ಕಾಂಗ್ರೆಸ್ ಹೈಕಮಾಂಡ್‌ಗೆ ಗುಲಾಮನಲ್ಲ, ನಾನು ವಿಧೇಯನಾಗಿದ್ದೇನೆ ಅಷ್ಟೇ: ಸಚಿವ ಕೆ.ಎನ್. ರಾಜಣ್ಣ

By Sathish Kumar KH  |  First Published Feb 11, 2024, 12:30 PM IST

ಕಾಂಗ್ರೆಸ್‌ ಹೈಕಮಾಂಡ್‌ಗೆ ನಾನು ವಿಧೇಯಕ ಮತ್ತು ಪ್ರಾಣಿಕನಾಗಿದ್ದೇನೆ. ಆದರೆ, ಯಾವುದೇ ಕಾರಣಕ್ಕೂ ನಾನು ಗುಲಾಮನಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.


ಹಾಸನ (ಫೆ.11): ರಾಜ್ಯದಲ್ಲಿ ನನ್ನ ನಡವಳಿಕೆ ಮತ್ತು ಮಾತುಗಳನ್ನು ಜನರು ಮೆಚ್ಚಬೇಕು ಅಷ್ಟೇ. ಯಾರು ಮುಖಂಡರು ಮೆಚ್ಚಿಸುವ ನಡವಳಿಕೆ ನನಗೆ ಬೇಕಿಲ್ಲ. ನಾನು ಯಾರಿಗೆ ಹೆದರಬೇಕು ಅವರಿಗೆ ಹೆದರುತ್ತೇನೆ. ನಾನು ಹೈಕಮಾಂಡ್‌ಗೆ ಲಾಯಲ್ ಮತ್ತು ಒಬಿಡಿಯಂಟ್ ಆಗಿದ್ದೀನಿ. ಐ ಆ್ಯಮ್ ನಾಟ್‌ ದಿ ಸ್ಲೇವ್ (ನಾನು ಗುಲಾಮನಲ್ಲ) ಎಂದು ಹೇಳಿದ್ದಾರೆ.

ಹಾಸನ ಜಿಲ್ಲೆಯ ಬೇಲೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವು ಕಾಂಗ್ರೆಸ್‌ ನಾಯಕರೇ ಸಚಿವ ಕೆ.ಎನ್.ರಾಜಣ್ಣ ಕೆಪಿಸಿಸಿ ಅಧ್ಯಕ್ಷರಂತೆ ಆಡುತ್ತಿದ್ದಾರೆ ಎಂದು ಹೇಳಿದವರಿಗೆ ತಿರುಗೇಟು ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಂತಲ್ಲ, ಅವರ ಅಪ್ಪನ ರೀತಿ, ಅದಕ್ಕಿಂದ ಮೇಲೆ ಯಾರಾದರೂ ಅದಕ್ಕೂ ಅಪ್ಪನೇ. ನನ್ನ ನಡವಳಿಕೆ ಜನರು ಮೆಚ್ಚಬೇಕು ಅಷ್ಟೇ, ಯಾರು ಮುಖಂಡರು ಮೆಚ್ಚಿಸುವ ನಡವಳಿಕೆ ನನಗೆ ಬೇಕಿಲ್ಲ ಎಂದು ಸ್ವಪಕ್ಷೀಯ ನಾಯಕರಿಗೇ ತಿರುಗೇಟು ನೀಡಿದ್ದಾರೆ.

Tap to resize

Latest Videos

ಅಮಿತ್ ಶಾ ರಾಜ್ಯಕ್ಕೆ ಆಗಮನ ವೇಳೆ ವಿಮಾನ ನಿಲ್ದಾಣದಲ್ಲಿ ಕಿತ್ತಾಡಿಕೊಂಡ ಪ್ರತಾಪ್ ಸಿಂಹ- ಪ್ರೀತಮ್ ಗೌಡ

