ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗದ ವಿಷಯಗಳೇ ಇಲ್ಲ. ಆ ಸಾಲಿಗೆ ಇದೀಗ ಕರ್ನಾಟಕ ಹೈಕೋರ್ಟ್ ಕಲಾಪಗಳ ನೇರ ಪ್ರಸಾರದ (ಲೈವ್ ಸ್ಟೀಮಿಂಗ್) ವಿಡಿಯೋಗಳು ಕೂಡಾ ಸೇರಿಕೊಂಡಿವೆ.
• ವೆಂಕಟೇಶ್ ಕಲಿಸಿ
ಬೆಂಗಳೂರು (ಆ.30): ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗದ ವಿಷಯಗಳೇ ಇಲ್ಲ. ಆ ಸಾಲಿಗೆ ಇದೀಗ ಕರ್ನಾಟಕ ಹೈಕೋರ್ಟ್ ಕಲಾಪಗಳ ನೇರ ಪ್ರಸಾರದ (ಲೈವ್ ಸ್ಟೀಮಿಂಗ್) ವಿಡಿಯೋಗಳು ಕೂಡಾ ಸೇರಿಕೊಂಡಿವೆ. ಹೈಕೋರ್ಟ್ ವಿಡಿಯೋಗಳು ಯೂಟ್ಯೂಬ್‌ನಲ್ಲಿ ವೈರಲ್ ಆಗುತ್ತಿದ್ದು, ಲಕ್ಷಾಂತರ ಜನರ ವೀಕ್ಷಣೆ ಪಡೆಯುತ್ತಾ ಹೊರ ರಾಜ್ಯಗಳಲ್ಲಿಯೂ ಸದ್ದು ಮಾಡುತ್ತಿವೆ. ಕೆಲವೇ ವರ್ಷಗಳ ಹಿಂದೆ ವಕೀಲರು, ವ್ಯಾಜ್ಯದಾರರಿಗೆ ಮಾತ್ರ ಕೋರ್ಟ್ ಕಲಾಪಗಳು ರೀತಿ-ರಿವಾಜು ತಿಳಿಯುತ್ತಿತ್ತು. ಕೋವಿಡ್-19 ಹಿನ್ನೆಲೆಯಲ್ಲಿ ಕೋರ್ಟ್ ಕಲಾಪಗಳ ಯೂಟ್ಯೂಬ್ ನೇರ ಪ್ರಸಾರ ಶುರುವಾದವು. ಇದರಿಂದ ಕೋರ್ಟ್ ಕಲಾಪಗಳು ಜನರ ಬಳಿಗೆ ಬಂತು. ಇದರಿಂದ ಯೂಟ್ಯೂಬ್‌ನಲ್ಲಿ ಕೋರ್ಟ್ ಕಲಾಪಗಳ ವೀಕ್ಷಣೆಯೂ ದಿನೇ ದಿನೇ ಹೆಚ್ಚಾಯಿತು. ಜನರಲ್ಲಿ ಕಾನೂನಿನ ಅರಿವು ಬೆಳೆಯಲು ಸಹಕಾರಿಯಾಯಿತು.
ಸುದ್ದಿವಾಹಿನಿಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳು ಕಲಾಪಗಳ ಪ್ರಸಾರ ಮಾಡಲು ಆರಂಭಿಸಿದ ನಂತರ ಕೋರ್ಟ್ ವಿಚಾರಣೆಯ ವಿಡಿಯೋಗಳು ವೈರಲ್ ಆಗತೊಡಗಿವೆ. ಕರ್ನಾಟಕ ಹೈಕೋರ್ಟ್ ಕಲಾಪಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ ಮಾಡುತ್ತಿದೆ. ಹೀಗೆ ಪ್ರಸಾರವಾದ ಕಲಾಪಗಳಲ್ಲಿ ಅತ್ಯಂತ ವಿಶೇಷ ಹಾಗೂ ಮಹತ್ವದ ಪ್ರಕರಣಗಳ ವಿಚಾರಣೆಯ ವಿಡಿಯೋಗಳನ್ನು ಕನ್ನಡ ಮಾತ್ರವಲ್ಲದೆ, ಹಿಂದಿ, ಇಂಗ್ಲೀಷ್, ತಮಿಳು ಮತ್ತು ತೆಲುಗಿನ ಸುದ್ದಿವಾಹಿನಿ ಮತ್ತು ಯೂಟ್ಯೂಬ್ ಚಾನಲ್‌ಗಳು ಪ್ರಸಾರ ಮಾಡುತ್ತಿವೆ. ಕನಿಷ್ಠ 3 ನಿಮಿಷದಿಂದ 20 ನಿಮಿಷದವರೆಗೆ ಹೈಕೋರ್ಟ್ ಕಲಾಪದ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಕಲಾಪಗಳನ್ನು ನೋಡಿದ ಸಾರ್ವಜನಿಕರು ಪರ-ವಿರೋಧದ ಚರ್ಚೆ ಮಾಡುತ್ತಾ ಕಾಮೆಂಟ್ ಗಳನ್ನೂ ಹಾಕುತ್ತಿದ್ದಾರೆ.
