
ಬೆಂಗಳೂರು (ಮೇ.29): ಬೆಳ್ಳಂದೂರು(Bellanduru) ಹೊರ ವರ್ತುಲ ರಸ್ತೆಯಿಂದ ಎಚ್ಎಎಲ್ ವಿಮಾನ ನಿಲ್ದಾಣ ರಸ್ತೆ(HAL Airport Road())ಗೆ ಸಂಪರ್ಕಿಸುವ ಖಾಸಗಿ ಸಂಸ್ಥೆ ನಿರ್ಮಿತ 1.5 ಕಿ.ಮೀ ಉದ್ದದ ಫ್ಲೈಓವರ್(Flyover) ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಶೀಘ್ರದಲ್ಲೇ ಮುಕ್ತವಾಗಲಿದೆ.
ಹೊರ ವರ್ತುಲ ರಸ್ತೆಯಲ್ಲಿರುವ ಪ್ರೆಸ್ಟೀಜ್ ಟೆಕ್‌ಪಾರ್ಕ್(Prestige Techpark) ಮೂಲಕ ಹಾದು ಹೋಗುವ ಈ ಫ್ಲೈಓವರ್ ವಿವಿಧ ಟೆಕ್‌ಪಾರ್ಕ್‌ಗಳ ವಾಹನಗಳು, ಉದ್ಯೋಗಿಗಳು ಓಡಾಟಕ್ಕೆ ಅನುಕೂಲ ಕಲ್ಪಿಸುತ್ತದೆ. ಅನುಮೋದನೆ ಪಡೆದ 1 ವರ್ಷದಲ್ಲೇ ನಿರ್ಮಾಣ ಕೆಲಸ ಪೂರ್ಣಗೊಳಿಸಲಾಗಿದೆ. ಟೆಕ್‌ಪಾರ್ಕ್‌ನ ಉದ್ಯೋಗಿಗಳ ಸಂಚಾರಕ್ಕೆ ಸೋಮವಾರದಿಂದ ಮುಕ್ತಗೊಳಿಸಲಾಗಿದೆ. ಸಣ್ಣ ಪುಟ್ಟ ಕೆಲಸಗಳು ಬಾಕಿ ಉಳಿದಿದ್ದು, ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಶೀಘ್ರದಲ್ಲೇ ಮುಕ್ತಗೊಳ್ಳಲಿದೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಪಾಲಿಕೆಯಿಂದ ಅನುಮೋದನೆ ನೀಡಲಾಗಿತ್ತು. 1 ವರ್ಷದಲ್ಲಿ ಕಾಮಗಾರಿಯನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಪ್ರೆಸ್ಟೀಜ್ ಟೆಕ್ ಪಾರ್ಕ್ ಒಳಗಿನಿಂದಲೇ ಹಾದು ಹೋಗುವ ಈ ಫ್ಲೈಓವರ್ ಬಹುತೇಕ ಮಳೆ ನೀರು ಕಾಲುವೆಯ ಬಫರ್ ವಲಯ ಸೇರಿ ಸಾರ್ವಜನಿಕ ರಸ್ತೆಯಲ್ಲಿ ನಿರ್ಮಾಣಗೊಂಡಿದೆ.
ಒಪ್ಪಂದದ ಪ್ರಕಾರ ಈ ಫ್ಲೈಓವರ್‌ನಲ್ಲಿ ಸಾರ್ವಜನಿಕರ ವಾಹನಗಳ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ಪೂರ್ವ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದ್ದಾರೆ.
ಟೆಕ್‌ಪಾರ್ಕ್‌ನ ಸುಮಾರು 5000 ಉದ್ಯೋಗಿಗಳಿಗೆ ಅನುಕೂಲ ಕಲ್ಪಿಸುವ ಜೊತೆಗೆ ಹೊರ ವರ್ತುಲ ರಸ್ತೆಯಿಂದ ಯಮಲೂರು ಮತ್ತು ಎಚ್‌ಎಎಲ್ ಏರ್‌ಪೋರ್ಟ್ ಕಡೆ ತೆರಳುವ ವಾಹನ ಸವಾರರಿಗೆ ಪರ್ಯಾಯ ಮಾರ್ಗವಾಗಲಿದೆ. ಕಾಡುಬೀಸನಹಳ್ಳಿ ಹಾಗೂ ಮಾರತ್ತಹಳ್ಳಿ ಬಳಿ ಭಾರಿ ಟ್ರಾಫಿಕ್ ಜಾಮ್ ಉಂಟಾಗುವ ಕಾರಣ ಪರ್ಯಾಯ ಮಾರ್ಗವಾಗಿ ಈ ಫ್ಲೈಓವರ್ ಹೆಚ್ಚು ಅನುಕೂಲವಾಗಲಿದೆ. ಈಗಾಗಲೇ ಬೆಳ್ಳಂದೂರು ಕೆರೆಯ ರಸ್ತೆಯನ್ನು ಅಗಲೀಕರಣ ಮಾಡಲಾಗಿದೆ ಎಂದು ಜಿಬಿಎ ಅಧಿಕಾರಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