ಪಿಎಫ್‌ಐ, ಎಸ್‌ಡಿಪಿಐ ನಿಷೇಧ ಕೋರಿ ಹಿಂದೂಗಳ ಪ್ರತಿಭಟನೆ

Published : Aug 02, 2022, 03:00 AM IST
ಪಿಎಫ್‌ಐ, ಎಸ್‌ಡಿಪಿಐ ನಿಷೇಧ ಕೋರಿ ಹಿಂದೂಗಳ ಪ್ರತಿಭಟನೆ

ಸಾರಾಂಶ

ಸ​ಮಾಜ ವಿ​ರೋಧಿ, ದೇಶ ವಿರೋಧಿ ಚ​ಟು​ವ​ಟಿ​ಕೆ​ಗ​ಳಲ್ಲಿ ನಿ​ರ​ತ​ವಾ​ಗಿ​ರುವ ಪಿಎಫ್‌ಐ ಹಾಗೂ ಎಸ್‌ಡಿ​ಪಿಐ ಸಂಘ​ಟ​ನೆ​ಗ​ಳನ್ನು ನಿ​ಷೇ​ಧಿಸು​ವಂತೆ ಒ​ತ್ತಾ​ಯಿಸಿ ಮಂಡ್ಯದಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯ​ಕರ್ತರು, ಚಿಕ್ಕಮಗಳೂರಲ್ಲಿ ಎಬಿವಿಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. 

ಮಂಡ್ಯ/ ಚಿಕ್ಕಮಗಳೂರು (ಆ.02): ಸ​ಮಾಜ ವಿ​ರೋಧಿ, ದೇಶ ವಿರೋಧಿ ಚ​ಟು​ವ​ಟಿ​ಕೆ​ಗ​ಳಲ್ಲಿ ನಿ​ರ​ತ​ವಾ​ಗಿ​ರುವ ಪಿಎಫ್‌ಐ ಹಾಗೂ ಎಸ್‌ಡಿ​ಪಿಐ ಸಂಘ​ಟ​ನೆ​ಗ​ಳನ್ನು ನಿ​ಷೇ​ಧಿಸು​ವಂತೆ ಒ​ತ್ತಾ​ಯಿಸಿ ಮಂಡ್ಯದಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯ​ಕರ್ತರು, ಚಿಕ್ಕಮಗಳೂರಲ್ಲಿ ಎಬಿವಿಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಮಂಡ್ಯದಲ್ಲಿ ಜಿ​ಲ್ಲಾ​ಧಿ​ಕಾರಿ ಕ​ಚೇ​ರಿಗೆ ತೆ​ರಳಿ ಕೆಲಕಾಲ ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮು​ಖ್ಯ​ಮಂತ್ರಿ​ಗಳು, ರಾ​ಜ್ಯ​ಪಾ​ಲ​ರಿಗೆ ಮ​ನವಿ ಸ​ಲ್ಲಿ​ಸಿದರು. 

ಸ​ಮಾ​ಜ​ದ್ರೋಹಿ ವಿ​ಚಾ​ರ​ಗ​ಳನ್ನು ಸಾ​ಮಾ​ಜಿಕ ಜಾ​ಲ​ತಾ​ಣ​ಗ​ಳಲ್ಲಿ ಹ​ರಿ​ಬಿ​ಟ್ಟು ಜ​ನಾಂಗೀಯ ದ್ವೇಷ ಹ​ರ​ಡು​ತ್ತಿರುವ ಸಂಘಟನೆಗಳಿಂದ ದೇ​ಶದ ಏ​ಕತೆ ಮತ್ತು ಅ​ಖಂಡ​ತೆಗೆ ಧಕ್ಕೆ ಉಂಟಾಗುತ್ತಿದೆ.  ಅ​ಕ್ರಮ ಗೋ​ ಸಾ​ಗಾಣಿಕೆಗೆ ಕು​ಮ್ಮಕ್ಕು, ಹಿಂದೂ ದೇ​ವ​ರು​ಗಳ ಬಗ್ಗೆ ಅ​ವ​ಹೇ​ಳ​ನ​ಕಾ​ರಿ​ಯಾಗಿ ಟೀ​ಕಿ​ಸು​ವುದು ಸೇ​ರಿ​ದಂತೆ ಇ​ತರೆ ಚ​ಟು​ವ​ಟಿ​ಕೆ​ಗ​ಳಲ್ಲಿ ಈ ಸಂಘ​ಟ​ನೆ​ಗಳು ಸ​ಕ್ರಿಯವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಚಿಕ್ಕಮಗಳೂರಿನ ಆಜಾದ್‌ ಪಾರ್ಕ್ನಲ್ಲಿ ಸಮಾವೇಶಗೊಂಡ ಎಬಿವಿಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