ಜಪ್ತಿಯಾದ ವಾಹನದ ಸುಪರ್ದಿ ಬಗ್ಗೆ ಇಲ್ಲ ನಿರ್ದಿಷ್ಟ ನಿಯಮ: ಹೈಕೋರ್ಟ್ ಹೇಳಿದ್ದೇನು?
ಯಾವುದು ಜನಪ್ರಿಯ?: ಕೌಟುಂಬಿಕ ವ್ಯಾಜ್ಯಗಳ ವಿಚಾರಣೆ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿವೆ. ಹೈಕೋರ್ಟ್‌ನಲ್ಲಿ ಇತ್ತೀಚೆಗೆ ನಡೆದ ಪತಿಯಿಂದ ಪತ್ನಿ ಮಾಸಿಕ 6.16 ಲಕ್ಷ ರು. ಜೀವನಾಂಶ ಕೋರಿದ ಅರ್ಜಿ ವಿಚಾರಣೆ ಯೂಟ್ಯೂಬ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ವೈರಲ್ ಆಗಿ, ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನೂ ನ್ಯಾ.ಎಂ. ನಾಗಪ್ರಸನ್ನ ಅವರ ಪೀಠದಲ್ಲಿ ನಡೆದ ಮಹಿಳೆಯೊಬ್ಬಳು ಏಳು ಪುರುಷರನ್ನು ಮದುವೆಯಾಗಿ, ಎಲ್ಲರ ಮೇಲೆ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಿಸಿರುವ ಪ್ರಕರಣ, ಪತಿ ಮತ್ತವರ ಕುಟುಂಬದ ವಿರುದ್ಧ ಪತ್ನಿ ಕ್ರೌರ್ಯ ಪ್ರಕರಣ ದಾಖಲಿಸಿ 2 ಕೋಟಿ ಪರಿಹಾರ ಕೋರಿದ, ಪತಿ ಫ್ರೆಂಚ್ ಪ್ರೈಸ್, ಮಾಂಸ ತಿನ್ನಲು ಬಿಡುತ್ತಿಲ್ಲ ಎಂದೇಳಿ ಪತ್ನಿ ದಾಖಲಿಸಿದ ಕ್ರೌರ್ಯ ಪ್ರಕರಣ, ಸೊರಬದ ಎಂಜಿನಿಯರ್,
ಪೊಲೀಸರು ಕಿರುಕುಳದಿಂದ ರಕ್ಷಣೆ ಕೋರಿದ ಪ್ರಕರಣಗಳ ವಿಚಾರಣೆಯೂ ವೈರಲ್ ಆಗಿ, ಲಕ್ಷಾಂತರ ವೀಕ್ಷಣೆ ಪಡೆದಿದೆ. ಎರಡು ವರ್ಷಗಳ ಹಿಂದೆ ಹೈಕೋರ್ಟ್ ನ್ಯಾ| ಎಚ್.ಪಿ. ಸಂದೇಶ ಅವರು, ಎಸಿಬಿಯ ಎಡಿಜಿ ಪಿಯಾಗಿದ್ದ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಆಕ್ರೋಶ ನುಡಿಗಳನ್ನಾಡಿದ ವಿಡಿಯೋ ಇಂದಿಗೂ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್‌ನಲ್ಲೇ ಇದೆ. ಹಿಜಾಬ್ ನಿಷೇಧ ಕುರಿತ ಪ್ರಸಾರಗೊಂಡ ಹೈಕೋರ್ಟ್ ತ್ರಿಸದಸ್ಯ ಪೀಠದ ಕಲಾಪದ ವಿಡಿಯೋ ಯೂಟ್ಯೂಬ್ ನಲ್ಲಿ ಸಾಕಷ್ಟು ವೈರಲ್ ಆಗಿತ್ತು. ಕೋವಿಡ್-19 ನಂತರ ಕರ್ನಾಟಕ ಹೈಕೋರ್ಟ್‌ನಲ್ಲಿ ಕಲಾಪಗಳನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು.2020ರಮೇ 16ರಂದು ಹೈಕೋರ್ಟ್ ಯೂಟ್ಯೂಬ್ ಚಾನೆಲ್ ಆರಂಭವಾಗಿದೆ. ಈ ಚಾನಲ್ ಅನ್ನು 1.28 ಲಕ್ಷಜ ಸಬ್‌ಸ್ಟೈಬ್ ಮಾಡಿಕೊಂಡಿದ್ದಾರೆ.
ಭಾರೀ ವಾಹನಗಳಿಗೂ ಬ್ಯಾಟರಿ ಸ್ವಾಪಿಂಗ್ ತಂತ್ರಜ್ಞಾನ: ವಿಶ್ವದಲ್ಲೇ ಮೊದಲ ಬಾರಿಗೆ ಸನ್ ಮೊಬಿಲಿಟಿ
ಈವರೆಗೂ 1,567 ವಿಡಿಯೋಗಳು ಪ್ರಸಾರವಾಗಿದ್ದು, 11,269, 377 ವ್ಯೂ ಪಡೆದುಕೊಂಡಿವೆ. ಪತಿಯಿಂದ ಪತ್ನಿ ಮಾಸಿಕ 6.16 ಲಕ್ಷ ಜೀವನಾಂಶ ಕೋರಿದ ಅರ್ಜಿ ಹೈಕೋರ್ಟ್ ವಿಚಾರಣೆಯ ವಿಡಿ ಯೋ, ಲಾಚಕ್ರ ಎಂಬ ಯೂಟ್ಯೂಬ್ ಚಾನೆಲ್ ವೊಂದರಲ್ಲೇ 1.9 ಮಿಲಿಯನ್ ವೀಕ್ಷಣೆ ಪಡೆದಿದೆ. ಇದೇ ವಿಡಿಯೋ ಸೋಸ್‌ತ್ ಚಾಲೆನ್‌ನಲ್ಲಿ 33, ಲೈವ್ ಹಿಂದೂಸ್ತಾನ್‌ನಲ್ಲಿ 34, ಲೀಗಲ್‌ಕಾರ್ಟ್‌ನಲ್ಲಿ 12, ಎಚ್ ಡಬ್‌ಲ್ಯೂ ನ್ಯೂಸ್‌ನಲ್ಲಿ 9 ಸಾವಿರ, ತಮಿಳಿನ ರೂಸ್ಟ ನ್ಯೂಸ್‌ನಲ್ಲಿ 20, ಸನ್ ನ್ಯೂಸ್‌ನಲ್ಲಿ 23, ತೆಲುಗಿನ ಎಬಿಎನ್ ನ್ಯೂಸ್‌ನಲ್ಲಿ 205, ಡಯಲ್ ನ್ಯೂಸ್‌ನಲ್ಲಿ 566, ಹಿಂದಿಯ ಎನ್‌ಡಿಟಿವಿಯಲ್ಲಿ 206 ಸಾವಿರ ಜನರಿಂದ ವೀಕಣೆಯಾಗಿದೆ. ಮೂಡಾ ಹಗರಣದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ ಅರ್ಜಿ ವಿಚಾರಣೆ ವಿಡಿಯೋ ಲಕ್ಷಾಂತರ ಜನ ವೀಕ್ಷಿಸಿದ್ದಾರೆ.