ರಾಮರಾಜ್ಯದ ಪರಿಕಲ್ಪನೆ ಇಟ್ಟುಕೊಂಡು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

By Ravi JanekalFirst Published Feb 18, 2024, 1:04 PM IST
Highlights

ಕಾಂಗ್ರೆಸ್ ಸರ್ಕಾರ ಅಂದರೆ ಬದ್ಧತೆ ಎಂದು ಹೆಮ್ಮೆಯಿಂದ ಹೇಳುತ್ತೇನೆ. ವಿಧಾನಸಭಾ ಚುನಾವಣೆಗೆ ಮುಂಚೆ ಪಂಚ ಗ್ಯಾರಂಟಿ ಘೋಷಣೆ ಮಾಡಿದ್ದೆವು. ಅಧಿಕಾರಕ್ಕೆ ಬಂದ ತಕ್ಷಣವೇ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕ್ರ್ ತಿಳಿಸಿದರು.

ಬೆಳಗಾವಿ (ಫೆ.18): ಕಾಂಗ್ರೆಸ್ ಸರ್ಕಾರ ಅಂದರೆ ಬದ್ಧತೆ ಎಂದು ಹೆಮ್ಮೆಯಿಂದ ಹೇಳುತ್ತೇನೆ. ವಿಧಾನಸಭಾ ಚುನಾವಣೆಗೆ ಮುಂಚೆ ಪಂಚ ಗ್ಯಾರಂಟಿ ಘೋಷಣೆ ಮಾಡಿದ್ದೆವು. ಅಧಿಕಾರಕ್ಕೆ ಬಂದ ತಕ್ಷಣವೇ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕ್ರ್ ತಿಳಿಸಿದರು.

ಬೆಳಗಾವಿಯಲ್ಲಿ ನೂತನ ಬಸ್ ನಿಲ್ದಾಣ ಲೋಕಾರ್ಪನೆಗೊಳಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದೆ. ಕಾಂಗ್ರೆಸ್ ನುಡಿದಂತೆ ನಡೆಯುವ ಸರ್ಕಾರವಾಗಿದೆ. ರಾಮಲಿಂಗಾರೆಡ್ಡಿ ಅಂದರೆ ಅವರೊಬ್ಬ ನಮ್ಮ ಸರಕಾರದ ವರ್ಕೋಹಾಲಿಕ್ ಮಂತ್ರಿ ಇದ್ದಹಾಗೆ ಸಾರಿಗೆ ಇಲಾಖೆಗೆ ಅವರು ಬಂದಿದ್ದು ಹೆಮ್ಮೆ. ಬೆಳಗಾವಿಗೆ ಎರಡನೇ ರಾಜಧಾನಿ ಎಂದು ಕರೆಯುತ್ತಾರೆ. ಹೀಗಾಗಿ ನಮ್ಮ ಜಿಲ್ಲೆಗೆ 50 ಬಸ್ ಹಂಚಿಕೆ ಮಾಡಲಾಗಿದೆ. ಇನ್ನೂ 1 ಸಾವಿರ ಬಸ್ ಖರೀದಿ, 2 ಸಾವಿರ ಉದ್ಯೋಗ ಭರ್ತಿಗೆ ಕ್ರಮ ವಹಿಸಲಾಗುತ್ತಿದೆ ಎಂದರು.

