅಕ್ಟೋಬರ್ ತಿಂಗಳು ಭರ್ಜರಿ ರಜಾ ತಿಂಗಳಾಗಿದ್ದು, ಕ್ರಮವಾಗಿ 4 ಹಾಗೂ 5 ಸಾರ್ವತ್ರಿಕ ರಜೆಗಳು ಸಿಗಲಿದೆ.
ಅದರೊಂದಿಗೆ ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು ಎಂದು ಸರ್ಕಾರ ತಿಳಿಸಿದೆ.
ದಿನಾಂಕ | ವಾರ | ಸಾರ್ವತ್ರಿಕ ರಜಾದಿನ |
ಜ.14 | ಮಂಗಳವಾರ | ಮಕರ ಸಂಕ್ರಾಂತಿ |
ಫೆ. 26 | ಬುಧವಾರ | ಮಹಾಶಿವರಾತ್ರಿ |
ಮಾ.31 | ಸೋಮವಾರ | ರಂಜಾನ್ |
ಏ.10 | ಗುರುವಾರ | ಮಹಾವೀರ ಜಯಂತಿ |
ಏ.14 | ಸೋಮವಾರ | ಡಾ.ಬಿಆರ್ ಅಂಬೇಡ್ಕರ್ ಜಯಂತಿ |
ಏ.18 | ಶುಕ್ರವಾರ | ಗುಡ್‌ಫ್ರೈಡೇ |
ಏ.30 | ಬುಧವಾರ | ಬಸವ ಜಯಂತಿ, ಅಕ್ಷತ ತೃತೀಯ |
ಮೇ.1 | ಗುರುವಾರ | ಕಾರ್ಮಿಕರ ದಿನಾಚರಣೆ |
ಜೂ.7 | ಶನಿವಾರ | ಬಕ್ರೀದ್ |
ಆ. 15 | ಶುಕ್ರವಾರ | ಸ್ವಾತಂತ್ರ್ಯ ದಿನಾಚರಣೆ |
ಆ.27 | ಬುಧವಾರ | ವರಸಿದ್ದಿ ವಿನಾಯಕ ವ್ರತ |
ಸೆ. 5 | ಶುಕ್ರವಾರ | ಈದ್‌ಮಿಲಾದ್ |
ಅ.1 | ಬುಧವಾರ | ಮಹಾನವಮಿ, ಆಯುಧಪೂಜೆ, ವಿಜಯದಶಮಿ |
ಅ.2 | ಗುರುವಾರ | ಗಾಂಧಿ ಜಯಂತಿ |
ಅ. 7 | ಮಂಗಳವಾರ | ಮಹರ್ಷಿ ವಾಲ್ಮೀಕಿ ಜಯಂತಿ |
ಅ.20 | ಸೋಮವಾರ | ನರಕ ಚತುದರ್ಶಿ |
ಅ.22 | ಬುಧವಾರ | ಬಲಿಪಾಡ್ಯಮಿ, ದೀಪಾವಳಿ |
ನ.1 | ಶನಿವಾರ | ಕನ್ನಡ ರಾಜ್ಯೋತ್ಸವ |
ಡಿ. 25 | ಗುರುವಾರ | ಕ್ರಿಸ್‌ಮಸ್ |
undefined
ಇದನ್ನೂ ಓದಿ: ಅಬ್ಬಬ್ಬಾ... ಪ್ರೀತಿಯ ಬೆಕ್ಕಿಗೆ 1.5 ಲಕ್ಷ ರೂಪಾಯಿ ಕೊಟ್ಟು ಹೇರ್‌ಕಟ್ ಮಾಡಿಸಿದ ಮಾಜಿ ಕ್ರಿಕೆಟಿಗ!
ಇದನ್ನೂ ಓದಿ: ₹67,538 ಕೋಟಿ ಮೌಲ್ಯದ ಅಮೆಜಾನ್ ಷೇರು ಮಾರಾಟ ಮಾಡಿದ ಜೆಫ್ ಬೆಜೋಸ್ ಮಾಜಿ ಪತ್ನಿ!