
ಬೆಂಗಳೂರು (ಫೆ.24): ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆಯಾಗಿ 50 ದಿನ ಥಿಯೇಟರ್ ನಲ್ಲಿ ಪ್ರದರ್ಶನ ಕಂಡು ಯಶಸ್ಸು ಗಳಿಸಿರುವ ‘ಕಾಟೇರ’ (Kaatera) ಸಿನಿಮಾದ ಕತೆ ಮತ್ತು ಟೈಟಲ್ ತಾವು ಮಾಡಿಸಿದ್ದು ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹೇಳಿಕೆಗೆ ನಟ ದರ್ಶನ್ ನೀಡಿದ್ದ 'ಅಯ್ಯೋ ತಗಡೇ..' ತಿರುಗೇಟಿನಿಂದ ಹುಟ್ಟಿಕೊಂಡಿರೋ ವಿವಾದ ಇಲ್ಲಿಗೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹೋದಲ್ಲಿ ಬಂದಲ್ಲಿ ಇಬ್ಬರೂ ತಿರುಗೇಟು ನೀಡುತ್ತಲೇ ಇದ್ದಾರೆ.
ಇದೀಗ ಮತ್ತೆ ನಿರ್ಮಾಪಕ ಉಮಾಪತಿ ದರ್ಶನ ಹೇಳಿಕೆ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ ಭೇಟಿಗೆ ಆಗಮಿಸಿದ್ದ ವೇಳೆ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಉಮಾಪತಿ, ಕ್ಷೇತ್ರದ ವಿಚಾರವಾಗಿ ಚರ್ಚಿಸಲು ಡಿಸಿಎಂ ಭೇಟಿಗೆ ಆಗಮಿಸಿದ್ದೇನೆ. ಕ್ಷೇತ್ರದಲ್ಲಿ ನೀರಿನ ಸಮಸ್ಯೆ, ರಸ್ತೆ ಬಗ್ಗೆ ಚರ್ಚೆಗಾಗಿ ಆಗಮಿಸಿದ್ದೆ ಎಂದಿದ್ದಾರೆ. ಇದೇ ವೇಳೆ 'ರಾಜಕೀಯ ಚರ್ಚೆಗೆ ಬಂದಿದ್ದೀರಾ?' ಎಂಬ ಪ್ರಶ್ನೆಗೆ 'ತಮಗೆಲ್ಲ ಗೊತ್ತಿದೆ ಸಾಹೇಬರು ಬುದ್ಧಿ ಹೇಳೋದಾದರೆ ಹೇಳ್ತಾರೆ ಅಷ್ಟೇ ಎಂದರು.
ಅಯ್ಯೋ ತಗಡೇ...ಯಾಕೆ ಬಂದು ಬಂದು ಗುಮ್ಮಿಸಿಕೊಳ್ಳುತ್ತೀಯಾ?; ಉಮಾಪತಿ ಶ್ರೀನಿವಾಸ್‌ಗೆ ಟಾಂಗ್ ಕೊಟ್ಟ ದರ್ಶನ್
ನಟ ದರ್ಶನ್ ಆ ರೀತಿ ಪದಬಳಕೆ ಮಾಡಿದ್ದು ಸರಿನಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಮಾಪತಿ, ನೋಡಿ ಸರ್, ಅವರೆಲ್ಲ ಹೊಟ್ಟೆ ತುಂಬಿದವರು, ನಾವು ಹಸಿದವರು. ಸಮಸ್ಯೆಗಳು ಎಲ್ಲಕಡೆ ಇರುತ್ತವೆ. ಆದರೆ ಅದನ್ನ ಹ್ಯಾಂಡಲ್ ಮಾಡುವ ರೀತಿ ಗೊತ್ತಿರಬೇಕು. ಸಮಾಜದಲ್ಲಿ ತೂಕವಿರುವ ವ್ಯಕ್ತಿ ಘನತೆಯಿಂದ ನಡೆದುಕೊಳ್ಳಬೇಕು. ನಾನು ಹಿಂದೆನೇ ಹೇಳಿದ್ದೇನೆ, ದೇಹ ತೂಕವಿದ್ದರೆ ಸಾಲದು, ಮಾತಿನಲ್ಲಿ ತೂಕವಿರಬೇಕು ಎಂದು. ನಾ ತಪ್ಪು ಮಾಡುದ್ರು ತಪ್ಪೇ, ಯಾರೇ ತಪ್ಪು ಮಾಡಿದ್ರು ಅದು ತಪ್ಪೇ. ನಾವೆಲ್ಲ ಸಿನಿಮಾ ಮುಖಾಂತರ ಮೆಸೆಜ್ ಕೊಡಬೇಕು.ಈ ಕಂಟ್ರಾವರ್ಸಿಯಿಂದ ಮೆಸೆಜ್ ಕೊಡುವಂತದ್ದೇನೂ ಇಲ್ಲ ಎಂದರು.
ಯಾರಿಗೆ ಏನು ಧಕ್ಕಬೇಕೋ ಧಕ್ಕುತ್ತೆ, ಕಾಟೇರ ಟೈಟಲ್ ಆಂಡ್ ಕಥೆ ಬರೆಸಿದ್ದು ನಾನೇ: ಉಮಾಪತಿ ಶ್ರೀನಿವಾಸ್
ಇನ್ನು ದರ್ಶನ್ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸಿರುವ ವಿಚಾರ ಸಂಬಂಧ ಮಾತನಾಡಿದ ಉಮಾಪತಿ, ಅದನ್ನ ನಾನೂ ನೋಡಿದೆ. ಮಹಿಳೆಯರಿಗೆ ತೊಂದರೆ ಆಗುವ ರೀತಿಯಲ್ಲಿ ಏನೋ ಮಾತನಾಡಿದ್ದಾರಂತೆ, ಹೀಗಾಗಿ ಪ್ರತಿಭಟನೆ ಮಾಡಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