ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯೆ ಮೇಲೆ ಪ್ರಾಸಿಕ್ಯೂಷನ್? ಇಂದು ಕ್ಯಾಬಿನೆಟ್‌ ಸಭೆ

Published : May 22, 2025, 07:19 AM IST
ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯೆ ಮೇಲೆ ಪ್ರಾಸಿಕ್ಯೂಷನ್? ಇಂದು ಕ್ಯಾಬಿನೆಟ್‌ ಸಭೆ

ಸಾರಾಂಶ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) 2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ಎಸಗಿದ್ದ ಅಂದಿನ ಕೆಪಿಎಸ್‌ಸಿ ಅಧ್ಯಕ್ಷರು ಹಾಗೂ ಎಂಟು ಮಂದಿ ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್‌ ನಡೆಸುವ ಬಗ್ಗೆ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡುವ ಸಾಧ್ಯತೆಯಿದೆ.   

ಬೆಂಗಳೂರು (ಮೇ.22): ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) 2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ಎಸಗಿದ್ದ ಅಂದಿನ ಕೆಪಿಎಸ್‌ಸಿ ಅಧ್ಯಕ್ಷರು ಹಾಗೂ ಎಂಟು ಮಂದಿ ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್‌ ನಡೆಸುವ ಬಗ್ಗೆ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡುವ ಸಾಧ್ಯತೆಯಿದೆ. ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್​ಸಿ) 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಹುದ್ದೆಗಳ ನೇಮಕಾತಿ ರದ್ದು ಪಡಿಸಿದ್ದ ರಾಜ್ಯ ಸರ್ಕಾರ ಬಳಿಕ ನೇಮಕಾತಿಗೆ ಹಸಿರು ನಿಶಾನೆ ತೋರಿತ್ತು.

ಆದರೆ ತನಿಖೆಯಲ್ಲಿ 2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯಲ್ಲಿ ಅವ್ಯಹಾರ ನಡೆಸಿದ್ದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಅಧ್ಯಕ್ಷರು ಹಾಗೂ ಸದಸ್ಯರ ಮೇಲೆ ಅಭಿಯೋಜನೆ ವಹಿಸುವ ಬಗ್ಗೆ ಚರ್ಚೆ ನಡೆಯಲಿದ್ದು, ಯಾವ ರೀತಿಯ ನಿರ್ಧಾರ ಮಾಡಲಿದ್ದಾರೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಇದೇ ವೇಳೆ ನಿವೃತ್ತ ಐಎಎಸ್‌ ಹಾಗೂ ಬಿಡಿಎ ಆಯುಕ್ತರಾಗಿದ್ದ ಭರತ್‌ ಲಾ ಮೀನಾ ಹಾಗೂ ನಿವೃತ್ತ ಐಪಿಎಸ್‌ ರಾಮಮೂರ್ತಿ ವಿರುದ್ಧದ ಲೋಕಾಯುಕ್ತ ವಿಚಾರಣೆಗೆ ವಹಿಸುವ ಶಿಫಾರಸು ಕೈಬಿಡಲು ತೀರ್ಮಾನಿಸುವ ಸಾಧ್ಯತೆಯಿದೆ. ಇದೇ ವೇಳೆ ಕೋಲಾರ ಜಿಲ್ಲೆಯ ಮಾಲೂರು ಪುರಸಭೆಯನ್ನು ನಗರಸಭೆಯನ್ನಾಗಿ, ಮಂಡ್ಯ ಜಿಲ್ಲೆಯ ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವುದು ಸೇರಿ ವಿವಿಧ ತೀರ್ಮಾನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ರಾಮನಗರ ಮರುನಾಮಕರಣ ಪ್ರಸ್ತಾವನೆ ಮರು ಮಂಡನೆ: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವ ಬಗ್ಗೆ 2024ರ ಜುಲೈನಲ್ಲಿ ಸಚಿವ ಸಂಪುಟ ತೀರ್ಮಾನ ಮಾಡಿತ್ತು. ಆದರೆ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ರಾಜ್ಯ ಸರಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದ ಕೇಂದ್ರ ಗೃಹ ಇಲಾಖೆಯು, ಪ್ರಸ್ತಾವನೆ ಮುಂದುವರಿಸಬೇಡಿ. ಯಥಾಸ್ಥಿತಿ ಕಾಪಾಡಿ ಎಂದಿತ್ತು. ಇದೀಗ ಇದೇ ವಿಷಯವನ್ನು ಮತ್ತೆ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುತ್ತಿದ್ದು, ಶತಾಯಗತಾಯ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಸರ್ಕಾರ ತೀರ್ಮಾನಿಸಿದೆ. 

ಕ್ಯಾಬ್‌ ಬುಕಿಂಗ್‌ ಮೊದಲೇ ಅಡ್ವಾನ್ಸ್‌ ಟಿಪ್ಸ್‌: ಉಬರ್‌ ಕಂಪನಿಗೆ ನೋಟಿಸ್‌

ಹೀಗಾಗಿ ಮತ್ತೊಮ್ಮೆ ಸಂಪುಟದಲ್ಲಿ ವಿಷಯ ಮಂಡನೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ರಾಮನಗರ ಜಿಲ್ಲೆಯ ಕನಕಪುರ ನಗರ ವ್ಯಾಪ್ತಿಯಲ್ಲಿನ ಅರ್ಕಾವತಿ ನದಿ ದಂಡೆ ಅಭಿವೃದ್ದಿ ಯೋಜನೆಯಡಿ ಅರ್ಕಾವತಿ ಜಲಾಶಯ ಯೋಜನೆ ಕಾಮಗಾರಿಯನ್ನು 120 ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳುವ ಬಗ್ಗೆ ಅನುಮೋದನೆ ನೀಡಲಾಗುವುದು. ಬೆಂಗಳೂರು ಮೆಟ್ರೋ ರೈಲು ಹಂತ-2 ಯೋಜನೆಯ 40,425 ಕೋಟಿ ರು.ಗಳ ಪರಿಷ್ಕೃತ ಯೋಜನೆಗೆ ಅನುಮೋದನೆ ಪಡೆಯಲಾಗುವುದು ಎಂದು ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪವರ್‌ ಪಾಯಿಂಟ್‌: ದ್ವೇಷ ಭಾಷಣ ಮಸೂದೆಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ
'ಲಕ್ಷ್ಮಿ ಹೆಬ್ಬಾಳ್ಕರ್ ಅವರೇ, ಫೆಬ್ರವರಿ-ಮಾರ್ಚ್ ಹಣ ಯಾವಾಗ ಬರುತ್ತೆ? ಸದನಕ್ಕೆ ತಪ್ಪು ಮಾಹಿತಿ ವಿರುದ್ಧ ರೊಚ್ಚಿಗೆದ್ದ ಗೃಹಲಕ್ಷ್ಮಿಯರು!