Uttara Kannada: ಮಳೆಗಾಗಿ ಹೆಣ್ಣು - ಹೆಣ್ಣಿನ ನಡುವೆ ದಾದುಮ್ಮನ‌‌ ಮದುವೆ

ಕರಾವಳಿಯಲ್ಲಿ ಪ್ರವೀಣ್‌ ನೆಟ್ಯಾರು ಹತ್ಯೆ ನಡೆದಿದ್ದು, ರಾಜ್ಯದ ಜನತೆ ಅಭದ್ರತೆಯಲ್ಲಿ ಜೀವನ ನಡೆಸುತ್ತಿದ್ದಾರೆ ಎನ್ನುವುದಕ್ಕೆ ಸ್ಪಷ್ಟನಿದರ್ಶನವಾಗಿದೆ. ರಾಜ್ಯದಲ್ಲಿ ಹಿಂದೂ ಸಂಘಟನೆ ಮತ್ತು ಸಿದ್ಧಾಂತದ ಪರವಾಗಿ ಹೋರಾಟ ಮಾಡುವವರನ್ನು ಗುರಿಯಾಗಿಸಿಕೊಂಡು ಕೊಲೆ ನಡೆಸುತ್ತಿರುವುದು ಖಂಡನೀಯ. ಹತ್ಯೆ ಹಿಂದೆ ಪಿಎಫ್‌ಐ, ಸಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ಹೆಸರು ತಳಕು ಹಾಕಿಕೊಳ್ಳುತ್ತಿದೆ. ಸರ್ಕಾರ ಕೂಡಲೇ ಈ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.

ಎಬಿ​ವಿ​ಪಿ ಪ್ರತಿಭಟನೆ: ರಾಜ್ಯದಲ್ಲಿ ಕೊಲೆ, ಕೋಮು ಸಂಘರ್ಷಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದರ ಹಿಂದಿರುವ ಪಿಎಫ್‌ಐ, ಸಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಆಜಾದ್‌ ಪಾರ್ಕ್ನಲ್ಲಿ ಸಮಾವೇಶಗೊಂಡ ಎಬಿವಿಪಿ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕರಾವಳಿಯಲ್ಲಿ ಪ್ರವೀಣ್‌ ನೆಟ್ಯಾರು ಹತ್ಯೆ ನಡೆದಿದ್ದು, ರಾಜ್ಯದ ಜನತೆಗೆ ಅಭದ್ರತೆಯಲ್ಲಿ ಜೀವನ ನಡೆಸುತ್ತಿದ್ದಾರೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. 

ರಾಜ್ಯದಲ್ಲಿ ಹಿಂದೂ ಸಂಘಟನೆ ಮತ್ತು ಸಿದ್ಧಾಂತದ ಪರವಾಗಿ ಹೋರಾಟ ಮಾಡುವವರನ್ನು ಗುರಿಯಾಗಿಸಿಕೊಂಡು ಕೊಲೆ ನಡೆಸುತ್ತಿರುವುದು ಖಂಡನೀಯ ಎಂದರು. ರಾಜ್ಯದಲ್ಲಿ ಪದೇಪದೇ ಕೊಲೆಗಳು ನಡೆಯುತ್ತಿವೆ. ಇದನ್ನು ಗಮನಿಸಿದರೆ, ಗೃಹ ಇಲಾಖೆ ವೈಫಲ್ಯತೆ ಎದ್ದುಕಾಣುತ್ತಿದೆ. ಹತ್ಯೆ ಕೃತ್ಯದಲ್ಲಿ ಭಾಗಿ ಆಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು. ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು. 

ಗದ್ದೆಗಿಳಿದು ನಾಟಿ ಮಾಡಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್

ರಾಜ್ಯದಲ್ಲಿ ಒಂದು ಸಿದ್ಧಾಂತ ಮತ್ತು ರಾಷ್ಟ್ರೀಯತೆ ವಿಚಾರಧಾರೆಗಳ ಪರವಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರ ಹತ್ಯೆ ಹಿಂದಿರುವ ಪಿಎಫ್‌ಐ, ಸಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ಹೆಸರು ತಳಕು ಹಾಕಿಕೊಳ್ಳುತ್ತಿದೆ. ಸರ್ಕಾರ ಕೂಡಲೇ ಈ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ನಮ್ಮನ್ನೇಕೆ ವೈರಿಗಳಂತೆ ನೋಡುತ್ತೀರಿ? ನಾವು ಸಹೋದ್ಯೋಗಿಗಳು: ಡಿಸಿಎಂ ಡಿಕೆ ಶಿವಕುಮಾರ್
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