ಲೋಕಸಭೆಗೆ ನನ್ನ ಮಗ ಸ್ಪರ್ಧೆ ಮಾಡಬೇಕೆಂದು ಜನ ಬಯಸಿದ್ದಾರೆ: ಹೆಬ್ಬಾಳ್ಕರ್‌

ಕರ್ನಾಟಕ ಸಾರಿಗೆ ಸಂಸ್ಥೆಯ ಬಗ್ಗೆ ನಮಗೆ ಹೆಮ್ಮೆಯಿದೆ. 25 ವರ್ಷಗಳ ಹಿಂದೆ ನಮ್ಮ ಊರಿಗೆ ವಸ್ತಿ ಬಸ್ ಬರ್ತಿತ್ತು. ಚಾಲಕ‌ ನಿರ್ವಾಹಕರಿಗೆ ನಮ್ಮ ಮನೆಯಲ್ಲಿ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಅದನ್ನು ಸಹ ನೋಡಿದ್ದೇನೆ, ಈಗಿನ ವ್ಯವಸ್ಥೆ ಸಹ ನಾನು ನೋಡಿದ್ದೇನೆ. 145 ಜನರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಟ್ಟಿದ್ದೇವೆ. ಅಪಘಾತ ಆಗಬಾರದು ಎಂದು ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಅಪಘಾತದಲ್ಲಿ  ಮೃತ ಚಾಲಕರಿಗೆ 50ಲಕ್ಷ ಹಣ ಕೊಡುತ್ತೇವೆ. ಇದನ್ನು ಒಂದು ಕೋಟಿಗೆ ಹೆಚ್ಚಿಸಲು ಸಚಿವರು ಪ್ರಯತ್ನ ಮಾಡೋ ಭರವಸೆ ನೀಡಿದ್ದಾರೆ. ಶಕ್ತಿ ಯೋಜನೆ ಜಾರಿಯಿಂದಾಗಿ ಧರ್ಮಸ್ಥಳ, ಕೊಳ್ಳೂರು ಸೇರಿ ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಮಹಿಳೆಯರು ಓಡಾಡುತ್ತಾರೆ. ಗೃಹಲಕ್ಷ್ಮಿ ಯೋಜನೆ ಹಣವನ್ನು ದೇವಿಗೆ ಉಡಿ ತುಂಬಿ ಖುಷಿ ಪಡ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆ ಜಾರಿಗೆ ತಂದು ಇಂಥ ಪುಣ್ಯದ ಕೆಲಸ ಮಾಡಿದ್ದಾರೆ ಎಂದರು.

ರಾಮನ ಹೆಸರಲ್ಲಿ ರಾಜಕೀಯ ಮಾಡುವ ದಾರಿದ್ರ್ಯ ಕಾಂಗ್ರೆಸ್‌ಗೆ ಬಂದಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

 ನಾನು ಕೂಡ ರಾಮನ ಭಕ್ತಳು. ರಾಮರಾಜ್ಯದ ಪರಿಕಲ್ಪನೆ ಇಟ್ಟುಕೊಂಡು ನಮ್ಮ ಸರ್ಕಾರ ನಡೆಯುತ್ತಿದೆ. ನಮ್ಮ ಕಾಂಗ್ರೆಸ್ ಸರ್ಕಾರ ಇದನ್ನು ಪಾಲಿಸುತ್ತದೆ. ನಾವು ಈಗಾಗಲೇ ರಸ್ತೆ, ಬ್ರಿಡ್ಜ್, ಶಾಲೆ ಸಾಕಷ್ಟು ನಿರ್ಮಿಸಿದ್ದೇವೆ. ಗ್ಯಾರಂಟಿ ಮೂಲಕ ಮನೆ ಮನೆಗಳಲ್ಲಿ ರಾಮರಾಜ್ಯ ನಿರ್ಮಿಸುತ್ತಿದ್ದೇವೆ. ಬೆಳಗಾವಿಯಲ್ಲಿ ತಾಯಿ ತನ್ನ ಮಗನ ಅಂತ್ಯ ಸಂಸ್ಕಾರದ ವಿಡಿಯೋ ನೋಡಿದೆ. ದುಖಃ ಸಂದರ್ಭದಲ್ಲಿ 2 ಸಾವಿರ ‌ಹಣದ ಬಗ್ಗೆ ನೆನಪು ಮಾಡಿಕೊಂಡಿದ್ದಾಳೆ. ಬಡ ಕುಟುಂಬದ ನೆರವಿಗೆ ನಾವು ನಿಲ್ಲಬೇಕು. ಮನೆ ಮನೆಗಳಲ್ಲಿ ರಾಮ ರಾಜ್ಯ ನಿರ್ಮಾಣದ ಉದ್ದೇಶ ನಮ್ಮದು ಎಂದರು.

click me!