ಪರಿಸರದ ರಕ್ಷಣೆ, ಭವಿಷ್ಯಕ್ಕಾಗಿ ಹಸಿರು ಇಂಧನ ಬಳಸಿ: ಸಚಿವ ನಿತಿನ್ ಗಡ್ಕರಿ

By Kannadaprabha News  |  First Published Aug 30, 2024, 12:35 PM IST

ಪರಿಸರ ಸಂರಕ್ಷಣೆ ಹಾಗೂ ಭವಿಷ್ಯ ದೃಷ್ಟಿಯಿಂದಾಗಿ ಹಸಿರು ಇಂಧನ ಬಳಕೆಗೆ ಒತ್ತು ನೀಡಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕರೆ ನೀಡಿದರು. 
 


ಬೆಂಗಳೂರು (ಆ.30): ಪರಿಸರ ಸಂರಕ್ಷಣೆ ಹಾಗೂ ಭವಿಷ್ಯ ದೃಷ್ಟಿಯಿಂದಾಗಿ ಹಸಿರು ಇಂಧನ ಬಳಕೆಗೆ ಒತ್ತು ನೀಡಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕರೆ ನೀಡಿದರು. ಭಾರತ ಬಸ್ ಮತ್ತು ಕಾರು ನಿರ್ವಾಹಕರ ಒಕ್ಕೂಟ (ಬಿಒಸಿಐ)ದಿಂದ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿರುವ 3 ದಿನಗಳ ಭಾರತದ ಬಹುಮಾದರಿ ಸಾರಿಗೆ ಪ್ರದರ್ಶನ ಪ್ರವಾಸ್ 4.0ಗೆ ವರ್ಚುವಲ್ ಮೂಲಕ ಚಾಲನೆ ನೀಡಿ ಮಾತನಾಡಿದರು. ಉತ್ತಮ ಪರಿಸರ ನಿರ್ಮಾಣ ಹಾಗೂ ಭದ್ರ ಭವಿಷ್ಯಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳಿಂದ ಚಲಿಸುವ ವಾಹನಗಳಿಗಿಂತ ಹಸಿರು ಇಂಧನದ ಮೂಲಕ ಚಲಿಸುವ ವಾಹನಗಳತ್ತ ಜನರು ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. 

ಪ್ರಮುಖವಾಗಿ ಎಲೆಕ್ನಿಕ್, ಎಥೆನಾಲ್, ಸಿಎನ್‌ಜಿ ಮೂಲಕ ಸಂಚರಿಸುವ ವಾಹನಗಳ ಬಳಕೆ ಹೆಚ್ಚಿಸಬೇಕಿದೆ. ಅಲ್ಲದೆ, ಭವಿಷ್ಯದಲ್ಲಿ ಅಂತಹ ವಾಹನಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಅದಕ್ಕಾಗಿಯೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿಗಳ ಎರಡೂ ಬದಿಯಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು, ಕೆಲವೆಡೆ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಸರ್ಕಾರಿ ವಾಹನಗಳ ಪಾಲು ಶೇ. 8ರಷ್ಟಿದ್ದರೆ, ಶೇ. 92ರಷ್ಟು ಖಾಸಗಿ ವಾಹನಗಳು ಸಾರ್ವಜನಿಕರಿಗೆ ಸಾರಿಗೆ ಸೇವೆ ನೀಡುತ್ತಿವೆ. 

Latest Videos

undefined

ಅಲ್ಲದೆ, ಸಾರಿಗೆ ಕ್ಷೇತ್ರವು ದೇಶದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಸರ್ಕಾರಕ್ಕೆ ಆದಾಯ ತರುವ ಪ್ರಮುಖ ಕ್ಷೇತ್ರವಾಗಿದೆ. ರಾಜ್ಯ ಸಾರಿಗೆ ವಲಯದ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಅವುಗಳನ್ನು ಬಗೆಹರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಅಲ್ಲದೆ, ಸಾರಿಗೆ ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚಿಸಲು ಶೀಘ್ರದಲ್ಲಿ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಉತ್ತರಪ್ರದೇಶ ಸಾರಿಗೆ ಸಚಿವ ದಯಾಶಂಕ‌ ಸಿಂಗ್, ಅರುಣಾಚಲ ಪ್ರದೇಶ ಸಾರಿಗೆ ಸಚಿವ ಒಜಿಂಗ್ ಟಸಿಂಗ್, ಸಾರಿಗೆ ಕ್ಷೇತ್ರದ ಪ್ರಮುಖರಾದ ಷಣ್ಮುಗಪ್ಪ, ಪ್ರಸನ್ನ, ರಾಧಾಕೃಷ್ಣ ಹೊಳ್ಳ ಇತರರಿದ್ದರು.

ಕೋರ್ಟ್ ಕಲಾಪ ವಿಡಿಯೋಗಳು ವೈರಲ್: ಲಕ್ಷಾಂತರ ಜನರಿಂದ ಯೂಟ್ಯೂಬ್‌ನಲ್ಲಿ ವೀಕ್ಷಣೆ

ಸಮಾವೇಶದಲ್ಲಿ 100ಕ್ಕೂ ಹೆಚ್ಚಿನ ಪ್ರದರ್ಶಕರು: ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರವಾಸ್ 4.0 ಸಮಾವೇಶ 3 ದಿನಗಳ ಕಾಲ ನಡೆಯಲಿದೆ. ಇದರಲ್ಲಿ 28 ರಾಜ್ಯಗಳ ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಂದ ವಾಹನ ಉತ್ಪಾದನಾ ಸಂಸ್ಥೆ ಮಾಲೀಕರು, ಪೂರೈಕೆದಾರರು ಸೇರಿ ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದ ಸಾವಿರಾರು ಮಂದಿ ಪಾಲ್ಗೊಂಡಿದ್ದಾರೆ. ಅಲ್ಲದೆ, ಸಮಾವೇಶದಲ್ಲಿ 100ಕ್ಕೂ ಹೆಚ್ಚಿನ ಪ್ರದರ್ಶಕರು ಪಾಲ್ಗೊಂಡಿದ್ದು, ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದಾರೆ. ಅದರಲ್ಲಿ ಹೆಚ್ಚಾಗಿ ಎಲೆಕ್ನಿಕ್ ವಾಹನಗಳು ಸೇರಿದಂತೆ ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ಪ್ರದರ್ಶನ ಹೆಚ್ಚಿದೆ.

click me!