ಫ್ರೀಡಂ ಪಾರ್ಕ್‌ಗೆ ಗೋವುಗಳನ್ನು ತಂದು ಪ್ರತಿಭಟನೆ; ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ 9 ಬಿಜೆಪಿ ನಾಯಕರ ವಿರುದ್ದ ಎಫ್‌ಐಆರ್!

By Kannadaprabha NewsFirst Published Feb 11, 2024, 12:31 PM IST
Highlights

ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ 6 ಗೋವುಗಳನ್ನು ಫ್ರೀಡಂ ಪಾರ್ಕ್‌ಗೆ ತಂದಿದ್ದ ಹಿನ್ನೆಲೆಯಲ್ಲಿ 9 ಮಂದಿ ಬಿಜೆಪಿ ನಾಯಕರ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬೆಂಗಳೂರು (ಫೆ.11): ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ 6 ಗೋವುಗಳನ್ನು ಫ್ರೀಡಂ ಪಾರ್ಕ್‌ಗೆ ತಂದಿದ್ದ ಹಿನ್ನೆಲೆಯಲ್ಲಿ 9 ಮಂದಿ ಬಿಜೆಪಿ ನಾಯಕರ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಹಾಲು ಉತ್ಪಾದಕರಿಗೆ ಬಾಕಿ ಇರುವ ಸಬ್ಸಿಡಿಯನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿರುದ್ಧ ಮಂಗಳವಾರ ಫ್ರೀಡಂ ಪಾರ್ಕ್'ನಲ್ಲಿ  ಪ್ರತಿಭಟನೆ ನಡೆಸಿದರು. ಈ ವೇಳೆ ತಮ್ಮೊಂದಿಗೆ ಗೋವುಗಳನ್ನೂ ಕರೆತಂದಿದ್ದರು.

Latest Videos

ಲೋಕಸಭಾ ಚುನಾವಣೆ ಹಿನ್ನೆಲೆ ಫೇಕ್‌ನ್ಯೂಸ್ ಹೆಚ್ಚಳ ಸಾಧ್ಯತೆ; ವರ್ಲ್ಡ್ ಎಕನಾಮಿಕ್ ಫೋರಂ ಕೊಟ್ಟ ಎಚ್ಚರಿಕೆ ಏನು?

ಪ್ರತಿಭಟನೆ ತಡೆಯಲು ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಿಎಂಟಿಸಿ ಬಸ್ ಗಳಲ್ಲಿ ಹತ್ತಿಸಲು ಮುಂದಾಗಿದ್ದರು. ಈ ವೇಳೆ ಕೆಲ ನಾಯಕರು. ಗೋವುಗಳನ್ನೂ ಕೂಡ ತಮ್ಮೊಂದಿಗೆ ಬಸ್ ಗಳಲ್ಲಿ ಹತ್ತಿಸಲು ಮುಂದಾಗಿದ್ದರು.

ಬಸ್ ಗಳಲ್ಲಿ ಸಣ್ಣ ಬಾಗಿಲುಗಳಿರುವುದರಿಂದ ಅವುಗಳನ್ನು ಬಸ್ ಗಳ ಒಳಗೆ ಹತ್ತಿಸಲು ಸಾಧ್ಯವಾಗುತ್ತಿರಲಿಲ್ಲ. ಗೋವುಗಳ ರಕ್ಷಣೆ ಮಾಡಲು ಹರಸಾಹಸ ಪಡಬೇಕಾಯಿತು. ಪ್ರತಿಭಟನಾ ಸ್ಥಳದಲ್ಲಿ ದೊಡ್ಡ ದೊಡ್ಡ ಸ್ಪೀಕರ್ ಗಳಲ್ಲಿ ಬರುತ್ತಿದ್ದ ಧ್ವನಿಯಿಂದಾಗಿ ಗೋವುಗಳು ಭೀತಿಗೊಳಗಾಗಿ ವಿವಿಧ ದಿಕ್ಕುಗಳಲ್ಲಿ ಓಡಲು ಪ್ರಯತ್ನಿಸುತ್ತಿದ್ದವು ಎಂದು ಪೊಲೀಸರು ಹೇಳಿದ್ದಾರೆ.

'ದೇಶದ್ರೋಹಿಗಳಿಗೆ ಗುಂಡಿಕ್ಕಿ ಕೊಲ್ಲಿ' ಹೇಳಿಕೆಗೆ ದಾವಣಗೆರೆ ಪೊಲೀಸರು ನೋಟಿಸ್; ಈಶ್ವರಪ್ಪ ಬೆನ್ನಿಗೆ ನಿಂತ ಬಿಎಸ್‌ವೈ

ಈ ಹಿನ್ನೆಲೆಯಲ್ಲಿ ಪ್ರತಿಭಟನೆ ವೇಳೆ ಗೋವುಗಳಿಗೆ ಹಿಂಸೆ ನೀಡಿದವರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಶಾಂತ್ ಅವರು ದೂರು ದಾಖಲಿಸಿದ್ದಾರೆ.

ಪಿ ರಾಜೀವ್, ಪಾಟೀಲ್ ನಡಹಳ್ಳಿ, ಹರೀಶ್, ಸಪ್ತಗಿರಿಗೌಡ ಸೇರಿದಂತೆ ಐವರ ವಿರುದ್ಧ ದೂರು ದಾಖಲಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದರೂ, ಪ್ರತಿಭಟನೆಗೆ ಪ್ರಾಣಿಗಳನ್ನು ಕರೆತರುವುದು ಕಾನೂನುಬಾಹಿರವಾಗಿದೆ. ಆರು ಹಸುಗಳನ್ನು ಪ್ರತಿಭಟನಾಕಾರರು ಅಮಾನವೀಯವಾಗಿ ನಡೆಸಿಕೊಂಡರು. ಈ ಜಾನುವಾರುಗಳ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ದಂಡದ ರೂಪದಲ್ಲಿ ಶಿಕ್ಷೆಯಾಗಿದ್ದರೂ, ಇನ್ನು ಮುಂದೆ ಯಾವುದೇ ಪ್ರತಿಭಟನೆಗೆ ಪ್ರಾಣಿಗಳನ್ನು ಕರೆತರದಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

click me!