ಮಾಜಿ ಸಚಿವ ಬಿ.ಶಿವರಾಂ ಅವರು ಹೈಕಮಾಂಡ್‌ಗೆ ಹೆದರವರಿಗೆ ನಾವೇನು ಹೇಳಲು ಆಗುತ್ತೆ ಎಂಬ ವಿಚಾರದ ಬಗ್ಗೆ ಮಾತನಾಡಿ, ಅದು ನನ್ನ ಇಷ್ಟ ನಾನು ಯಾರಿಗೆ ಹೆದರಬೇಕು ಹೆದರುತ್ತೀನಿ. ಐ ಆ್ಯಮ್ ಲಾಯಲ್, ಐ ಆ್ಯಮ್ ಒಬಿಡಿಯೆಂಟ್ ಟು ಹೈಕಮಾಂಡ್‌. (ನಾನು ನಿಯತ್ತಾಗಿದ್ದೇನೆ, ನಾನು ಹೈಕಮಾಂಡ್‌ಗೆ ವಿಧೇಯನಾಗಿದ್ದೇನೆ). ಬಟ್ ನಾಟ್‌ ದಿ ಸ್ಲೇವ್ (ಆದರೆ, ನಾನು ಗುಲಾಮನಲ್ಲ). ಇದನ್ನು ನಾನು ಪದೇ ಪದೇ ಹೇಳಿದ್ದೀನಿ. ನನ್ನ ಬಗ್ಗೆ ಮಾತನಾಡುವವರು ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರದಲ್ಲಿಯೂ ಶೇ.40% ಕಮಿಷನ್ ಪಡೆಯಲಾಗುತ್ತಿದೆ ಎಂದು ಆರೋಪದ ಬಗ್ಗೆ ಮಾತನಾಡಿದ ಸಚಿವ ಕೆ.ಎನ್. ರಾಜಣ್ಣ ಅವರು, ಶೇ.40% ಕಮಿಷನ್ ಬಗ್ಗೆ ಹೇಳಬೇಕು ಅಂದರೆ ಯಾವನ್ ಹತ್ರನಾದರೂ ಅರ್ಧಫೈಸೆ ಲಂಚದ ವಿಚಾರ ನನ್ನ ಮೇಲೆ ಆರೋಪ ಇದ್ದರೆ ಹೇಳಬೇಕು. ಆರೋಪ ಮಾಡುವವರು ಬಂದು ಯಾವುದಾದರೂ ಒಂದು ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಹೇಳಿ, ಆಗ ನಾನು ರಾಜಕೀಯನೇ ಬಿಟ್ಟು ಬಿಡ್ತಿನಿ. ನಾಲಿಗೆ ಹೇಗೆ ಬೇಕಾದರೂ ತಿರುಗುತ್ತದೆ. ಎಲುಬಿಲ್ಲದ ನಾಲಿಗೆ, ಆಚಾರವಿಲ್ಲದೆ ನಾಲಿಗೆ, ನಿನ್ನ ನೀಚ ಬುದ್ದಿಯ ಬಿಡು ಅಂತಾರೆ. ಹಾಗೆ ಪ್ರಮಾಣಿಕತೆಯಲ್ಲಿ ಯಾರಿಗೇನು ನಾನು ಕಡಿಮೆಯಿಲ್ಲ. ಯಾರೆಲ್ಲಾ ಆರೋಪ ಮಾಡ್ತರಲ್ಲ, ಅವರು ಮೊದಲು ಆತ್ಮಾವಲೋಕನಾ ಮಾಡಿಕೊಳ್ಳಲಿ ಎಂದು ಹೇಳಿದರು.

ಇನ್ನು ರಾಜ್ಯದಲ್ಲಿ ಲೋಕಸಭಾ ಚುನಾವಣೆ  ಸಮಯದಲ್ಲಿ ಕೆಲ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ವಿಚಾರದ ಬಗ್ಗೆ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಹೋಗೋರಿಲ್ಲ ಎಂದು ನಾನು ಹೇಳುವುದಿಲ್ಲ. ಬೇರೆ ಪಕ್ಷದಿಂದ ಬರುವವರು ಇಲ್ಲ ಎಂದು ಹೇಳಲ್ಲ. ರಾಜಕೀಯ ದೃಢೀಕರಣ ಅವರ ರಾಜಕೀಯ ಭವಿಷ್ಯದ ಆಧಾರದಲ್ಲಿ ಇರುತ್ತದೆ. ಇದು ಸರ್ವೆ ಸಾಮಾನ್ಯ. ಈಗಲೇ ಅವರು ಬರುತ್ತಾರೆ ಇವರು ಬರುತ್ತಾರೆ ಎನ್ನಲು ಆಗಲ್ಲ ಎಂದರು.

ಗೃಹಜ್ಯೋತಿ ಯೋಜನೆಯಡಿ ಆರಂಭದಲ್ಲಿ 300 ಯೂನಿಟ್‌ ಉಚಿತಕ್ಕೆ ಮುಂದಾಗಿದ್ದೆವು: ಡಿಕೆಶಿ

ರಾಜ್ಯದಲ್ಲಿ ಗುತ್ತಿಗೆದಾರರ ಸಂಘಟದ ಅಧ್ಯಕ್ಷ ಡಿ.ಕೆಂಪಣ್ಣ ಕಮಿಷನ್ ಆರೋಪ ಮಾಡಿದ್ದಾರೆ. ಆದರೆ,  ಯಾರು ಕಮಿಷನ್ ಕೇಳುತ್ತಾ ಇದ್ದಾಂತಾ ದೂರು ಕೊಡಬೇಕು ಅಲ್ವಾ? ಯಾವ ಅದಿಕಾರಿ ಎಷ್ಟು ಕೇಳುತ್ತಾರೆ? ಎಂದು ಹೇಳಬೇಕಲ್ಲ. ಕೆಂಪಣ್ಣ ಬಗ್ಗೆ ಗೌರವ ಇದೆ ಸತ್ಯ ಹೇಳ್ತಾರೆ ಅಂತಾ ನಾನು ನಂಬಿಕೊಳ್ಳುತ್ತೇನೆ. ಆದರೆ ನಿರ್ದಿಷ್ಟವಾಗಿ ಹೇಳಬೇಕು. ಮೂರು ಲಕ್ಷಕ್ಕೂ ಅಧಿಕ ಅಧಿಕಾರಿಗಳಿದ್ದಾರೆ. ಯಾವ ಅಧಿಕಾರಿ ಯಾರ ಪರವಾಗಿ ಎಷ್ಟು ಕೇಳುತ್ತಾನೆ ಅಂತ ಹೇಳಬೇಕು ಎಂದು ಹೇಳಿದರು.

click me!